ನಾಲ್ಕು ಗ್ರಾಮಗಳಲ್ಲಿ ಜಲಕ್ಷಾಮ

Team Udayavani, Apr 5, 2019, 2:48 PM IST

5-April-21

ಕೊಟ್ಟೂರು: ಕುಡಿಯುವ ನೀರಿಗಾಗಿ ತಳ್ಳುವ ಗಾಡಿಯಲ್ಲಿ ಖಾಲಿ ಕೊಡ ಹಿಡಿದು ನಿಂತಿರುವ ಗ್ರಾಮಸ್ಥರು.

ಕೊಟ್ಟೂರು: ತಾಲೂಕಿನ ದೂಪದಹಳ್ಳಿ ಗ್ರಾಪಂ ವ್ಯಾಪ್ತಿಯ ನಾಲ್ಕು ಗ್ರಾಮಗಳಲ್ಲಿ ಜಲಕ್ಷಾಮ ಎದುರಾಗಿದ್ದು, ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಗ್ರಾಪಂ ವ್ಯಾಪ್ತಿಯ ನಾಲ್ಕು ಗ್ರಾಮಗಳ ಪೈಕಿ ದೂಪದಹಳ್ಳಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು, ಕುಡಿಯುವ ನೀರಿಗಾಗಿ ದಿನೇ ದಿನೇ ಉಲ್ಬಣ ಹೆಚ್ಚಾಗುತ್ತಿದೆ.

ಗ್ರಾಪಂ ಕೇಂದ್ರವಾಗಿರುವ ದೂಪದಹಳ್ಳಿ ಗ್ರಾಮದಲ್ಲಿ ಒಂದು ಖಾಸಗಿ ಬೋರು, ಗ್ರಾಪಂಗೆ ಒಳಪಟ್ಟಿರುವ ಒಂದು ಬೋರ್‌ ಇದೆ. ಇವೆರೆಡು ಕೊಳವೆ ಬಾವಿಗಳು ಗ್ರಾಮಕ್ಕೆ ಆಸರೆಯಾಗಿದ್ದು, ಇದರಿಂದ ಗ್ರಾಮದ ಜನರಿಗೆ ಸಮರ್ಪಕವಾಗಿ ನೀರೊದಗಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, 500 ರಿಂದ 600 ಅಡಿಗಳಷ್ಟು ಬೋರ್‌ ಕೊರೆದರೂ ಸಹ ನೀರು ಬರುತ್ತಿಲ್ಲ. ಇಲ್ಲಿಯವರೆಗೆ ಒಟ್ಟು 18 ಬೋರ್‌ ಕೊರೆಯಿಸಲಾಗಿದೆ. ಆದರೂ ಸಹ ಇಲ್ಲಿ ನೀರು ಸಿಕ್ಕಿಲ್ಲ.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ ಇಲ್ಲಿಯವರೆಗೂ ಕುಡಿಯುವ ನೀರು ಪೂರೈಕೆಯಾಗಿಲ್ಲ. ನೀರಿಗಾಗಿ ಜನರು ತಳ್ಳುವ ಬಂಡಿಗಳಲ್ಲಿ ಖಾಲಿ ಕೊಡಗಳನ್ನು ಇಟ್ಟುಕೊಂಡು ಇಲ್ಲಿನ ಖಾಸಗಿ ಹಾಗೂ ಗ್ರಾಪಂ ಬೋರ್‌ ಬಳಿ ಸಾಲುಗಟ್ಟಿ ನಿಂತು ದಿನವಿಡೀ ನೀರಿಗಾಗಿ ಕಾಯುವುದು ಇಲ್ಲಿನ ಸಹಜ ದೃಶ್ಯವಾಗಿದೆ.

ದೂಪದಹಳ್ಳಿ ಗ್ರಾಪಂಗೆ ಸೇರಿದ ಒಟ್ಟು 4 ಗ್ರಾಮಗಳು ಗೊಲ್ಲರಹಳ್ಳಿ, ದೂಪದಹಳ್ಳಿ ತಾಂಡಾ ಹಾಗೂ ಬೇವೂರು ಗ್ರಾಮಗಳಲ್ಲೂ ಸಹ ಇದೇ ಪರಿಸ್ಥಿತಿ ಉಂಟಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿನ ಅಂತರ್ಜಲ ಮಟ್ಟ ಕುಸಿದಿರುವುದು ನೀರು ಪೂರೈಕೆಗೆ ಅಡ್ಡಿಯಾಗಿರುವುದರಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಸಮರ್ಪಕವಾಗಿ ನೀರು ಪೂರೈಸಲು ತಲೆ ಬಿಸಿಯಾಗಿದೆ.

ಕುಡಿಯುವ ನೀರಿಲ್ಲದೆ ಜನಜಾನುವಾರುಗಳ ಪರಿಸ್ಥಿತಿ ಶೋಚನೀಯವಾಗಿದೆ. ಇಲ್ಲಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ನಾವು ಆಸ್ತಿ ಕೇಳುವುದಿಲ್ಲ, ನೀರು ಕೊಡಿ ಸಾಕು. ಶಾಸಕರ ಅನುದಾನದಡಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ನೀರು ಪೂರೈಸಬೇಕು.
ಸಿದ್ದಪ್ಪ,
ಗ್ರಾಮದ ಮುಖಂಡ, ದೂಪದಹಳ್ಳಿ

ಗ್ರಾಪಂ ವ್ಯಾಪ್ತಿಯ ನಾಲ್ಕು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕೂಡಲೇ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಂಡು ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು.
ಕೆಂಚಪ್ಪ, ಪಿಡಿಒ,
ದೂಪದಹಳ್ಳಿ ಗ್ರಾಪಂ.

„ಎಂ.ರವಿಕುಮಾರ್‌

ಟಾಪ್ ನ್ಯೂಸ್

Isro: ಡಿ.20ಕ್ಕೆ ಸ್ಪೇಡೆಕ್ಸ್‌ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

Isro: ಡಿ.20ಕ್ಕೆ ಸ್ಪೇಡೆಕ್ಸ್‌ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

BK-hariprasad

Congress: ಹಣ, ಮದ್ಯ ಹಂಚಿಕೆಯಲ್ಲಿ ಬಿಜೆಪಿ ಜತೆ ಪೈಪೋಟಿ: ಬಿ.ಕೆ.ಹರಿಪ್ರಸಾದ್‌

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

kambala2

Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ

Naxal-Rehablitation

Vikram Gowda Encounter: ನಕ್ಸಲ್‌ ಪುನರ್ವಸತಿ, ಶರಣಾಗತಿ ಸಮಿತಿ ಭೇಟಿ, ಪರಿಶೀಲನೆ

barkuru-Kamabala

Kambala: ಆರು ಶತಮಾನಗಳ ಇತಿಹಾಸ ಹೊಂದಿರುವ ಬಾರ್ಕೂರು ಕಂಬಳ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Isro: ಡಿ.20ಕ್ಕೆ ಸ್ಪೇಡೆಕ್ಸ್‌ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

Isro: ಡಿ.20ಕ್ಕೆ ಸ್ಪೇಡೆಕ್ಸ್‌ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

BK-hariprasad

Congress: ಹಣ, ಮದ್ಯ ಹಂಚಿಕೆಯಲ್ಲಿ ಬಿಜೆಪಿ ಜತೆ ಪೈಪೋಟಿ: ಬಿ.ಕೆ.ಹರಿಪ್ರಸಾದ್‌

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

kambala2

Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.