ಶ್ರೀಶಾಂತ್ಗೆ ಎಷ್ಟು ವರ್ಷ ನಿಷೇಧ?
Team Udayavani, Apr 6, 2019, 6:00 AM IST
ಹೊಸದಿಲ್ಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ನಲ್ಲಿ ಆಜೀವ ನಿಷೇಧಕ್ಕೊಳಗಾಗಿರುವ ವೇಗದ ಬೌಲರ್ ಎಸ್. ಶ್ರೀಶಾಂತ್ ಅವರ ಶಿಕ್ಷೆಯನ್ನು ಇನ್ನು ಮೂರು ತಿಂಗಳಲ್ಲಿ ಮರು ನಿರ್ಧಾರ ಮಾಡಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಬಿಸಿಸಿಐಗೆ ಆದೇಶಿಸಿದೆ. ಬಿಸಿಸಿಐನಿಂದ ನೇಮಕಗೊಂಡಿರುವ ವಿಶೇಷ ತನಿಖಾಧಿಕಾರಿ ಡಿ.ಕೆ. ಜೈನ್ಗೆ ಶಿಕ್ಷೆ ಪ್ರಮಾಣ ನಿರ್ಧರಿಸಬೇಕಾದ ಹೊಣೆಗಾರಿಕೆ ವಹಿಸಲಾಗಿದೆ.
ತನ್ನ ಮೇಲಿನ ಆಜೀವ ನಿಷೇಧವನ್ನು ಬಿಸಿಸಿಐ ರದ್ದುಗೊಳಿಸಬೇಕು ಎಂದು ಶ್ರೀಶಾಂತ್ ಸರ್ವೋಚ್ಚ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದರು. ಮಾ. 15ರಂದು ಶ್ರೀಶಾಂತ್ ವಾದವನ್ನು ಪರಿಗಣಿಸಿದ ನ್ಯಾಯಾಲಯ, ಅವರ ಮೇಲಿನ ಆಜೀವ ನಿಷೇಧವನ್ನು ರದ್ದುಗೊಳಿಸಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಮರು ನಿಗದಿ ಮಾಡುವ ಅಧಿಕಾರವನ್ನು ಬಿಸಿಸಿಐಗೇ ನೀಡಿತು.
ಸಿಸಿಐ ವಿಶೇಷಾಧಿಕಾರಿ, ಡಿ.ಕೆ. ಜೈನ್ ಅವರು ಶ್ರೀಶಾಂತ್ಗೆ ಎಷ್ಟು ವರ್ಷದ ನಿಷೇಧ ವಿಧಿಸುತ್ತಾರೆ ಎನ್ನುವುದು ಈಗ ಕುತೂಹಲಕಾರಿ ಸಂಗತಿ. ಶ್ರೀಶಾಂತ್ ವಾದಿಸಿದಂತೆ 5 ವರ್ಷದ ನಿಷೇಧ ವಿಧಿಸಿದರೆ, ಈಗಾಗಲೇ ಅಷ್ಟು ನಿಷೇಧಾವಧಿ ಪೂರೈಸಿರುವುದರಿಂದ ಅವರು ಬಚಾವಾಗುತ್ತಾರೆ. ಆದರೆ ಇನ್ನೂ ಹೆಚ್ಚಿನ ಅವಧಿ ಶಿಕ್ಷೆ ನೀಡಿದರೆ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳುವ ಅವರ ಕನಸಿಗೆ ಕೊಡಲಿಯೇಟು ಬಿದ್ದಂತಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.