ದುಶ್ಚಟಗಳಿಗೆ ದಾಸರಾಗಬೇಡಿ
ಅಂಕಲಗಿ ಜಾತ್ರೆ ವೇಳೆ ಚಟ ಮುಕ್ತರಾಗಿಪುನಃ ಚಟಕ್ಕೆ ದಾಸರಾದರೆ ದೊಡ್ಡ ಪಾಪ
Team Udayavani, Apr 5, 2019, 12:51 PM IST
ಅಫಜಲಪುರ: ಅಂಕಲಗಿ ಗ್ರಾಮದಲ್ಲಿ ಬಡದಾಳ ತೇರಿನ ಮಠದ ಅಭಿನವ ಚನ್ನಮಲ್ಲ ಶಿವಯೋಗಿಗಳು ಚಟಗಳನ್ನು ಜೋಳಿಗೆಗೆ ಹಾಕಿ ಎನ್ನುವ ವಿಭಿನ್ನ ಅಭಿಯಾನ ನಡೆಸಿದರು.
ಅಫಜಲಪುರ: ದುಶ್ಚಟಗಳಿಗೆ ದಾಸರಾಗದೆ ಸಜ್ಜನರಾಗಿ ಬದುಕು ನಡೆಸಿ ಎಂದು ಬಡದಾಳ ತೇರಿನ ಮಠದ ಅಭಿನವ ಚನ್ನಮಲ್ಲ ಶಿವಯೋಗಿಗಳು ಯುವ ಜನಾಂಗಕ್ಕೆ ಕರೆ ನೀಡಿದರು.
ತಾಲೂಕಿನ ಅಂಕಲಗಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ 21ನೇ ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಿಮ್ಮ ಚಟಗಳನ್ನು ನಮ್ಮ ಜೋಳಿಗೆಯಲ್ಲಿ ಹಾಕಿ ಎನ್ನುವ ವಿನೂತನ ಅಭಿಯಾನ ನಡೆಸಿದರು.
ನಂತರ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಅವರು, ಯುವಕರು
ದೇಶದ ಸಂಪತ್ತು. ಜಗತ್ತಿನ ಅತಿ ಹೆಚ್ಚು ಯುವಕರು ಹೊಂದಿರುವ ದೇಶ ನಮ್ಮದು. ಆದರೆ ಅನೇಕ ಚಟಗಳಿಗೆ ದಾಸರಾಗಿ ಯುವಕರು ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಯುಗಾದಿ ಹೊಸ
ವರ್ಷದ ಶುಭ ಸಂದರ್ಭದಲ್ಲಿ ಅಂಕಲಗಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಯ ಸಮಯದಲ್ಲಿ ಗ್ರಾಮಸ್ಥರು ಚಟ ಮುಕ್ತರಾಗಿ
ಉತ್ತಮ ಜೀವನ ನಡೆಸಬೇಕು. ಯಾರು ಚಟ ಬಿಡುತ್ತೇವೆಂದು ಜೋಳಿಗೆಗೆ ಹಾಕಿ ಪ್ರಮಾಣ ಮಾಡಿದ್ದಿರಿ ಅವರ ಭವಿಷ್ಯ
ಉಜ್ವಲವಾಗಲಿದೆ, ಒಂದು ವೇಳೆ ಕದ್ದು ಪುನಃ ಅದೇ ಚಟಕ್ಕೆ ದಾಸರಾದರೆ ಅದಕ್ಕಿಂತ ದೊಡ್ಡ ಪಾಪ ಮತ್ತೂಂದಿಲ್ಲ ಎಂದರು.
ಈಗಿನ ಬಿಸಿಲು ನೋಡಿದಾಗ ಎಲ್ಲರಿಗೂ ಭಯ ಶುರುವಾಗಿದೆ. ಎಲ್ಲಿ ನೋಡಿದರಲ್ಲಿ ಗಿಡ, ಮರಗಳನ್ನು ದುರಾಸೆಗಾಗಿ ಕಡಿದು
ಮಾರಲಾಗುತ್ತಿದೆ. ಹೀಗಿ ಮುಂದುವರಿದರೆ ಬರುವ ವರ್ಷಗಳಲ್ಲಿ ಹನಿ ನೀರಿಗಾಗಿಯೂ ಎಲ್ಲರೂ ಪರದಾಡಬೇಕಾಗುತ್ತದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಒಳ್ಳೆಯ ಮಳೆ-ಬೆಳೆಯಾಗಿ ನಾಡು
ಸಮೃದ್ಧವಾಗಿರಬೇಕಾದರೆ ಗಿಡ-ಮರಗಳನ್ನು ನೆಟ್ಟು ಬೆಳೆಸಬೇಕು. ಈ ನಿಟ್ಟಿನಲ್ಲಿ ಈ ಬಾರಿಯ ಮಳೆಗಾಲ ಆರಂಭದಲ್ಲಿ ಮಠದ ವತಿಯಿಂದ ಪ್ರತಿ ಮನೆಗೂ ಸಸಿಗಳನ್ನು ವಿತರಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಎಲ್ಲರೂ ಸಸಿ ನೆಟ್ಟು ಅವುಗಳನ್ನು ಮಕ್ಕಳಂತೆ
ಬೆಳೆಸಬೇಕು ಎಂದು ಹೇಳಿದರು.
ಪಂಚಾಕ್ಷರಿ ದೇವರು ಮಾತನಾಡಿ, ಗುರುವಿನ ನೆನೆದರೆ ಯಾರಿಗೂ ಕೇಡಿಲ್ಲ. ಚನ್ನಮಲ್ಲ ಶಿವಯೋಗಿಗಳೆ ಸ್ವತಃ ಮನೆ
ಬಾಗಿಲಿಗೆ ಬಂದು ದುಶ್ಚಟ ಬಿಟ್ಟು ಸಜ್ಜನರಾಗಿ ಎಂದು ಸಲಹೆ ನೀಡುತ್ತಿರುವಾಗ, ನಾವೆಲ್ಲ ಚಟ ಬಿಟ್ಟು ಸಜ್ಜನರಾಗದಿದ್ದರೆ ದೇವರು ಮೆಚ್ಚುವುದಿಲ್ಲ ಎಂದರು.
ಮುಖಂಡರಾದ ಚಂದ್ರಕಾಂತ ಪೊಲೀಸ ಪಾಟೀಲ, ಸಾಹೇಬಗೌಡ ಮೂಲಗೆ, ವಿಠ್ಠಲ ರಾವ್ ಪಡಶೆಟ್ಟಿ, ಘೋಷಯ್ಯ ಸ್ವಾಮಿ, ಗುರು ಸ್ವಾಮಿ ಹಿರೇಮಠ, ಅಣ್ಣಾರಾವ ಪಡಶೆಟ್ಟಿ, ಏಸಣ್ಣ, ಶಿವರಶಣ ಪಾಟೀಲ, ಬಸಣ್ಣ ಕುಂಬಾರ, ಕಾಶಿರಾಯ ಮೂಲಗೆ, ಬಸಪ್ಪ ಪಾಟೀಲ ಹಾಗೂ ಇತರರು ಇದ್ದರು. ತಬಲಾ ವಾದಕ ಮಹಾಂತೇಶ ಸುತಾರ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.