![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 6, 2019, 6:04 AM IST
ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಕೊರ್ಗಿ ಗ್ರಾ.ಪಂ.ವ್ಯಾಪ್ತಿಯ ಹೆಸ್ಕಾತ್ತೂರಿನಲ್ಲಿ ಕುಂದಾಪುರದ ಅರಣ್ಯ ಇಲಾಖೆಯವರು ಇರಿಸಿರುವ ಬೋನ್‌ನಲ್ಲಿ ಚಿರತೆ ಸೆರೆಯಾದ ಘಟನೆ ಎ.5 ರಂದು ಸಂಭವಿಸಿದೆ.
ಇಲ್ಲಿನ ಪೋಸ್ಟ್ ಮಾಸ್ಟರ್ ನೂಜಿ ಶಂಕರ ಶೆಟ್ಟಿ ಎನ್ನುವವರ ಮನೆಯ ದನದ ಕೊಟ್ಟಿಗೆಗೆ ಕಳೆದ ಮೂರು ದಿನಗಳ ಹಿಂದೆ ಚಿರತೆಯೊಂದು ಕರುವಿನ ಮೇಲೆ ದಾಳಿ ನಡೆಸಿದೆ.
ಈ ಹಿನ್ನೆಯಲ್ಲಿ ಕಾರ್ಯಪ್ರವೃತ್ತರಾದ ಕುಂದಾಪುರದ ಅರಣ್ಯ ಇಲಾಖೆಯವರು ಮನೆಯ ಸಮೀಪದಲ್ಲಿಯೇ ಬೋನ್ ಇರಿಸಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಡಿ.ಎಫ್.ಓ ಪ್ರಭಾಕರನ್, ಎಸಿಎಫ್ ಲೋಹಿತ್, ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಉಪ ವಲಯ ಅರಣ್ಯಾಧಿಕಾರಿ ಉದಯ, ಅರಣ್ಯ ರಕ್ಷಕರಾದ ಮಂಜು, ಶಂಕರ್, ಉದಯ, ಅರಣ್ಯ ವೀಕ್ಷಕ ಸೋಮಶೇಖರ್, ವೆಂಕಟೇಶ್,ಚಾಲಕ ಅಶೋಕ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
You seem to have an Ad Blocker on.
To continue reading, please turn it off or whitelist Udayavani.