2 ದಿನದಲ್ಲಿ 13 ಬಾರಿ ಕಾರು ತಪಾಸಣೆ: ಸಿಎಂ
ಇದು ಚುನಾವಣೆಯೋ ತಪಾಸಣೆಯೋ; ಚುನಾವಣೆ ಆಯೋಗದ ವಿರುದ್ಧ ಸಿಎಂ ಗರಂ
Team Udayavani, Apr 5, 2019, 6:05 AM IST
ಕಾರವಾರ: “ಬುಧವಾರದಿಂದ ಕಾರಿನಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಎರಡು ದಿನದಲ್ಲಿ ಒಟ್ಟು 13 ಸಲ ನನ್ನ ಕಾರು ತಪಾಸಣೆ ಮಾಡಲಾಗಿದೆ’ಎಂದು ಸಿಎಂ ಕುಮಾರಸ್ವಾಮಿ ಚುನಾವಣಾ ಆಯೋಗದ ವಿರುದ್ಧ ಅಸಮಾಧಾನ ಹೊರಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕನ್ನಡದಲ್ಲೇ ಗೋಕರ್ಣದಿಂದ ಕಾರವಾರ ತಲುಪುವ ವೇಳೆಗೆ ಎರಡು ಸಲ ವಾಹನ ತಪಾಸಣೆ ಮಾಡಲಾಗಿದೆ. ಬೆಂಬಲಿಗರ ವಾಹನಗಳನ್ನು ಸಹ ತಪಾಸಣೆ ಮಾಡಲಾಗುತ್ತಿದೆ. ಮಂಡ್ಯದಲ್ಲಿ ಎದುರಾಳಿಗಳ ವಾಹನಗಳಲ್ಲಿ ಏನು ಸಾಗಿಸಬೇಕೋ ಅದನ್ನು ಆರಾಮದಿಂದ ಸಾಗಿಸುತ್ತಲೇ ಇದ್ದಾರೆ. ಹಣ ಎಲ್ಲಿ ಸೇರಬೇಕು ಅಲ್ಲಿ ಸೇರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮನ್ನು ಗುರಿ ಮಾಡಿ ತಪಾಸಣೆ ಮಾಡುವುದು ಎಷ್ಟು ಸರಿ? ಇದನ್ನು ಚುನಾವಣಾ ಆಯೋಗ ಪರಿಶೀಲಿಸಬೇಕು. ಈ ತಾರತಮ್ಯ ಯಾಕೆ? ಅಧಿ ಕಾರಿಗಳು ಚುನಾವಣಾ ಆಯೋಗದ ನಿರ್ದೇಶನವಿದೆ ಎಂದು ಹೇಳುತ್ತಿದ್ದಾರೆ. ನಾನು ಸಹ ತಪಾಸಣೆ ಮಾಡಿಕೊಳ್ಳಿ ಎನ್ನುತ್ತಿದ್ದೇನೆ. ಆದರೆ ಎರಡು ದಿನದಲ್ಲಿ 13 ಕಡೆ ತಪಾಸಣೆ ಮಾಡಲಾಗಿದೆ ಯಾವುದೂ ಅತಿಯಾಗಬಾರದು ಎಂದರು.
ಬಾಲಕೃಷ್ಣ ಏನು ಹೇಳ್ತಾರೆ ಈಗ?: ಐಟಿ ಅಧಿಕಾರಿ ಮೇಲೆ ನಡೆದ ಸಿಬಿಐ ದಾಳಿಯಲ್ಲಿ 15 ಲಕ್ಷ ನಗದು ಮೊದಲು ಸಿಕ್ಕಿದೆ. ನಂತರ ಅಧಿ ಕಾರಿಯ ಮನೆಯಲ್ಲಿ 1 ಕೋಟಿಗೂ ಹೆಚ್ಚಿನ ಹಣ ಸಿಕ್ಕಿದೆ. ಇದು ಐಟಿ ನಿರ್ದೇಶಕ ಬಾಲಕೃಷ್ಣ ಅವರ ಕೆಳಗಿನ ಅಧಿ ಕಾರಿಗಳ ಕತೆ. ಇಂಥ ಭ್ರಷ್ಟರನ್ನು ಇಟ್ಟುಕೊಂಡು ಐಟಿ ನಿರ್ದೇಶಕ ಕಾಂಗ್ರೆಸ್-ಜೆಡಿಎಸ್ ನಾಯಕರು ಮತ್ತು ಆಪ್ತರ ಮನೆಯ ಮೇಲೆ ದಾಳಿ ಮಾಡಿಸುತ್ತಾರೆ. ಮಂಡ್ಯ, ಹಾಸನದ ಗುತ್ತಿಗೆದಾರರ ಮೇಲೆ ದಾಳಿ ಮಾಡಲಾಗುತ್ತದೆ. ಉಳಿದ ಜಿಲ್ಲೆಗಳಲ್ಲಿ ಗುತ್ತಿಗೆದಾರರು ಇಲ್ಲವೇ? ಬಿಜೆಪಿ ನಾಯಕರ ಮನೆಗಳು ಇವರಿಗೆ ಕಾಣುವುದಿಲ್ಲವೇ? ಎಲ್ಲವನ್ನೂ ಜನತೆ ನೋಡುತ್ತಿದ್ದಾರೆ. ಇದಕ್ಕೆ ಜನರೇ ಐಟಿ ಅಧಿಕಾರಿಗಳಿಗೆ ಉತ್ತರ ಕೊಡುವ ಸಮಯ ಬರಬಹುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.