ಭಾರತೀಯ ರಾಜಕೀಯ ಬದುಕಿನ ದೀರ್ಘ ಯಾತ್ರೆಗಳು..
Team Udayavani, Apr 6, 2019, 6:00 AM IST
ಪಾದಯಾತ್ರೆ, ರಥಯಾತ್ರೆ ಎನ್ನುವುದು ದೇಶದ ರಾಜಕೀಯದಲ್ಲಿ ಹಾಸುಹೊಕ್ಕಾಗಿದೆ. ಅದಕ್ಕೆ ಆರಂಭ ಸಿಕ್ಕಿದ್ದು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿಯವರಿಂದ. ವಿಶೇಷವಾಗಿ ಆಂಧ್ರಪ್ರದೇಶದ ರಾಜಕೀಯದಲ್ಲಿ ಪಾದಯಾತ್ರೆಗೆ ಹೆಚ್ಚಿನ ಮಹತ್ವವಿದೆ. ಪಾದಯಾತ್ರೆ, ರಥಯಾತ್ರೆ ಕೈಗೊಂಡ ನಾಯಕರು ಇವರು
ಎಲ್.ಕೆ.ಅಡ್ವಾಣಿ
10,000 ಕಿಮೀ- ರಥಯಾತ್ರೆ ದೂರ (ಉದ್ದೇಶಿಸಿದ್ದು)
35 ದಿನ- ಯಾತ್ರೆಯ ಅವಧಿ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ನಿಟ್ಟಿನಲ್ಲಿ ಅವರು
“ರಾಮ ರಥ ಯಾತ್ರೆ’ ಕೈಗೊಂಡಿದ್ದರು.
1990ರ ಸೆ.25-1990 ಅ.30ರ ವರೆಗೆ ಗುಜರಾತ್‌ನ ಸೋಮನಾಥದಿಂದ ಶುರುವಾಗಿ, ಅಯೋಧ್ಯೆಯಲ್ಲಿ ಮುಕ್ತಾಯವಾಗಬೇಕಾಗಿತ್ತು.
ಬಿಹಾರದಲ್ಲಿ ಅವರನ್ನು ಬಂಧಿಸಿದ ಕಾರಣ ಯಾತ್ರೆ ಪೂರ್ತಿಯಾಗಲಿಲ್ಲ.
ಅವರು ಒಟ್ಟು ನಾಲ್ಕು ಯಾತ್ರೆಗಳನ್ನು ಕೈಗೊಂಡಿದ್ದರು.
ಜನಾದೇಶ ಯಾತ್ರೆ – 1993 ಸೆ.11 ರಿಂದ ದೇಶದ 4 ಭಾಗಗಳಿಂದ ಶುರುವಾಗಿ ಸೆ.25ರಂದು ಭೋಪಾಲ್‌ನಲ್ಲಿ ಮುಕ್ತಾಯವಾಗಿತ್ತು.
ಸ್ವರ್ಣ ಜಯಂತಿ ರಥಯಾತ್ರೆ- 1997 ಮೇ ಮತ್ತು ಜುಲೈನಲ್ಲಿ ದೇಶಾದ್ಯಂತ ಸಂಚರಿಸಿತ್ತು.
ಭಾರತ್ ಉದಯ ಯಾತ್ರೆ- 2004ರ ಲೋಕಸಭೆ ಚುನಾವಣೆಗಾಗಿ ಕೈಗೊಂಡಿದ್ದ ಯಾತ್ರೆ
ಜನ ಚೇತನಾ ಯಾತ್ರೆ- ಬಿಹಾರದ ಸಿತಾಬ್ ದಿಯಾರಾದಿಂದ 2011ರ ಅ.11ರಂದು ಶುರು ಮಾಡಿದ್ದರು.
ವಸುಂಧರಾ ರಾಜೆ
6,000 ಕಿಮೀ- ಪಾದಯಾತ್ರೆ ದೂರ
165- ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ
46 ದಿನ- ಯಾತ್ರೆಯ ಅವಧಿ
2018ರಲ್ಲಿ ರಾಜಸ್ಥಾನ ವಿಧಾನಸಭೆ ಚುನಾವಣೆ ಸಮೀಸುತ್ತಿದ್ದಂತೆಯೇ ಸಿಎಂ ಆಗಿದ್ದ ವಸುಂಧರಾ ರಾಜೆ “ಸುರಾಜ್ ಗೌರವ್ ಯಾತ್ರಾ’ ಕೈಗೊಂಡಿದ್ದರು.
2018ರ ಆ.1ರಿಂದ 2018 ಸೆ.15ರ ವರೆಗೆ ಅದು ನಡೆದಿತ್ತು.
2003ರ ಬಳಿಕ ರಾಜೆ ಕೈಗೊಂಡಿದ್ದ ಮೂರನೇ ಯಾತ್ರೆ ಇದಾಗಿತ್ತು. ಆ ಸಂದರ್ಭದಲ್ಲಿ 200 ಕ್ಷೇತ್ರಗಳಿಗೆ ಅವರು ಭೇಟಿ ನೀಡಿದ್ದರು.
ವೈ.ಎಸ್.ಜಗನ್ಮೋಹನ ರೆಡ್ಡಿ
3,648 ಕಿಮೀ- ಪಾದಯಾತ್ರೆಯ ದೂರ
341 ದಿನ- ಯಾತ್ರೆಯ ಅವಧಿ
13 ಜಿಲ್ಲೆ- ಇಷ್ಟು ಪ್ರದೇಶಗಳ ವ್ಯಾಪ್ತಿ
02 ಕೋಟಿ- ಇಷ್ಟು ಮಂದಿಯ ಜತೆಗೆ ಭೇಟಿ
ಪ್ರಜಾಸಂಕಲ್ಪ ಯಾತ್ರೆ ಎಂಬ ಹೆಸರಿನ ಈ ಯಾತ್ರೆ 2017ರ ನ.6ರಂದು ಜಗನ್ಮೋಹನ ರೆಡ್ಡಿ ಆರಂಭಿಸಿದ್ದರು.
ರಾಜಶೇಖರ ರೆಡ್ಡಿಯವರ ಸ್ವಗ್ರಾಮ ಕಡಪಾ ಜಿಲ್ಲೆಯ ಇಡುಪುಲಪಾಯದಿಂದ ಯಾತ್ರೆ ಶುರು. 2019ರ ಜ.10ರಂದು ಶ್ರೀಕಾಕುಳಂ ಜಿಲ್ಲೆಯ ಇಚ್ಚಾಪುರಂನಲ್ಲಿ ಮುಕ್ತಾಯ.
ತಂದೆ ರಾಜಶೇಖರ ರೆಡ್ಡಿ ಕೈಗೊಂಡಿದ್ದ 1,500 ಕಿಮೀ ದೂರದ ಪಾದಯಾತ್ರೆಯನ್ನು ಅವರು ಮುರಿದಿದ್ದಾರೆ.
ದೇಶದಲ್ಲಿ ಯಾವುದೇ ರಾಜಕಾರಣಿ ಕೈಗೊಂಡ ದೀರ್ಘಾವಧಿಯ ಪಾದಯಾತ್ರೆ ಎಂಬ ಹೆಗ್ಗಳಿಕೆ ಅವರಿಗಿದೆ.
ಚಂದ್ರಬಾಬು ನಾಯ್ಡು
13 - ಇಷ್ಟು ಜಿಲ್ಲೆಗಳಲ್ಲಿ ಸಂಚಾರ
35- ಯಾತ್ರೆ ಅವಧಿ
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು “ತೆಲುಗು ಜಾತಿ ಆತ್ಮ ಗೌರವ ಯಾತ್ರೆ’ ಕೈಗೊಂಡಿದ್ದರು.
ಬಸ್‌ನಲ್ಲಿ ಒಂದು ತಿಂಗಳ ಕಾಲ ಅವರು ಸಂಚರಿಸಿ, ಯುಪಿಎ ಸರ್ಕಾರದ ನಿರ್ಧಾರ ಖಂಡಿಸಿದ್ದರು.
ಗುಂಟೂರಿನ ಪೊಂಡುಗುಲದಿಂದ 2013 ಅ.2ರಂದು ಯಾತ್ರೆ ಶುರು ಮಾಡಿದ್ದರು.
ವೈ.ಎಸ್.ರಾಜಶೇಖರ ರೆಡ್ಡಿ
1,500 ಕಿಮೀ- ಪಾದಯಾತ್ರೆ ದೂರ
60- ಇಷ್ಟು ದಿನ
11- ಜಿಲ್ಲೆಗಳು
ಆಂಧ್ರಪ್ರದೇಶದಲ್ಲಿನ ಕೃಷಿಕರ ಸಮಸ್ಯೆ, ಬರಗಾಲದ ಸಮಸ್ಯೆ ಬಗ್ಗೆ ಗಮನ ಸೆಳೆಯಲು ಅವರು “ಪ್ರಜಾ ಪ್ರಸ್ತಾನಂ ಪಾದಯಾತ್ರೆ’ ಕೈಗೊಂಡಿದ್ದರು.
ಟಿಡಿಪಿ ಸರ್ಕಾರ ಬರ ಪರಿಹಾರ ಕಾಮಗಾರಿಗಳಿಗೆ ಹೆಚ್ಚಿನ ಒತ್ತುನೀಡಿಲ್ಲ ಎನ್ನುವುದು ಆರೋಪವಾಗಿತ್ತು.
ಜತೆಗೆ ಪಕ್ಷವನ್ನು ಅಧಿಕಾರಕ್ಕೆ ತರುವುದೂ ಅವರ ಗುರಿಯಾಗಿತ್ತು. 2003 ಏ.9 ರಿಂದ 2003 ಜೂ.9ರ ವರೆಗೆ ಪಾದಯಾತ್ರೆ ನಡೆದಿತ್ತು.
ಎಚ್.ಡಿ.ದೇವೇಗೌಡ
80 ಕಿಮೀ- ಪಾದಯಾತ್ರೆ ದೂರ
05 ದಿನ- ಅವಧಿ
ನೀರಾ ತೆಗೆವ ವಿವಾದಲ್ಲಿ ಇಬ್ಬರು ರೈತರು ಪೊಲೀಸರು ಹಾರಿಸಿದ್ದ ಗುಂಡಿಗೆ ಅಸುನೀಗಿದ್ದರು.
ಚನ್ನಪಟ್ಟಣ ತಾಲೂಕಿನ ವಿಠಲೇನಹಳ್ಳಿ ಯಿಂದ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆ ವರೆಗೆ ದೇವೇಗೌಡರು 2001ರ ಅ.28ರಿಂದ 2001 ನ.1ರ ವರೆಗೆ ಯಾತ್ರೆ ಕೈಗೊಂಡಿದ್ದರು.
ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರದ ವಿರುದ್ಧ ಅದು ದೇವೇಗೌಡರ ಮೊದಲ ಪ್ರತಿಭಟನೆ ಎಂದು ವ್ಯಾಖ್ಯಾನಿಸಲಾಗಿತ್ತು.
2013 ಫೆ.12ರಂದು ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಜೆಡಿಎಸ್ ವರಿಷ್ಠ ಬೆಂಗಳೂರು ನಗರದಲ್ಲಿ ಪಾದಯಾತ್ರೆ ಕೈಗೊಂಡಿದ್ದರು.
ಎಸ್.ಎಂ.ಕೃಷ್ಣ
100 ಕಿಮೀ- ಇಷ್ಟು ದೂರ ಪಾದಯಾತ್ರೆ
06 ದಿನ- ಅವಧಿ
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ 2002 ಅ.7ರಿಂದ 2002 ಅ.11ರ ವರೆಗೆ ಆರು ದಿನಗಳ ಪಾದಯಾತ್ರೆ ಕೈಗೊಂಡಿ ದ್ದರು. ಬೆಂಗಳೂರಿನ ರಾಜರಾ ಜೇಶ್ವರಿ ನಗರದಿಂದ ಮಂಡ್ಯದ ವರೆಗೆ ನಡೆದಿದ್ದರು.
ಈ ಸಂದರ್ಭದಲ್ಲಿ ನೀರು ಹಂಚಿಕೆ ವಿಚಾರ ಸುಪ್ರೀಂಕೋರ್ಟ್ ಮುಂದೆ ಇದ್ದಿದ್ದರಿಂದ ಅದು ಭಾರಿ ಆಕ್ಷೇಪ ವ್ಯಕ್ತಪಡಿಸಿತ್ತು.
ಮುರಳಿ ಮನೋಹರ ಜೋಶಿ
14 ಜಿಲ್ಲೆಗಳಲ್ಲಿ ಸಂಚಾರ
1992ರ ಗಣರಾಜ್ಯೋತ್ಸವದಂದು ಶ್ರೀನಗರದ ಲಾಲ್ ಚೌಕ್‌ನಲ್ಲಿ ಅಂದಿನ
ಬಿಜೆಪಿ ಅಧ್ಯಕ್ಷ ಮುರಳಿ ಮನೋಹರ್ ಜೋಶಿ, ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು.
ತಿರಂಗಾ ಯಾತ್ರಾ ಎಂದೂ ಕರೆಸಿಕೊಂಡ “ಏಕತೆ ಯಾತ್ರೆ’ ಕನ್ಯಾಕುಮಾರಿಯಿಂದ ಆರಂಭವಾಗಿ ಕಾಶ್ಮೀರದ ಶ್ರೀನಗರದಲ್ಲಿ ಕೊನೆಗೊಂಡಿತ್ತು.
1992ರ, ಜನವರಿ 26ರ ಈ ಐತಿಹಾಸಿಕ ಸಮಯದಲ್ಲಿ ಜೋಶಿ ಅವರ ತಂಡದಲ್ಲಿ ನರೇಂದ್ರ ಮೋದಿಯವರೂ ಇದ್ದರು. 14 ರಾಜ್ಯಗಳ ಮುಖಾಂತರ ಹಾದುಹೋದ ಈ ಯಾತ್ರೆಯು ಜೋಶಿಯವರ ಹೆಸರನ್ನು ವಿಖ್ಯಾತಗೊಳಿಸಿಬಿಟ್ಟಿತು.
ಚಂದ್ರಶೇಖರ್
4,260 ಕಿ.ಮೀ- ಪಾದಯಾತ್ರೆಯ ದೂರ
ಜನವರಿ 6, 1983ರಂದು ಜನತಾ ಪಾರ್ಟಿಯ ಅಧ್ಯಕ್ಷ ಚಂದ್ರಶೇಖರ್ ಅವರು ಆರಂಭಿಸಿದ “ಭಾರತ ಯಾತ್ರೆ’ ವಿಪರೀತ ಸದ್ದು ಮಾಡಿತು. ಅದೇ ದಿನವೇ ಅವರ ಪಕ್ಷ ಕರ್ನಾಟಕದಲ್ಲಿ ಜಯಭೇರಿ ಬಾರಿಸಿತ್ತು. 6 ತಿಂಗಳ ಈ ಪಾದಯಾತ್ರೆಯನ್ನು ಚಂದ್ರಶೇಖರ್ ತಂಡ ಕನ್ಯಾಕುಮಾರಿಯಿಂದ ದೆಹಲಿವರೆಗೆ ನಡೆಸಿತು.
ಭಾರತೀಯ ಜನ ಜೀವನವನ್ನು ಹತ್ತಿರದಿಂದ ನೋಡುವ ಮತ್ತು ಜನರು ಹಾಗೂ ರಾಜಕೀಯವರ್ಗದ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಈ ಯಾತ್ರೆಯ ಉದ್ದೇಶವೆಂದು ಚಂದ್ರಶೇಖರ್ ಹೇಳಿದ್ದರು. ಭಾರತದ ಪ್ರಧಾನಿಯಾಗುವದಕ್ಕೂ ಭಾರತ ಯಾತ್ರೆ ಸಮಯದಲ್ಲಿ ಅವರು ಗಳಿಸಿದ್ದ ವರ್ಚಸ್ಸು ಕಾರಣ ಎನ್ನಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.