ಕಾಸರಗೋಡಿನ ಜನತೆ ಹೃದಯವೈಶಾಲ್ಯತೆ ಅಪಾರ: ಉಣ್ಣಿತ್ತಾನ್‌


Team Udayavani, Apr 5, 2019, 6:30 AM IST

unnitan

ಪೆರ್ಲ: ಎಣ್ಮಕಜೆ ಪಂಚಾಯತ್‌ ಯು.ಡಿಎಫ್‌. ಸಮಾವೇಶ ಕೆಬಿಎಚ್‌ ಕಾಂಪ್ಲೆಕ್ಸ್‌ನಲ್ಲಿ ಜರಗಿತು. ಸಮಾವೇಶವನ್ನು ಉದ್ಘಾಟಿಸಿದ ಕೆಪಿಸಿಸಿ ಕಾರ್ಯಕಾರಿ ಸದಸ್ಯ, ನ್ಯಾಯಾವಾದಿ ಸಿ.ಕೆ.ಶ್ರೀಧರನ್‌ ಅವರು ಕೇರಳದ ಸಮಸ್ತ ಅಭಿವೃದ್ಧಿ ಯುಡಿಎಫ್‌ನಿಂದ ಮಾತ್ರ ಸಾಧ್ಯ. ಕೇರಳದ ಜನತೆ ಬುದ್ಧಿಜೀವಿ, ವಿದ್ಯಾವಂತರಾಗಿದ್ದು ಇಲ್ಲಿ ಯಾವುದೇ ಅಲೆ ತರಂಗಗಳೂ ಇಲ್ಲ. ಇಲ್ಲಿ ಎಲ್‌ಡಿಎಫ್‌ ಮತ್ತು ಯುಡಿಎಫ್‌ನ ನಡುವೆ ನೇರ ಸ್ಪರ್ಧೆಯಾಗಿದೆ.

ಕೇರಳದ ಅಭಿವೃದ್ಧಿ ಜೊತೆಗೆ ಫ್ಯಾಸಿಸಂ ಶಕ್ತಿಗೆದುರಾಗಿ, ಕೋಮುವಾದಕ್ಕೆ , ಕೊಲೆ ರಾಜಕೀಯಕ್ಕೆದುರಾಗಿ ನಾವೆಲ್ಲ ಒಮ್ಮತದಿಂದ ಯುಡಿಎಫ್‌ಗಾಗಿ ಕೆಲಸಮಾಡಬೇಕಾಗಿದೆ ಎಂದು ಹೇಳಿದರು.

ಎಲ್‌ಡಿಎಫ್‌ ಅಭ್ಯರ್ಥಿ ರಾಜ್‌ಮೋಹನ್‌ ಉಣ್ಣಿತ್ತಾನ್‌ ಕನ್ನಡದಲ್ಲಿ ತಮ್ಮ ಮಾತನ್ನು ಆರಂಭಿಸಿ ಕನ್ನಡದಲ್ಲೇ ತಮ್ಮ ಪರಿಚಯವನ್ನು ಮಾಡಿಕೊಂಡರು. ನಾನು ಕಾಸರಗೋಡಿನ ಬಗ್ಗೆ ಮಾತನಾಡಬೇಕೆಂದರೆ ಹೆಮ್ಮೆಯಾಗುತ್ತೆ. ನಾನು ಚಿತ್ರರಂಗದಲ್ಲಿ ಸುಮಾರು 20 ಮಲಯಾಳಂ ಚಿತ್ರಗಳಲ್ಲಿ ನಟಿಸುವ ಮೂಲಕ ಕಲೆಯ ಬಗ್ಗೆ ನನಗೆ ಅಪಾರವಾದ ಅಭಿಮಾನವಿದೆ. ಇಲ್ಲಿ ಹಲವಾರು ಸಮಸ್ಯೆಗಳಿಗೆ ಯುಡಿಎಫ್‌ ಸಮರ್ಪಕವಾಗಿ ಪ್ರತಿಕ್ರಿಯೆ ನೀಡುತ್ತಿದ್ದು ದಿ| ಅಬ್ದುಲ್‌ ರಜಾಕ್‌ ಅವರ ಮೂಲಕ ಗ್ರಾಮೀಣ ಅಭಿವೃದ್ಧಿಯನ್ನು ಕಂಡುಕೊಂಡಿದ್ದೇವೆ. ಅವರ ಅಗಲಿಕೆ ನಮಗೆ ತೀವ್ರ ನಷ್ಟವೆಂದೂ ಈ ಸಂದರ್ಭದಲ್ಲಿ ಅವರನ್ನು ನೆನಪಿಸಬೇಕಾದ ಅಗತ್ಯವಿದೆ ಎಂದರು.

ಹಿಂದು, ಕ್ರೈಸ್ತ, ಮುಸ್ಲಿಂ ಯಾವುದೇ ಭೇದವಿಲ್ಲದೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ರೀತಿ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತವಾಗಿ ನೆರವು ನೀಡುವಲ್ಲಿ ನಮ್ಮ ಐಕ್ಯರಂಗ ಸಾಧನೆ ಮಹತ್ತರವಾದುದು.
ಎಲ್ಲ ಧರ್ಮದವರೂ ಪವಿತ್ರವೆಂದು ಗೌರವಯುತ ಸ್ಥಾನದಲ್ಲಿ, ವಿದೇಶಿಯನ್ನರೂ ಕೂಡಾ ಆರಾಧಿಸುವ ಕ್ಷೇತ್ರ ಶಬರಿಮಲೆ. ಅಂತಹ ಶಬರಿಮಲೆ ಅಯ್ಯಪ್ಪ ಸ್ವಾಮಿ ಅಖಂಡ ಬ್ರಹ್ಮಚಾರಿಯಾಗಿದ್ದು ಅಲ್ಲಿನ ಆಚಾರ ವಿಚಾರವನ್ನು ಉಳಿಸುವುದು ಕೂಡ ಐಕ್ಯ ರಂಗದ ಶ್ಲಾಘನೀಯ ಕೆಲಸ.

ಪ್ರಬುದ್ಧತೆಯ ಮತದಾರರಿರುವ ವಿದ್ಯಾ ವಂತರಿರುವ ಕಾಸರ ಗೋಡು ಕ್ಷೇತ್ರದಲ್ಲಿ ನಾನು ಸ್ಪರ್ಧಿಸುತ್ತಿದ್ದು ಇಲ್ಲಿನ ಜನತೆಯ ಸಮಸ್ಯೆಗಳನ್ನು ದಿಲ್ಲಿಯಲ್ಲಿ ಪ್ರತಿಧ್ವನಿಸುವ ಸಲುವಾಗಿ, ಕಾಸರಗೋಡನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ನನ್ನನ್ನು ಬಹುಮತದಿಂದ ಗೆಲ್ಲಿಸುವ ಸಲುವಾಗಿ ಎಲ್ಲ ಕಾರ್ಯಕರ್ತರು ಶ್ರಮವಹಿಸಬೇಕು. ಶಾಂತಿಯುತ ಕೇರಳಕ್ಕಾಗಿ ಯುಡಿಎಫ್‌ನ್ನು ಗೆಲ್ಲಿಸಬೇಕಾಗಿದೆ ಎಂದು ರಾಜ್‌ ಮೋಹನ್‌ ಉಣ್ಣಿತ್ತಾನ್‌ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.

ಬಿ.ಎಸ್‌. ಗಾಂಭೀರ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯುಡಿಎಫ್‌ ಜಿಲ್ಲಾ ಸಂಚಾಲಕ ಎಂ.ಸಿ. ಕಮರುದ್ದೀನ್‌, ಆಶ್ರಫ್‌ ಆಲಿ, ಮಂಜುನಾಥ ಆಳ್ವ, ಎಂ.ಅಬ್ಟಾಸ್‌, ಸೋಮಶೇಖರ್‌ ಜೆ.ಎಸ್‌, ಪಿ.ವಿ. ಸುರೇಶ್‌, ಆಶ್ರಫ್‌ ಕಾರ್ಲೆ, ಹಮೀದ್‌ ಆಲಿ, ಎಣ್ಮಕಜೆ ಪಂಚಾಯತ್‌ ಅಧ್ಯಕ್ಷೆ ಶಾರದಾ ವೈ, ಆಯಿಷಾ ಎ.ಎ, ಸಿದ್ದೀಕ್‌ ಖಂಡಿಗೆ, ಸಿದ್ದೀಕ್‌ ವಳಮೊಗರು, ಅಬ್ದುಲ್‌ ರಹಿಮಾನ್‌, ವಿಲ್‌ಫ್ರೆಡ್‌ ಡಿ’ಸೋಜ, ಎ.ಕೆ. ಶೆರೀಫ್‌, ಐತ್ತಪ್ಪ ಕುಲಾಲ್‌, ಆಮು ಅಡ್ಕಸ್ಥಳ, ಗೀತಾ ಎಂ, ಪುಷ್ಪಾ, ಜಯಶ್ರೀ ಕುಲಾಲ್‌, ನವೀನ್‌ ನಾಯಕ್‌, ಎಸ್‌ ಅಬ್ದುಲ್ಲಾ ಉಪಸ್ಥಿತರಿದ್ದರು. ಪಿ ಅಬೂಬಕ್ಕರ್‌ ಸ್ವಾಗತಿಸಿ, ರವೀಂದ್ರನಾಥ ನಾಯಕ್‌ ವಂದಿಸಿದರು.

ನಂತರ ನಡೆದ ಚುನಾವಣೆ ಸಮಿತಿ ರೂಪೀಕರಣದಲ್ಲಿ ಚೆಯರ್‌ವೆುàನ್‌ ಆಗಿ ಬಿ.ಅಬೂಬಕ್ಕರ್‌, ಕನ್ವೀನರ್‌ ಆಗಿ ಬಿ.ಯಸ್‌.ಗಾಂಭೀರರನ್ನೊಳಗೊಂಡ 501 ಮಂದಿ ಸದಸ್ಯರ ಸಮಿತಿಯನ್ನು ರಚಿಸಲಾಯಿತು.

ಕೊಡುಗೆ ಅಪಾರ
ಕಾಸರಗೋಡಿನ ಜನತೆ ಹೃದಯವೈಶಾಲ್ಯತೆ ಅಪಾರವಾದುದು. ಕಲೆ, ಸಂಸ್ಕೃತಿ,ಧಾರ್ಮಿ ಕತೆ, ಸಾಮರಸ್ಯೆಕ್ಕೆ, ಭಾಷಾ ಸೌಹಾರ್ದ ತೆಗೆ ಕಾಸರಗೋಡಿನ ಕೊಡುಗೆ ಅಪಾರ ವಾದುದು. ಶಿಕ್ಷಣ ಕ್ಷೇತ್ರದಲ್ಲೂ ಇಲ್ಲಿನವರ ಸಾಧನೆ ಉತ್ತಮವಾಗಿದೆ ಎಂದು ರಾಜ್‌ಮೋಹನ್‌ ಉಣ್ಣಿತ್ತಾನ್‌ ಹೇಳಿದರು.

ಟಾಪ್ ನ್ಯೂಸ್

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

2-karkala

Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!

Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 37,000 ಮತಗಳಿಂದ ಮುನ್ನಡೆ

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

2-karkala

Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!

Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.