ಹನಿ ನೀರಿಗಾಗಿ ಪರಿತಪಿಸುತ್ತಿವೆ ಜೀವ
Team Udayavani, Apr 4, 2019, 9:58 AM IST
ಔರಾದ: ನೀರಿಗಾಗಿ ತಾಂಡಾ ನಿವಾಸಿಗಳು ಹಾಗೂ ಜಾನುವಾರುಗಳು ತಡಪಡಿಸುತ್ತಿರುವ ದೃಶ್ಯ
ಔರಾದ: ಬಿಸಿಲಿನ ತಾಪ ಹೆಚ್ಚಾಗುತ್ತಿದಂತೆ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಧೂಪತಮಗಾಂವ ಗ್ರಾಪಂ ವ್ಯಾಪ್ತಿಯ ಚಂದ್ರನಾಯ್ಕ ತಾಂಡಾದಲ್ಲಿ ಕಳೆದೆರಡು ವಾರಗಳಿಂದ ನೀರಿಗಾಗಿ ನಿವಾಸಿಗಳ ಪರದಾಟ ಪ್ರಾರಂಭವಾಗಿದೆ.
ಚಂದ್ರನಾಯ್ಕ ತಾಂಡಾದಲ್ಲಿ 12 ಕುಟುಂಬಗಳಿದ್ದು, 120 ಜನರು ಹಾಗೂ 200ಕ್ಕೂ ಹೆಚ್ಚು ಜಾನುವಾರುಗಳಿವೆ. ಈ ಜನರಿಗೆ ತಾಂಡಾದಲ್ಲಿದ್ದ ಒಂದೇ ಒಂದು ಕೊಳವೆ ಬಾವಿ ಇದ್ದು, ಇದೀಗ ಅದರ ನೀರೂ ಕೂಡ ಪಾತಾಳ ಕಂಡಿದೆ. ಇದರಿಂದ ಜನ-ಜಾನುವಾರುಗಳು ಹನಿ ನೀರಿಗಾಗಿ ಗುಟುರುತ್ತಿವೆ.
ಒಣಗಿದ ಜಲಮೂಲ: ಕಳೆದ ಹದಿನೈದು ದಿನಗಳ
ಹಿಂದೆ ಗ್ರಾಮದಲ್ಲಿನ ಏಕೈಕ ಕೊಳವೆಬಾವಿ ಒಣಗಿದೆ. ಇರುವ ಒಂದೇ ನೀರಿನ ಮೂಲ ಕೈಕೊಟ್ಟಿದ್ದರಿಂದ ನಿವಾಸಿಗಳು ಎರಡು ಕಿ.ಮೀ ದೂರದಲ್ಲಿರುವ ನಾಗುರ(ಬಿ) ಹಾಗೂ ಧೂಪತಮಗಾಂವ ಗ್ರಾಮದಿಂದ ಕಾಲ್ನಡಿಗೆ ಮೂಲಕ ನೀರು ತರುವ ದಯನೀಯ ಸ್ಥಿತಿ ನಿರ್ಮಾಣವಾಗಿದೆ. ಮನೆ ಮಾಡಿದ ಆತಂಕ: ಸದ್ಯ ನಿವಾಸಿಗಳು ಎರಡು ಕಿ.ಮೀ ದೂರದಿಂದ ನೀರು ತರುತ್ತಿದ್ದಾರೆ ನಿಜ. ಆದರೆ, ಜಾನುವಾರುಗಳಿಗೆ ನಿತ್ಯ ನೀರು ಹೇಗೆ ಪೂರೈಸಬೇಕು ಎನ್ನುವ ಆತಂಕ ಜನರಲ್ಲಿ ಮನೆ ಮಾಡಿದೆ.
ನೀರಿನ ಸಮಸ್ಯೆ ಬಗ್ಗೆ ಔರಾದ ಶಾಸಕ ಪ್ರಭು ಚವ್ಹಾಣ, ಧೂಪತಮಗಾಂವ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರಿಗೆ ಲಿಖಿತವಾಗಿ ಮನವಿ ಸಲ್ಲಿಸಿದರೂ ಯಾವೊಬ್ಬ ಅಧಿಕಾರಿಗಳು ಮುಂದೆ ಬಾರದಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಸರ್ಕಾರ ಬರ ಪೀಡಿತ ಪ್ರದೇಶದ ಜನ- ಜಾನುವಾರುಗಳಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಭೆ, ಸಮಾರಂಭಗಳಲ್ಲಿ ಅಧಿಕಾರಿಗಳು, ಜನನಾಯಕರು ಹೇಳುತ್ತಿದ್ದಾರೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಾಲೂಕು ಸೇರಿದಂತೆ ಜಿಲ್ಲಾ ಕೇಂದ್ರಸ್ಥಾನದಲ್ಲಿ ಸಭೆ ನಡೆಸಿ ಜನರಿಗೆ ಸಮಸ್ಯೆಯಾಗದಂತೆ ಕರ್ತವ್ಯ ನಿರ್ವಹಿಸಲು ಖಡಕ್ ಸಂದೇಶ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ. ಗ್ರಾಮದಲ್ಲಿರುವ ಒಂದೇ ಒಂದು ಕೊಳವೆ ಬಾವಿ ನೀರು ಒಣಗಿದೆ. ಹೀಗಾಗಿ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದು, ಈ ಕೂಡಲೇ ನೀರಿನ ಸಮಸ್ಯೆಗೆ ಮುಕ್ತಿ ನೀಡಬೇಕೆನ್ನುವುದು ತಾಂಡಾ ನಿವಾಸಿಗಳ ಒತ್ತಾಸೆಯಾಗಿದೆ.
ಕೊಳವೆಬಾವಿ ನೀರು ಒಣಗಿದೆ. ಅಧಿಕಾರಿಗಳು ಕೂಡಲೇ ತಾತ್ಕಾಲಿಕವಾಗಿ ತಾಂಡಾಕ್ಕೆ ನೀರು ಪೂರೈಸಲು ಮುಂದಾಗಬೇಕು. ಈ ಬಗ್ಗೆ ಹಿಂದೇಟು ಹಾಕಿದರೆ ವಾರದಲ್ಲಿ ನಾವುಗಳೇ ತಾಂಡಾ ಬಿಟ್ಟು ಬೇರೆ ಕಡೆಗೆ ವಲಸೆ ಹೊಗುತ್ತೇವೆ.
ಕಾಶಿನಾಥ ರಾಠೊಡ,
ತಾಂಡಾ ನಿವಾಸಿ
ನಾನೂ ನಾಲ್ಕು ದಿನಗಳ ಹಿಂದಷ್ಟೇ ಧೂಪತಮಗಾಂವ ಗ್ರಾಪಂ ಅಭಿವೃದ್ಧಿ ಅಧಿಕಾರಿಯಾಗಿ ಬಂದಿದ್ದೇನೆ. ಆದಷ್ಟು ಶೀಘ್ರ ನೀರಿನ ಸಮಸ್ಯೆ ಬಗೆಹರಿಸುವ ಮೂಲಕ ಜನರ ಸಮಸ್ಯೆಗೆ ಮುಕ್ತಿ ನೀಡುತ್ತೇನೆ.
ಶಿವಾನಂದ ಔರಾದೆ, ಗ್ರಾಪಂ ಅಭಿವೃದ್ಧಿ
ಅಧಿಕಾರಿ,ಧೂಪತಮಗಾಂವ
ರವೀಂದ್ರ ಮುಕ್ತೇದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.