![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Apr 5, 2019, 6:30 AM IST
ಕುಂದಾಪುರ: ಜರ್ಮನಿಯಲ್ಲಿ ದುಷ್ಕರ್ಮಿಯಿಂದ ಹತ್ಯೆಗೀಡಾದ ಸಾಫ್ಟ್ ವೇರ್ ಎಂಜಿನಿಯರ್ ಪ್ರಶಾಂತ್ ಬಸ್ರೂರು ಅವರ ಅಂತ್ಯಕ್ರಿಯೆಯು ಗುರುವಾರ ಆಗ್ಸ್‌ಬರ್ಗ್‌ನಲ್ಲಿ ದಕ್ಷಿಣ ಭಾರತೀಯ ಸಂಪ್ರದಾಯದಂತೆ ನೆರವೇರಿತು.
ಪ್ರಶಾಂತ್ ಅವರ ತಾಯಿ ವಿನಯಾ, ಮಾವ ಡಾ| ಚಂದ್ರಮೌಳಿ ಸಿದ್ದಾಪುರ, ಅತ್ತೆ ವಿದ್ಯಾ, ಮಕ್ಕಳು, ಸ್ನೇಹಿತರು ಭಾಗಿಯಾದರು. ಪ್ರಶಾಂತ್ ಅವರ ಪತ್ನಿ ಸ್ಮಿತಾ ಅವರು ಚೇತರಿಸಿಕೊಳ್ಳುತ್ತಿದ್ದು, 3-4 ವಾರಗಳ ಕಾಲ ವಿಶ್ರಾಂತಿ ಬೇಕಿದೆ ಎಂದು ವೈದ್ಯರು ತಿಳಿಸಿದ್ದರಾರೆ.
ನೆರವಿನ ಹಸ್ತ: ಅವರ ಸ್ನೇಹಿತರ ಬಳಗ, ಬಂಧುಗಳು, ಹಿತೈಷಿಗಳಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದ್ದು, “ಗೋ ಫಂಡ್ ಮಿ’ ಎನ್ನುವ ಕ್ರೌಡ್ ಫಂಡಿಂಗ್ ವೆಬ್‌ಸೈಟ್ ಮೂಲಕ 455 ಮಂದಿಯಿಂದ ಕೇವಲ ಮೂರೇ ದಿನದಲ್ಲಿ 23 (30,548 ಯೂರೋ) ಲಕ್ಷ ರೂ. ಸಂಗ್ರಹವಾಗಿದೆ. ಈ ಅಭಿಯಾನವು ಈಗಿನ ಟ್ರೆಂಡಿಂಗ್ ಪಟ್ಟಿಯಲ್ಲಿಯೂ ಕೂಡ ಸ್ಥಾನ ಪಡೆದಿದೆ.
You seem to have an Ad Blocker on.
To continue reading, please turn it off or whitelist Udayavani.