ತಿಪ್ಪರಲಾಗ ಹಾಕಿದ್ರೂ ಮಂಡ್ಯ ಹಾಸನದಲ್ಲಿ ಜೆಡಿಎಸ್‌ ಗೆಲ್ಲಲ್ಲ

Team Udayavani, Apr 4, 2019, 12:28 PM IST

Udayavani Kannada Newspaper

ಚಿತ್ರದುರ್ಗ: ತಿಪ್ಪರಲಾಗ ಹಾಕಿದರೂ ಹಾಸನ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆಲುವು ಸಾಧಿಸುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ ಎನ್ನುವಂತಾಗಿದೆ ಜೆಡಿಎಸ್‌ ನವರ ಸ್ಥಿತಿ. ಸೋಲಿನ ಭೀತಿಯಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಪೇಪರ್‌, ಟಿವಿ ನೋಡುತ್ತಲೇ ಇಲ್ಲ. ಮಗನನ್ನು ಗೆಲ್ಲಿಸಿಕೊಳ್ಳಬೇಕೆಂದು ಒಂದಿಲ್ಲೊಂದು ನೆಪ ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಕುಮಾರಸ್ವಾಮಿ ಹಾಸನ, ಮಂಡ್ಯ ಬಿಟ್ಟು ಹೊರಗೆ ಹೋಗುತ್ತಲೇ ಇಲ್ಲ. ಹೊರಗೆ ಏನಾಗುತ್ತಿದೆ ಎಂಬುದನ್ನು ಒಮ್ಮೆ ತಿಳಿದುಕೊಳ್ಳಬೇಕು. ಚುನಾವಣೆ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ದೇವೇಗೌಡರ ಕುಟುಂಬ ಚುನಾವಣೆ ಬಂದಾಗ ಮಾತ್ರ ಕಣ್ಣೀರು ಹಾಕುತ್ತದೆ. ಚುನಾವಣೆ ನಂತರ ಜನರು ಕಣ್ಣೀರು ಹಾಕುವಂತೆ ಮಾಡುತ್ತಾರೆ. ಅವರಿಗೆ ಜನರು ಈ ಬಾರಿ ತಕ್ಕ ಪಾಠ ಕಲಿಸುತ್ತಾರೆ. ಅಲ್ಲದೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗುತ್ತದೆ ಎಂದೂ ಮಾತನಾಡಿಕೊಳ್ಳುತ್ತಿದ್ದಾರೆ ಎಂದರು. ಮಂಡ್ಯದಲ್ಲಿ ಸುಮಲತಾ ಸೂಕ್ತ ಅಭ್ಯರ್ಥಿಯಾಗಿದ್ದಾರೆ. ಕುಟುಂಬ ರಾಜಕಾರಣವನ್ನು ದೂರ ಇಡಬೇಕು ಎಂದು ಅವರಿಗೆ ಬೆಂಬಲ ನೀಡಿದ್ದೇವೆ ಎಂದು ಶ್ರೀರಾಮುಲು ಸಮರ್ಥಿಸಿಕೊಂಡರು.

ಹಾಸನ-ಮಂಡ್ಯದಲ್ಲೇ ಭ್ರಷ್ಟಾಚಾರ ಜಾಸ್ತಿ: ರಾಜ್ಯದೆಲ್ಲೆಡೆ ಐಟಿ ದಾಳಿಯಾಗುತ್ತಿರುವುದಕ್ಕೆ ಅದಕ್ಕೆ ಚುನಾವಣೆ ಕಾರಣವೇ ವಿನಃ ಬೇರೆ ಯಾರೂ ಅಲ್ಲ. ಹಾಸನ, ಮಂಡ್ಯ ಜಾಸ್ತಿ ದಾಳಿಯಾಗುತ್ತಿದೆ ಎಂದರೆ ಅಲ್ಲಿ ಭ್ರಷ್ಟಾಚಾರದ ಹಣ ಇದೆ ಎಂದೇ ಅರ್ಥ ಎಂದು ಕುಟುಕಿದರು.

ಸಚಿವ ಸಿ.ಎಸ್‌. ಪುಟ್ಟರಾಜು ಭ್ರಷ್ಟ, ನೀತಿಗೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ಇವರ ಮೇಲೆ ಸ್ಪೆಷಲ್‌ ರೈಡ್‌ ಆಗುತ್ತಿದೆಯೇ ಎಂದು ಪ್ರಶ್ನಿಸಿದ ಶ್ರೀರಾಮುಲು, ರೈಡ್‌ ಆದರೆ ಇವರಿಗೆ ಏಕೆ ಭಯ, ಬಾಯಿ ಚಪ್ಪರಿಸಿಕೊಳ್ಳಲು ಮಾತನಾಡಿ ನಾಲಿಗೆಯನ್ನು ಏಕೆ ಹೊಲಸು ಮಾಡಿಕೊಳ್ಳುತ್ತೀರಿ ಎಂದು ಲೇವಡಿ ಮಾಡಿದರು. ನಮ್ಮ ಮುಖ ನೋಡಿ ಓಟು ಹಾಕೋದು ಬೇಡ, ಮೋದಿ ಮುಖ ನೋಡಿ ಮತ ಹಾಕಿ. ಮೋದಿ ವಿಶ್ವ ನಾಯಕರಾಗಿದ್ದು, ಭಾರತ ಅಂದರೆ ರಾಹುಲ್‌ ಗಾಂಧಿ ಅನ್ನಲ್ಲ, ಮೋದಿ ಎನ್ನುತ್ತಾರೆ ಎಂದರು.

ಟಾಪ್ ನ್ಯೂಸ್

S.Korea: Plane skids on runway and hits wall: Watch video here

S.Korea: ರನ್‌ ವೇಯಲ್ಲಿ ಸ್ಕಿಡ್‌ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

3-plane-crash

Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

2-bbk11

BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrest-woman

Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1-gite

Udupi: ಇಂದು ಗೀತೋತ್ಸವದ ಮಂಗಳ್ಳೋತ್ಸವ

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

S.Korea: Plane skids on runway and hits wall: Watch video here

S.Korea: ರನ್‌ ವೇಯಲ್ಲಿ ಸ್ಕಿಡ್‌ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

3-plane-crash

Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.