ಕಾಮರೂಪಿ ರಂಗಸ್ಥಳದ ರಥ


Team Udayavani, Apr 5, 2019, 6:00 AM IST

d-7

ಪುರಾಣದ ಪುಟಗಳನ್ನು ತೆರೆದಾಗ ರಥ, ಮಹಾರಥ, ಮಣಿರಥ ಮುಂತಾದ ರಥಗಳು ನಮ್ಮ ಕಣ್ಣಿಗೆ ಬೀಳುತ್ತವೆ. ವೈವಿಧ್ಯಮಯವಾದ ಈ ರಥಗಳಿಗೆ ಭಿನ್ನ ಭಿನ್ನ ಹೆಸರುಗಳೂ ಇದ್ದವು. ಕೇವಲ ಪ್ರಯಾಣಕ್ಕಾಗಿರುವ ವಾಹನ ಪುಷ್ಯರಥ. ಅನೇಕ ಚಕ್ರಗಳುಳ್ಳ ಯುದ್ಧಕ್ಕಾಗಿ ಬಳಸುವ ರಥದ ಹೆಸರು ಸ್ಯಂದನ. ಎರಡು ಹುಲಿಯ ಚರ್ಮಗಳನ್ನು ಹೊದಿಸಿರುವ ರಥಕ್ಕೆ ದ್ವೆ„ಪರಥವೆಂದು ಹೆಸರು. ಬಿಳಿಯ ಕಂಬಳಿ ಹೊದಿಸಿದ ರಥದ ಹೆಸರು ಕಾಂಬಳ. ಬಟ್ಟೆಯಿಂದ ಹೊದಿಸಲ್ಪಟ್ಟ ರಥ ವಾಸ್ತ್ರ. ಮರದ ಹೊದಿಕೆಯುಳ್ಳ ಪೆಟ್ಟಿಗೆಯಂಥ ರಥ ದಾರವ. ಎಂಟು ಕುದುರೆಗಳನ್ನು ಕಟ್ಟುವ ದೊಡ್ಡ ರಥದ ಹೆಸರು ವೈನೀತಕ.

ಗುಂಬ, ಚಕ್ರಗಳು, ಮೂತಿ, ನೊಗ, ಈಚುಮರ, ಕಡಾಣಿ, ಕಡೆಗೂಟಗಳು ಸೇರಿ ಒಂದು ರಥ ಸಿದ್ಧವಾಗುತ್ತದೆ. ಇವೆಲ್ಲಕ್ಕಿಂತ ಭಿನ್ನವಾದ ವಿಶಿಷ್ಟವಾದ, ಅಪೂರ್ವವಾದ ಕಾಮರೂಪಿ ರಥವೆ ರಂಗಸ್ಥಳದ ರಥ. ಮೂರಡಿ ವಿಸ್ತೀರ್ಣದ ಒಂದು ಚೌಕಾಕೃತಿಯ ಮರದ ದಪ್ಪ ಹಲಗೆ.ಅದಕ್ಕೆ ನಾಲ್ಕು ಮರದ ಕಾಲುಗಳು.ಇದರ ಎತ್ತರವೂ ಮೂರಡಿ ಆಗಬಹುದಷ್ಟೆ. ನಾಲ್ಕು ಮರದ ಚಕ್ರಗಳು. ಇದು ಹಿಮ್ಮೇಳದವರ ಆಸನದ ಮುಂದಿರುವ ಪೀಠ. ಇದನ್ನು ಯಕ್ಷಗಾನದ ಪರಿಭಾಷೆಯಲ್ಲಿ “ರಥ ಎಂದು ಹೇಳುತ್ತಾರೆ. ಈ ರಥ ನಿರ್ಮಾಣಕ್ಕೆ ಬೇಕಾದ ಸಮಯ ಕೇವಲ ಹತ್ತು ನಿಮಿಷ. ನಾಲ್ಕು ಚಕ್ರಗಳನ್ನು, ನಾಲ್ಕು ಕಾಲುಗಳನ್ನು ಭದ್ರಗೊಳಿಸುವ ಕಡಾಣಿ. ಬೇರೆ-ಬೇರೆಯಾಗಿರುವ ಈ ಮರದ ಸಾಧನಗಳನ್ನು ಬಿಗಿದು ರಥವಾಗಿಸಲು ಬೇಕಾದದ್ದು ಹತ್ತಿಪ್ಪತ್ತು ಅಡಿಗಳ ಉದ್ದದ ಹಗ್ಗ. ಇದು ಕೂಡಾ ಹತ್ತಿಯ ಬಿಗಿ ದಾರಗಳನ್ನು ಹೆಣೆದು ರಚಿಸಿದ ದಪ್ಪದ ಹಗ್ಗ. ಹಗ್ಗದಿಂದ ರಥದ ಆಕೃತಿ ಹೊಸೆಯಲು ಅನುಕೂಲವಾಗುವಂತೆ ನಿಯತ ಜಾಗಗಳಲ್ಲಿ ಸಣ್ಣ ಸಣ್ಣ ರಂಧ್ರಗಳು. ಚಕ್ರಗಳನ್ನು ಕ್ರಮವಾಗಿ ಇರಿಸಿ, ಆಧಾರಕ್ಕಿರುವ ನಾಲ್ಕು ಮರದ ತುಂಡುಗಳನ್ನು ಜೋಡಿಸಿ ಕಾಲುಗಳನ್ನು ಇರಿಸಿ ಮೇಲೆ ಹಲಗೆಯನ್ನು ಇಟ್ಟು ರಂಧ್ರಗಳಲ್ಲಿ ಹಗ್ಗ ತೂರಿ ವಿಧಿಯಂತೆ ಎಳೆದು ಕಟ್ಟಿದರೆ ಸಾಕು ಬಾಂಬು ಬಿದ್ದರೂ ಅದು ಸಡಿಲವಾಗದು. ಸಂಜೆ ಕಟ್ಟುವುದು, ಬೆಳಗ್ಗೆ ಬಿಚ್ಚುವುದು. ಯಾವ ಕಲಾವಿದನ ಕಲ್ಪನೆಯಲ್ಲಿ ಈ ರಥ ಮೂಡಿತೋ ಗೊತ್ತಿಲ್ಲ.

ರಾತ್ರಿಯಿಂದ ಬೆಳಗ್ಗಿನ ತನಕ ಈ ರಥ ರಥವಾಗಿಯೇ ಉಳಿಯುವುದಿಲ್ಲ. ಅದು ಸಾಂದರ್ಭಿಕವಾಗಿ ಅರಸನ ಕೋಟೆಯಾಗಬಲ್ಲುದು. ಉತ್ತುಂಗ ಹಿಮಾಲಯವಾಗಬಲ್ಲುದು. ಹನುಮಂತನ ಹೆಗಲಾಗಬಹುದು. ಬಂಗಾರದ ಸಿಂಹಾಸನ ಆಗಬಲ್ಲುದು. ಮಹಾರಾಣಿಯ ಹಂಸತೂಲಿಕಾತಲ್ಪವೂ ಆಗಬಲ್ಲುದು. ಯೋಗಿಯ ದರ್ಭಾಸನ, ದೇವರ ಪೀಠ, ಕಲ್ಲು-ಬಂಡೆ, ದೇವಸ್ಥಾನದ ಅಂಗಣ, ಇಂದ್ರನ ಐರಾವತ, ವಿಷ್ಣುವಿನ ಗರುಡ, ಬ್ರಹ್ಮನ ಹಂಸ, ಶಿವನ ನಂದಿ ಆಗುವ ಈ ರಥ ಅವಶ್ಯ ಬಿದ್ದರೆ ವಿಮಾನವೂ ಆಗಬಹುದು. ಸ್ವರ್ಗ, ಮರ್ತ್ಯ, ಪಾತಾಳ ಲೋಕಗಳ ದೊರೆಗಳಿಗೆ ಅದೇ ಸಿಂಹವಿಷ್ಟರ. ಅದು ಯಾವುದಾಗಬೇಕೆಂದು ವೇಷಧಾರಿಗಳು ಹೇಳುತ್ತಾರೋ ಆ ಕ್ಷಣಕ್ಕೆ ಅದು ಅದೇ ಆಗಿಬಿಡುತ್ತದೆ. ಅಂತಹ ಕಾಮರೂಪಿ ರಥವಿದು.

ಮೇಳಗಳು ವಾಣಿಜ್ಯ ಕೇಂದ್ರಿತವಾದಾಗ ಅಲಂಕಾರಗಳು ಪ್ರಧಾನ ಪಾತ್ರ ವಹಿಸಿದವು. ಆದುದರಿಂದ ಈ ರಥದ ಸಾಂಕೇತಿಕತೆಯನ್ನು ಅರಿಯದೆ ದೊಡ್ಡ ದೊಡ್ಡ ಸಿಂಹಾಸನಗಳು ರಂಗಸ್ಥಳದ ಮೇಲೇರಿದವು. ಪ್ರಸಂಗಗಳಲ್ಲಿರುವ ಚತುರ್ದಶ ಭುವನಗಳ ಸಮಗ್ರ ಸಂಗತಿಗಳನ್ನು ರಂಗಸ್ಥಳವೆಂಬ ನಾಲ್ಕು ಕಂಬಗಳ ಚಪ್ಪರದ ನಡುವೆ ತರಬೇಕಾದ ಈ ಕಲೆಗೆ ಎಷ್ಟು ನೈಜ ದೃಶ್ಯ ತೋರಿಸಲು ಸಾಧ್ಯ? ಆದುದರಿಂದ ಹೊಸತನ್ನು ತರಲು ಹೊರಟಿರುವ ಯಾರೇ ಆಗಲೀ ಕಲಾಸ್ವರೂಪವನ್ನು ಮತ್ತು ಕಲಾತ್ಮಕತೆಯನ್ನು ತಿಳಿದಿರಬೇಕು. ಯಕ್ಷಗಾನ ಸಾಂಕೇತಿಕ ರಂಗಭೂಮಿ, ನೈಜ ರಂಗಭೂಮಿಯಲ್ಲ.

ಮೊದಲೆಲ್ಲಾ ಈ ರಥವನ್ನು ಅಗತ್ಯಕ್ಕೆ ತಕ್ಕಂತೆ ರಂಗಸ್ಥಳದ ಯಾವುದೇ ಭಾಗಕ್ಕೆ ಬೇಕಾದರೂ ತರುತ್ತಿದ್ದರಂತೆ. ಅಭಿಮನ್ಯು, ಶಬರ ಇತ್ಯಾದಿ ಪಾತ್ರಗಳು ಪ್ರವೇಶ ದ್ವಾರದಲ್ಲಿ ರಥದ ಮೇಲೆ ನಾಲ್ಕನೇ ಹೆಜ್ಜೆ ಕುಣಿದು ಅನಂತರವೇ ರಂಗಪ್ರವೇಶ ಮಾಡುತ್ತಿದ್ದರಂತೆ. ಕರ್ಣಾರ್ಜುನ ಕಾಳಗದಲ್ಲಿ ಅರ್ಜುನನ ಬಾಣಪ್ರಯೋಗದಿಂದ ಹಾರುವ ಕರ್ಣನ ರಥ, ಕರ್ಣನ ಬಾಣಪ್ರಯೋಗದಿಂದ ಜಾರುವ ಅರ್ಜುನನ ರಥವೂ ಆಗಿ ಈ ರಂಗಸ್ಥಳದ ರಥವೇ ಉಪಯೋಗಿಸಲ್ಪಟ್ಟು, ಕರ್ಣಾರ್ಜುನರು ಈ ರಥವನ್ನೇರಿಯೇ ಬಾಣಪ್ರಯೋಗ ಮಾಡುತ್ತಾ ವಿಶಿಷ್ಟ ದೃಶ್ಯ ನಿರ್ಮಾಣ ಮಾಡುತ್ತಿದ್ದರಂತೆ.

ಕಟೀಲು ಮೇಳಗಳಲ್ಲಿ, ಉಡುಪಿಯ ಯಕ್ಷಗಾನ ಕಲಾಕೇಂದ್ರದಲ್ಲಿ, ಈ ರಥದ ಬಳಕೆ ಇದೆ. ಸಾಲಿಗ್ರಾಮ ಮಕ್ಕಳ ಮೇಳದ ಯಕ್ಷರು ಈ ರಥವನ್ನೇರಿಯೇ ವಿದೇಶದ ಜೈತ್ರಯಾತ್ರೆ ಮಾಡಿ ಬಂದಿದ್ದಾರೆ. ಈ ರಥವನ್ನು ಕಟ್ಟುವ ಬಿಚ್ಚುವ ಕಲೆಯನ್ನು ಮತ್ತು ಇದರೊಳಗಿರುವ ಪರಿಕರಗಳನ್ನು ಕಂಡು ಅಮೆರಿಕದ ಕಲಾರಸಿಕರು ಆಶ್ವರ್ಯ ಪಟ್ಟಿದ್ದಾರಂತೆ. ಆದರೆ ನಮ್ಮ ಕಲಾಕ್ಷೇತ್ರದ ಪ್ರಭೃತಿಗಳಿಗೆ ಈ ರಥವೊಂದು ಆಶ್ಚರ್ಯವಾಗಿ ಕಾಣದ್ದು ದಿಟಕ್ಕೂ ಆಶ್ಚರ್ಯ.

ರಾಜಕುಮಾರಿಯರಿಗೆ ಮಂಚವಾಗುವ, ಸಾರ್ವಭೌಮರ ಸಭಾಸ್ಥಾನದಲ್ಲಿ ಸ್ವರ್ಣ ಸಿಂಹಾಸನವಾಗುವ, ಯುದ್ಧ ಕ್ಷೇತ್ರದಲ್ಲಿ ಯೋಧರ ವಾಹನವಾಗುವ, ಭಾನು, ಭುವಿ, ಪಾತಾಳಗಳಲ್ಲಿ ಸಂಚರಿಸುವ ವಾಹನಗಳಾಗುವ, ರಂಗಸ್ಥಳದ ಸರ್ವಾರ್ಥವಾಗುವ ಮರದ ತುಂಡುಗಳ ಈ ರಥ ಯಕ್ಷಗಾನದ ಒಂದು ಅಪೂರ್ವ, ವಿಶಿಷ್ಟ ಕಲಾಗಾರಿಕೆ.

ತಾರಾನಾಥ ವರ್ಕಾಡಿ

ಟಾಪ್ ನ್ಯೂಸ್

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

INDvAUS: Is captain Rohit Sharma standing against to Shami?; Aussie tour difficult for pacer!

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?;‌ ವೇಗಿಗೆ ಆಸೀಸ್‌ ಪ್ರವಾಸ ಕಷ್ಟ!

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.