ಎ. 8-11: ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
Team Udayavani, Apr 5, 2019, 10:38 AM IST
ಮಂಗಳೂರು: ನಿಟ್ಟೆ ವಿಶ್ವವಿದ್ಯಾನಿಲಯ ವತಿಯಿಂದ ಪ್ರತಿ ವರ್ಷ ನಡೆಯುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಮೂರನೇ ಆವೃತ್ತಿಯು ಎ. 8 ರಿಂದ 11ರ ವರೆಗೆ ನಗರದ ಭಾರತ್ ಮಾಲ್‌ನ ಬಿಗ್ ಸಿನಿಮಾಸ್‌ನಲ್ಲಿ ನಡೆಯಲಿದೆ.
ನಿರ್ದೇಶಕ ಪಿ. ಶೇಷಾದ್ರಿ ಉದ್ಘಾಟಿ ಸಲಿದ್ದಾರೆ. ಎನ್‌ಐಎಫ್‌ಎಫ್, ಖ್ಯಾತ ನಿರ್ದೇಶಕರ ಮೂಕಜ್ಜಿಯ ಕನಸುಗಳು ಚಿತ್ರ ಪ್ರದರ್ಶನದೊಂದಿಗೆ ಉದ್ಘಾಟನೆಗೊಳ್ಳಲಿದೆ.
ಈ ಮಾ ಯು (ಮಲೆಯಾಳಂ), ಕಾಲ (ತಮಿಳು), ಪಡ್ಡಾಯಿ (ತುಳು), ಅಕ್ಟೋಬರ್ (ಹಿಂದಿ), ತುಂಬ್ಬದ್ (ಹಿಂದಿ), ರೇಡು (ಮರಾಠಿ), ದಿಥಿ (ಮರಾಠಿ), ಸರಕಾರಿ ಹಿರಿಯ ಪ್ರಾಥಮಿಕ ಶಾಲೆ- ಕಾಸರಗೋಡು (ಕನ್ನಡ), ಅಭ್ಯಕೊ¤ (ಬಂಗಾಳಿ). ಚಿತ್ರೋತ್ಸವದ ಸಮಾಪ್ತಿ ಚಿತ್ರವಾಗಿ ಕುಂಬಲಾಂಗಿ (ಮಲೆಯಾಳಂ) ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಈ ಬಾರಿ ಹಿಂದಿ, ತುಳು, ಕನ್ನಡ, ಮಲಯಾಳ, ಉರ್ದು, ಬಂಗಾಲಿ, ಮರಾಠಿ, ತೆಲುಗು, ತಮಿಳು, ಪೋರ್ಚುಗೀಸ್ ಮತ್ತು ಫ್ರೆಂಚ್ ಭಾಷೆಯ ಚಿತ್ರಗಳು ಸೇರಿದಂತೆ 70 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ನಾಲ್ಕು ದಿನಗಳ ಅವಧಿಯಲ್ಲಿ ಭಾರತ್ ಸಿನಿಮಾಸ್‌ನ ಮೂರು ಪರದೆಗಳನ್ನು ಪ್ರತ್ಯೇಕವಾಗಿ ಚಿತ್ರೋತ್ಸವಕ್ಕೆ ಮೀಸಲಿಡಲಾಗಿದೆ.
ಸಂವಾದಕ್ಕೆ ಅವಕಾಶ
ಅತಿಥಿಗಳಾಗಿ ನಿರ್ದೇಶಕ ನಟ ರಿಷಭ್ ಶೆಟ್ಟಿ, ಸುಮಿತ್ರಾ ಭಾವೆ, ವೈದೇಹಿ, ವೀಣಾ ಬಕ್ಷಿ, ಅಭಯಸಿಂಹ, ಅಂಜಲಿ ಪಾಟೀಲ್, ಜಯಪ್ರಕಾಶ್ ರಾಧಾಕೃಷ್ಣನ್, ಸಂಚಾರಿ ವಿಜಯ್, ಅಜಾಜ್ ಖಾನ್ ಮತ್ತು ಪ್ರಿಯಾ ಕೃಷ್ಣಸ್ವಾಮಿ ಆಗಮಿಸಲಿದ್ದಾರೆ. ಪ್ರತಿ ಚಿತ್ರ ಪ್ರದರ್ಶನದ ಬಳಿಕ ಆಯಾ ಚಿತ್ರದ ನಿರ್ಮಾಪಕರ ಜತೆ ಸಂವಾದಕ್ಕೆ ಅವಕಾಶ ಇರುತ್ತದೆ.
ರಾಷ್ಟ್ರಪ್ರಶಸ್ತಿ ಪಡೆದ ಚಿತ್ರವಿಮ ರ್ಶಕ ಮನು ಚಕ್ರವರ್ತಿ ಅವರು ಪಿ. ಶೇಷಾದ್ರಿ ಅವರ ಜತೆ, “ಪಠ್ಯವಾಗಿ ಚಿತ್ರ: ಶಿವರಾಮಕಾರಂತರ ಬರಹ ಗಳನ್ನು ಸಿನೆಮಾ ಮೂಲಕ ಅರ್ಥ ಮಾಡಿಕೊಳ್ಳುವುದು’ ಎಂಬ ವಿಚಾರದ ಬಗ್ಗೆ ಎ. 8ರಂದು ಸಂಜೆ 5.15ಕ್ಕೆ ಸಂವಾದ ನಡೆಸಿಕೊಡಲಿದ್ದಾರೆ. ಎ. 9ರಂದು ಸಂಜೆ 7 ಗಂಟೆಗೆ ಖ್ಯಾತ ಚಿತ್ರ ವಿಮರ್ಶಕರಾದ ಭಾರದ್ವಾಜ್ ರಂಗನ್, ಸೌಮ್ಯಾ ರಾಜೇಂದ್ರನ್ ಮತ್ತು ರೋಶನ್ ನಾಯರ್ ಅವರನ್ನೊಳಗೊಂಡ ಗುಂಪು ಚರ್ಚೆಯೂ ಇರುತ್ತದೆ. ಈ ಗೋಷ್ಠಿಯಲ್ಲಿ ಖ್ಯಾತ ಚಿತ್ರ ನಿರ್ಮಾಪಕ ಅಜೀಜ್ ಖಾನ್ ನಿರ್ವಹಿಸಲಿದ್ದಾರೆ.
ಎಲ್ಲ ಚಿತ್ರಗಳನ್ನು ಉಚಿತವಾಗಿ ವೀಕ್ಷಿಸಲು ಮತ್ತು ಚರ್ಚೆಗಳಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಮೊದಲು ಬಂದವರಿಗೆ ಮೊದಲು ಆದ್ಯತೆಯಂತೆ ಪ್ರವೇಶ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.