ಹೈದರಾಬಾದ್-ಮುಂಬೈ ಮುಖಾಮುಖಿ
Team Udayavani, Apr 6, 2019, 6:00 AM IST
ಹೈದರಾಬಾದ್: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯ ಸಾಧಿಸಿ ಅಗ್ರಸ್ಥಾನಕ್ಕೇರಿದ ಸನ್‌ರೈಸರ್ ಹೈದರಾಬಾದ್ ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ತವರಲ್ಲಿ ಸೆಣಸಲಿದೆ. ಇನ್ನೊಂದೆಡೆ ಮುಂಬೈ ಹಾಲಿ ಚಾಂಪಿಯನ್ ಚೆನ್ನೈಗೆ ಈ ಋತುವಿನ ಮೊದಲ ಆಘಾತವಿಕ್ಕಿದ ಉತ್ಸಾಹದಲ್ಲಿದೆ.
ಹೈದರಾಬಾದ್ ಪಾಲಿಗೆ ಇದು ತವರಿನ ಪಂದ್ಯವಾಗಿದ್ದು, ತನ್ನ ಅಗ್ರಸ್ಥಾನವನ್ನು ಗಟ್ಟಿಗೊಳಿಸುವ ಉತ್ತಮ ಅವಕಾಶ ಹೊಂದಿದೆ. ಆದರೆ ಈ ಪಂದ್ಯದಲ್ಲೂ ನಾಯಕ ಕೇನ್ ವಿಲಿಯಮ್ಸನ್ ಆಡುವುದು ಅನುಮಾನ. ಹೀಗಾಗಿ ವಾರ್ನರ್-ಬೇರ್‌ಸ್ಟೊ ಸಿಡಿಯುವುದು ಅನಿವಾರ್ಯ. ಆರ್‌ಸಿಬಿ ವಿರುದ್ಧದ ತವರಿನ ಪಂದ್ಯದಲ್ಲಿ ಇವರಿಬ್ಬರೂ ಶತಕ ಬಾರಿಸಿ ಮೆರೆದಿದ್ದರು. ಅಕಸ್ಮಾತ್ ಈ ಆರಂಭಿಕ ಜೋಡಿ ವಿಫಲವಾದರೆ ಹೈದರಾಬಾದ್ ದೊಡ್ಡ ಮೊತ್ತದ ಯೋಜನೆಯನ್ನು ಕೈಬಿಡಬೇಕಾಗುತ್ತದೆ. ಸನ್‌ರೈಸರ್ ಬೌಲಿಂಗ್ ವಿಭಾಗ ಹೆಚ್ಚು ವೈವಿಧ್ಯಮಯ. ಅಫ್ಘಾನಿಸ್ಥಾನದ ಸ್ಪಿನ್ ಜೋಡಿ ಮೊಹಮ್ಮದ್ ನಬಿ-ರಶೀದ್ ಖಾನ್ ಅಪಾಯಕಾರಿಯಾಗಬಲ್ಲರು.
ಮುಂಬೈ ಬ್ಯಾಟಿಂಗ್ ಸಾಮಾನ್ಯ
ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವಿಭಾಗ ಇನ್ನಷ್ಟು ಗಟ್ಟಿಗೊಳ್ಳಬೇಕಿದೆ. ನಾಯಕ ರೋಹಿತ್, ಕ್ವಿಂಟಲ್ ಡಿ ಕಾಕ್ ಛಾತಿಗೆ ತಕ್ಕ ಆಟವಾಡಿಲ್ಲ. ಕೆರಿಬಿಯನ್ ಆಟಗಾರ ಕೈರನ್ ಪೊಲಾರ್ಡ್ ಇನ್ನೂ ಹೊಡಿಬಡಿ ಆಟಕ್ಕೆ ಇಳಿದಿಲ್ಲ. ಪಾಂಡ್ಯ ಸಹೋದರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಬೌಲಿಂಗ್ ವಿಭಾಗದಲ್ಲಿ ಲಸಿತ ಮಾಲಿಂಗ ಗೈರು ಕಾಡುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.