ಅರಬೈಲು ಘಾಟಿಯ ಅಭಯ ಮಾರುತಿ


Team Udayavani, Apr 6, 2019, 6:00 AM IST

e-4

ಅರಬೈಲು ಘಾಟಿಯ ಶ್ರೀ ಮಾರುತಿ ದೇವಾಲಯಕ್ಕೆ ಪೌರಾಣಿಕ ಹಿನ್ನೆಲೆಯಿದೆ. ಮಾರುತಿಯು ವಾಯುವ್ಯ ದಿಕ್ಕಿಗೆ ಅಭಿಮುಖವಾಗಿ ನಿಂತಿರುವುದು ಇಲ್ಲಿನ ವಿಶೇಷ. ಹನುಮಜಯಂತಿ ಸಂದರ್ಭದಲ್ಲಿ ಇಲ್ಲಿ ಜಾತ್ರೋತ್ಸವವೂ ನಡೆಯುತ್ತದೆ.

ಶ್ರೀರಾಮನನ್ನು ಭಜಿಸುವ, ಆರಾಧಿಸುವ ಭಕ್ತರೆಲ್ಲರೂ ತನ್ನ ಆಪ್ತರೆಂದು ಪರಿಗಣಿಸುವ ಶ್ರೀಮಾರುತಿ ಸದಾ ಭಕ್ತ ವತ್ಸಲ. ಅಷ್ಟೇ ಅಲ್ಲ, ತನ್ನನ್ನು ನಂಬಿ ಬರುವ, ಸದಾ ಧ್ಯಾನಿಸುವ ಭಕ್ತರ ಸಕಲ ಇಷ್ಟಾರ್ಥಗಳನ್ನು ಆತ ನೆರವೇರಿಸುತ್ತಾನೆ ಎಂಬ ನಂಬಿಕೆ ಜನರಲ್ಲಿದೆ. ನಮ್ಮ ನಾಡಿನಲ್ಲಿ ಸಹಸ್ರಾರು ಮಾರುತಿ ದೇವಾಲಯಗಳಿದ್ದರು ಪ್ರತಿಯೊಂದು ದೇಗುಲದ ಸ್ಥಳ ಮಹಿಮೆ ಭಿನ್ನ, ವಿಶಿಷ್ಟ.

ಆಂಕೋಲ-ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರಬೈಲು ಘಾಟಿಯಲ್ಲಿ ಅಂತ ಸಿಗುತ್ತದೆ. ಅಲ್ಲಿರುವ ಶ್ರೀಮಾರುತಿ, ಭಕ್ತರ ಪಾಲಿಗೆ ದಾರಿ ತೋರುವ ಅಭಯಪ್ರದನಾಗಿದ್ದಾನೆ.

ಪೌರಾಣಿಕ ಮಹತ್ವ
ಈ ದೇವಾಲಯಕ್ಕೆ ಪುರಾಣ ಮತ್ತು ಐತಿಹಾಸಿಕ ಮಹತ್ವವಿದೆ. ರಾಮಾಯಣದಲ್ಲಿ ಸೀತೆಯನ್ನು ಅರಸುತ್ತಾ ಶ್ರೀರಾಮ ಲಕ್ಷ್ಮಣರು ಈ ಮಾರ್ಗವಾಗಿ ಸಂಚರಿಸಿದ್ದರಂತೆ. ಈ ಸ್ಥಳ ಪಶ್ಚಿಮಘಟ್ಟ, ಕರಾವಳಿಯನ್ನು ಕೂಡಿಸುವ ಮಧ್ಯದ ಸ್ಥಳವಾಗಿದೆ. ಘಟ್ಟದ ಮೇಲೂ, ಘಟ್ಟದ ಕೆಳಗೂ ಆಂಜನೇಯನ ದೇಗುಲವಿದ್ದು, ಇವೆರಡರ ಮಧ್ಯದ ಸ್ಥಳವಾದ ಇಲ್ಲಿ ಸಹ ಆಂಜನೇಯನ ಶಕ್ತಿ ಸ್ಥಳವಿದೆ. ಸುಮಾರು 1,400 ವರ್ಷಗಳ ಹಿಂದೆ ಈ ಸ್ಥಳದಲ್ಲಿ ಮುನಿಯೋರ್ವರು ತಪಸ್ಸಿಗೆ ಕುಳಿತಿದ್ದರಂತೆ. ಮಣ್ಣಿನಡಿ ಹೂತಿದ್ದ ಆಂಜನೇಯ ಮೂರ್ತಿಯ ದಿವ್ಯದೃಷ್ಟಿಯಿಂದ ಗ್ರಹಿಸಿ, ವಿಗ್ರಹ ತೆಗೆಸಿ, ಚಿಕ್ಕ ಗುಡಿಸಿ ನಿರ್ಮಿಸಿ ಪೂಜಿಸಿದರಂತೆ. 800 ವರ್ಷಗಳ ಹಿಂದೆ, ಇಲ್ಲಿನ ಗುಡಿ ಜೀರ್ಣೋದ್ದಾರಗೊಂಡು ಪುನರ್‌ ಪ್ರತಿಷ್ಠಾಪನೆಯಾದ ಉಲ್ಲೇಖವಿದೆ. ವಾಯುಪುತ್ರನಾದ ಶ್ರೀಮಾರುತಿ ದೇಗುಲ, ವಾಯುವ್ಯ ದಿಕ್ಕಿಗೆ ಅಭಿಮುಖವಾಗಿರುವುದು ಈ ದೇವಾಲಯದ ವಿಶೇಷವಾಗಿದೆ.

ಆಂಕೋಲ ಶಾಸಕರಾಗಿರುವ ಶಿವರಾಮ ಹೆಬ್ಟಾರ ಈ ದೇವಾಲಯದ ಸಮಗ್ರ ಅಭಿವೃದ್ಧಿಯ ನೇತೃತ್ವ ವಹಿಸಿದ್ದಾರೆ. ಚಿಕ್ಕ ಗುಡಿಯ ರೀತಿಯಲ್ಲಿದ್ದ ದೇವಾಲಯವನ್ನು ಜೀರ್ಣೋದ್ಧಾರ ಗೊಳಿಸಿ ಈಗ ದೊಡ್ಡ ಆಲಯವನ್ನಾಗಿಸಲಾಗಿದೆ. ಹೀಗಾಗಿ, 2008 ರಲ್ಲಿ ದೇವಾಲಯ ಪುನರ್‌ ಪ್ರತಿಷ್ಠಾಪನಾ ಮಹೋತ್ಸವ ವೈಭವದಿಂದ ನಡೆದಿದೆ.
ದೇವಾಲಯದಲ್ಲಿ ನಿತ್ಯ ಮಧ್ಯಾಹ್ನ ಮತ್ತು ಸಂಜೆ ನೈವೇದ್ಯ ಸಹಿತ ಮಂಗಳಾರತಿ, ಪೂಜೆ ನಡೆಸಲಾಗುತ್ತದೆ. ಶನಿವಾರದಂದು ವಿಶೇಷ ಅಲಂಕಾರವಿರುತ್ತದೆ. ಯುಗಾದಿ ಸೇರಿ ಎಲ್ಲ ಹಬ್ಬ ಹರಿದಿನಗಳಂದು ಮಹಾಪೂಜೆ ನಡೆಸಲಾಗುತ್ತದೆ. ನವರಾತ್ರಿಯ ಸಂದರ್ಭದಲ್ಲಿ ಪಾಡ್ಯದಿಂದ ದಶಮಿಯವರೆಗೆ ನಿತ್ಯವೂ ಬಗೆ ಬಗೆಯ ನೈವೇದ್ಯ ಪೂಜೆ ನಡೆಯುತ್ತದೆ. ಪ್ರತಿ ವರ್ಷ ಪಾಲ್ಗುಣ ಶುದ್ಧ ಬಿದಿಗೆಯಂದು ದೇವಾಲಯ ಪ್ರತಿಷ್ಠಾಪನೆಯ ನೆನಪಿಗಾಗಿ ವರ್ಧಂತಿ ಉತ್ಸವ ನಡೆಯುತ್ತದೆ. ಚೈತ್ರ ಶುದ್ಧ ಹುಣ್ಣಿಮೆಯ ಹನುಮಜಯಂತಿಯಂದು ಜಾತ್ರೋತ್ಸವ ನಡೆಸಲಾಗುತ್ತದೆ. ಇಷ್ಟಾರ್ಥ ಸಿದ್ಧಿ ಬಗ್ಗೆ ಪ್ರಶ್ನಿಸಿದರೆ, ಇಲ್ಲಿನ ಪ್ರಸಾದ ನೀಡುವುದರ ಮೂಲಕ ದೈವವು ಉತ್ತರ ಹಾಗೂ ಪರಿಹಾರ ಸೂಚಸುತ್ತದೆ ಎಂಬುದು ಭಕ್ತರ ನಂಬಿಕೆ.

ವಿದ್ಯೆ,ಬುದ್ಧಿ ಮನಃಶಾಂತಿಗಾಗಿ ಮಾರುತಿಯನ್ನು ಪ್ರಾರ್ಥಿಸಿ, ಹರಕೆ ಹೊರುತ್ತಾರೆ. ಜಮೀನು ವ್ಯಾಜ್ಯ ಪರಿಹಾರ, ಶತ್ರು ಭಯ ನಿವಾರಣೆ, ದುಃಸ್ವಪ್ನ ನಿವಾರಣೆ, ಮನೋಭಿಷ್ಠ ಸಿದ್ಧಿಗಾಗಿ ಪ್ರಾರ್ಥಿಸಿ ನಿತ್ಯವೂ ನೂರಾರು ಜನ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಿ ಹರಕೆ ಸಮರ್ಪಿಸುತ್ತಾರೆ.

ಎನ್‌.ಡಿ.ಹೆಗಡೆ ಆನಂದಪುರಂ

ಟಾಪ್ ನ್ಯೂಸ್

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

7-bus

Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.