ಸುಳ್ಯದವರ ಕಣ್ಣು ಆರು ಕ್ಷೇತ್ರಗಳ ಮೇಲೆ!
Team Udayavani, Apr 5, 2019, 10:16 AM IST
ಸುಳ್ಯ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿರುವ ಸುಳ್ಯ ವಿಧಾನಸಭಾ ಕ್ಷೇತ್ರದವರ ಕಣ್ಣು ಒಟ್ಟು ಆರು ಲೋಕಸಭಾ ಕ್ಷೇತ್ರಗಳ ರಾಜಕೀಯ ಏರಿಳಿತ, ಪ್ರಚಾರ ವೈಖರಿ, ಫಲಿತಾಂಶಗಳ ಮೇಲಿದೆ!
ಈ ಆರು ಕ್ಷೇತ್ರಗಳಲ್ಲಿ ಯಾರು ಗೆಲ್ಲಬಹುದು, ಯಾರು ಸೋಲಬಹುದು ಎಂಬ ಚರ್ಚೆ ಸುಳ್ಯಕ್ಕೂ ಮಹತ್ವದ್ದು. ದಕ್ಷಿಣ ಕನ್ನಡ ಕ್ಷೇತ್ರದ ಜತೆಗೆ ಉಳಿದ ಐದು ಕಡೆ ಫಲಿತಾಂಶ ಏನಾಗಬಹುದೆಂಬ ಕಾತರ, ಕುತೂಹಲ ಇಲ್ಲಿನ ಜನರಿಗಿದೆ. ಈ ಎಲ್ಲ ಕ್ಷೇತ್ರಗಳಿಗೂ ಸುಳ್ಯಕ್ಕೂ ಇರುವ ರಾಜಕೀಯ ನಂಟು ಇದಕ್ಕೆ ಕಾರಣ.
ಆರು ಕ್ಷೇತ್ರಗಳು
ದಕ್ಷಿಣ ಕನ್ನಡ, ಬೆಂಗಳೂರು ಉತ್ತರ, ಉಡುಪಿ-ಚಿಕ್ಕಮಗಳೂರು, ಕೊಡಗು-ಮೈಸೂರು, ಹಾಸನ ಮತ್ತು ಕೇರಳದ ಕಾಸರಗೋಡು ಲೋಕಸಭಾ ಕ್ಷೇತ್ರಗಳ ಮೇಲೆ ಸುಳ್ಯದವರು ನಿಗಾ ಇರಿಸಿದ್ದಾರೆ. ಅಲ್ಲಿನ ದಿನ ನಿತ್ಯದ ಬೆಳವಣಿಗೆಗಳ ತಿಳಿದುಕೊಳ್ಳುತ್ತಾರೆ. ಇವುಗಳಲ್ಲಿ ಮೂರು ಕ್ಷೇತ್ರಗಳಲ್ಲಿ ಸುಳ್ಯದವರೇ ಸ್ಪರ್ಧಿಗಳಾದರೆ ಉಳಿದ ಮೂರು ಸುಳ್ಯ ವಿಧಾನಸಭಾ ಕ್ಷೇತ್ರದ ಗಡಿಗೆ ತಾಗಿವೆ.
ಸುಳ್ಯದ ಮೂವರು ಸ್ಪರ್ಧಿಗಳು
ಸುಳ್ಯ ತಾಲೂಕಿನ ಮಂಡೆಕೋಲು ನಿವಾಸಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಬೆಂಗಳೂರು ಉತ್ತರ ಕ್ಷೇತ್ರದಿಂದ, ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿರುವ ಚಾರ್ವಾಕ ಗ್ರಾಮದ ಕರಂದ್ಲಾಜೆ ನಿವಾಸಿ ಶೋಭಾ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ, ಪಾಲ್ತಾಡಿ ಗ್ರಾಮದ ಕುಂಜಾಡಿ ನಿವಾಸಿ ನಳಿನ್ ಕುಮಾರ್ ಕಟೀಲು ದ.ಕ.ದಿಂದ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡ ಕ್ಷೇತ್ರದ ಅಭ್ಯರ್ಥಿಯ ಫಲಿತಾಂಶದ ಬಗೆಗಿಯರುವ ಕುತೂ ಹಲದಷ್ಟೇ ಉಳಿದೆರಡು ಕಡೆಗೂ ಇದೆ.
ಗಡಿಗೆ ತಾಗಿರುವ ಮೂರು ಉಳಿದ ಮೂರು ಕ್ಷೇತ್ರಗಳಾದ ಹಾಸನ, ಕೊಡಗು -ಮೈಸೂರು, ಕೇರಳದ ಕಾಸರಗೋಡಿನತ್ತಲೂ ಸುಳ್ಯದವರ ಚಿತ್ತವಿದೆ. ಈ ಮೂರು ಸುಳ್ಯ ವಿಧಾನಸಭಾ ಕ್ಷೇತ್ರದ ಗಡಿ ಗ್ರಾಮಗಳಿಗೆ ತಾಗಿವೆ. ಜಾಲೂÕರಿನ ಪಂಜಿಕಲ್ಲು, ಮಂಡೆಕೋಲು ಮೊದಲಾದ ಪ್ರದೇಶಗಳು ಕೇರಳ-ಕರ್ನಾಟಕದ ಗಡಿ ಪ್ರದೇಶ. ಈ ಗಡಿಗೆ ತಾಗಿ ಕಾಸರಗೋಡು ಕ್ಷೇತ್ರವಿದೆ. ಕಾಸರಗೋಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವೀಶ್ ತಂತ್ರಿ ಅವರು ಈ ಕಡೆಯ ಅನೇಕ ದೇವಾಲಯ, ದೈವಸ್ಥಾನಗಳಲ್ಲಿ ತಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಕಲೇಶಪುರದ ಗಡಿ ಶಿರಾಡಿ ಗ್ರಾಮಕ್ಕೆ ತಾಗಿದೆ. ಕೊಡಗು -ಮೈಸೂರು ಕ್ಷೇತ್ರದ ಅನೇಕ ಗ್ರಾಮಗಳು ಸುಳ್ಯದ ಗಡಿಯಲ್ಲಿವೆ. ಸಂಪಾಜೆ, ಚೆಂಬು,
ಪೆರಾಜೆ ಪ್ರದೇಶಗಳು ಸುಳ್ಯ ಗಡಿಯಲ್ಲಿವೆ.
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.