ಯುಗಾದಿ ಹಬ್ಬಕ್ಕೆ ಜನರಿಂದ ಭರ್ಜರಿ ಖರೀದಿ
ಹಬ್ಬ ಹಾಗೂ ಮಳೆ ಕೊರತೆ ಹಿನ್ನೆಲೆಯಲ್ಲಿ ಸಾಮಗ್ರಿಗಳು ಕೊಂಚ ದುಬಾರಿ.
Team Udayavani, Apr 5, 2019, 1:44 PM IST
ಹೊನ್ನಾಳಿ: ಸಂತೆಗೆ ತೆರಳುವ ದಾರಿಯಲ್ಲಿಯೇ ವ್ಯಾಪಾರ ಮಾಡುತ್ತಿರುವುದು.
ಹೊನ್ನಾಳಿ: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ವಾರದ ಸಂತೆ ಜನರಿಂದ ತುಂಬಿ ತುಳುಕುತ್ತಿತ್ತು.ಬಿರುಬಿಸಿಲನ್ನು ಲೆಕ್ಕಿಸದೆ ಜನರು ತರಕಾರಿ, ದಿನಸಿ ಪದಾರ್ಥ, ಹಣ್ಣು ಸೇರಿದಂತೆ ಇತರ ವಸ್ತುಗಳನ್ನು ಕೊಳ್ಳುವುದರಲ್ಲಿ ತಲ್ಲೀನರಾಗಿದ್ದರು.
ಹೊನ್ನಾಳಿ ತಾಲೂಕಿನ ಹರಳಹಳ್ಳಿ, ದಿಡಗೂರು, ಸುಂಕದಕಟ್ಟೆ, ಅರಬಗಟ್ಟೆ, ಹೊಳೆಹರಳಹಳ್ಳಿ, ಹನುಮಸಾಗರ, ಬೇಲಿಮಲ್ಲೂರು, ಕೋಟೆಮಲ್ಲೂರು, ಹೊನ್ನೂರೊಡ್ಡರಹಟ್ಟಿ, ಮಾರಿಕೊಪ್ಪ, ಯರೇಹಳ್ಳಿ, ಹತ್ತೂರು, ಎಚ್. ಕಡದಕಟ್ಟೆ,- ಸೇರಿದಂತೆ ಇತರ ಗ್ರಾಮಗಳು, ನ್ಯಾಮತಿ ತಾಲೂಕಿನ ಮಾದನಬಾವಿ, ಚೀಲೂರು, ದೊಡ್ಡೇರಿ, ಗೋವನಿಕೋವಿ, ಕುರುವ, ನ್ಯಾಮತಿ ಪಟ್ಟಣ ಸುರಹೊನ್ನೆ ಹಾಗೂ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಳ್ಳೂರು, ಅಣಜಿ, ನಾಗವಂದ, ಮಾಸೂರು ಸೇರಿದಂತೆ ಇತರ ಗಡಿ ಭಾಗಗಳ ಹಳ್ಳಿಗಳ ಜನರು ಹೊನ್ನಾಳಿ ವಾರದ ಸಂತೆಗೆ ಬರುತ್ತಾರೆ.
ಸಾಮಾನ್ಯವಾಗಿ ವಾರದ ಸಂತೆಯಲ್ಲಿ ತರಕಾರಿ ಸೇರಿದಂತೆ ಎಲ್ಲಾ ಪದಾರ್ಥಗಳ ದರ ಕಡಿಮೆ ಇರುತ್ತಾದರೂ ಹಬ್ಬದ ಹಿನ್ನೆಲೆಯಲ್ಲಿ ಇಂದು ಬೆಲೆ ಸ್ವಲ್ಪ ಜಾಸ್ತಿಯೇ ಇತ್ತು. ಬೀನ್ಸ್ 100ರಿದ 120, ಹಿರೇಕಾಯಿ, ಬೆಂಡೆ, ನವಿಲುಕೋಸು, ಹಸಿ ಮೆಣಸಿನಕಾಯಿ, ಕ್ಯಾರೆಟ್ ಕೆಜಿಗೆ ತಲಾ ರೂ.40, ತೊಗರೆ, ಕಡಲೆ, ಶೇಂಗಾ, ಉದ್ದು, ಮಡಿಕೆ, ಹೆಸರು ಸೇರಿದಂತೆ ಇತರ ಬೇಳೆಕಾಳುಗಳ ಬೆಲೆ ಗಗನಕ್ಕೆ ಜಿಗಿದು ಬಡವರು ಯುಗಾದಿ ಹಬ್ಬದ ಹೋಳಿಗೆ ಮಾಡುವುದು ಕಷ್ಟಕರವಾಗಿ ಪರಿಣಮಿಸಿದೆ.
ಪಾರ್ಕಿಂಗ್ ಸಮಸ್ಯೆ: ಪಟ್ಟಣದ ತುಮ್ಮಿನಕಟ್ಟೆ ರಸ್ತೆಯ ಇಕ್ಕೆಲಗಳಲ್ಲಿ ಖಾಸಗಿ ಬಸ್ ನಿಲ್ದಾಣದಿಂದ ಹಿಡಿದು ಸುಮಾರು ಒಂದು ಕಿ.ಮೀ. ದೂರದ ಜಾನುವಾರು ಸಂತೆವರೆಗೂ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಮಾಡಲಾಗಿತ್ತು. ಪಟ್ಟಣದ ಪಶು ವೈದ್ಯಾಧಿಕಾರಿಗಳ ಕಚೇರಿಗೆ ತೆರಳಲು ಜನ ಹರಸಾಹಸ ಪಡಬೇಕಾಯಿತು. ಮುಖ್ಯ ರಸ್ತೆಯಲ್ಲಿ ಕೆಲಸಮಯ ಟ್ರಾಫಿಕ್ ಜಾಮ್ ಕೂಡ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.