ಯಾರು ಹಿತವರು ನಿಮಗೆ ಒಂಬತ್ತು ಅಭ್ಯರ್ಥಿಗಳೊಳಗೆ?
ಕಾಸರಗೋಡು ಚುನಾವಣ ಕ್ಷೇತ್ರ
Team Udayavani, Apr 6, 2019, 6:10 AM IST
ಕುಂಬಳೆ: ಕೇರಳದ ಒಟ್ಟು 20 ಲೋಕಸಭಾ ಕ್ಷೇತ್ರಗಳಲ್ಲಿ 01 ನಂಬ್ರದ ಕಾಸರಗೋಡು ಲೋಕಸಭಾ ಕ್ಷೇತ್ರ ಪ್ರಕೃತ ಪ್ರಚಾರದಲ್ಲಿ ಹೈ ಅಲರ್ಟ್ ಆಗಿದೆ. ಒಟ್ಟು ಹನ್ನೊಂದು ಮಂದಿ ನಾಮಪತ್ರಿಕೆ ಸಲ್ಲಿಸಿರುವರು.ಇದರಲ್ಲಿ ಐಕ್ಯರಂಗ,ಎಡರಂಗ ಮತ್ತು ಎನ್.ಡಿ.ಎ.ಪಕ್ಷಗಳ ಮೂವರು ಪ್ರಬಲ ಸ್ಪರ್ಧಿಗಳು ಕಣಕ್ಕಿಳಿದಿರುವರು. ಸುಡು ಬಿಸಿಲಿನ ತಾಪಮಾನವನ್ನೂ ಲೆಕ್ಕಿಸದೆ ಕಾಸರಗೋಡು ಲೋಕಸಭಾ ಕ್ಷೇತ್ರದ ಎಡರಂಗ, ಐಕ್ಯರಂಗ, ಎನ್. ಡಿ.ಎ. ಪಕ್ಷಗಳ ಅಭ್ಯರ್ಥಿಗಳು ಕ್ಷೇತ್ರದಾದ್ಯಂತ ಬಿರುಸಿನ ಮತಬೇಟೆಯಲ್ಲಿ ನಿರತರಾಗಿದ್ದಾರೆ.
ಸತೀಶ್ಚಂದ್ರನ್ ನಾಗಾಲೋಟ
ಎಡರಂಗದ ಅಭ್ಯರ್ಥಿ ಕೆ.ಪಿ. ಸತೀಶ್ಚಂದ್ರನ್ ಅವರು ಕ್ಷೇತ್ರದ 7 ವಿಧಾನ ಸಭಾ ಕ್ಷೇತ್ರಗಳಲ್ಲಿ ನಾಯಕರೊಂದಿಗೆ ಪ್ರಥಮ ಹಂತದ ಪರ್ಯಟನೆ ನಡೆಸಿ ಇದೀಗ ದ್ವಿತೀಯ ಹಂತದ ಸುತ್ತಾಟದಲ್ಲಿ ತೊಡಗಿದ್ದಾರೆ. ಮತದಾರರನ್ನು ಮುಖತಃ ಭೇಟಿ ಮತ್ತು ಗೋಡೆಬರಹ ಫ್ಲೆಕ್ಸ್ ಪ್ರಚಾರದಲ್ಲಿ ಇವರು ಭಾರೀ ಮುಂದಿದ್ದಾರೆ. ರಾಜ್ಯ ಎಡರಂಗ ಸರಕಾರದ ಸಾಧನೆ, ಕಳೆದ ಮೂರು ಬಾರಿಗೆ ಆಯ್ಕೆಯಾದ ಎಡರಂಗದ ಲೋಕಸಭಾ ಸದಸ್ಯ ಪಿ. ಕರುಣಾಕರನ್ ಅವರು ಕ್ಷೇತ್ರಾದ್ಯಂತ ಕೈಗೊಂಡ ಅಭಿವೃದ್ಧಿ ಸಾಧನೆಯ ಕುರಿತು ಮತದಾರರಿಗೆ ಅರುಹುವ ಪ್ರಯತ್ನ ಮಾಡುತ್ತಿದ್ದಾರೆ. ಇವರಿಗೆ ಅಲ್ಲಲ್ಲಿ ಪಕ್ಷದ ಕಾರ್ಯಕರ್ತರು ಭಾರೀ ಸ್ವಾಗತ ನೀಡುತ್ತಿದ್ದಾರೆ. ಮುತ್ತು ಕೊಡೆಯೊಂದಿಗೆ ವಾದ್ಯಮೇಳಗಳಲ್ಲಿ ಮೈಸೂರು ಪೇಟಾ, ಹಾಳೆಯ ಮುಟ್ಟಪ್ಪಾಳೆ ತೊಡಿಸಿ,ಕೆಂಬಣ್ಣದ ಶಾಲು, ಹಾರ, ಹಾಕಿ ಜಯಘೋಷ ಮೊಳಗಿಸಿ ಬರಮಾಡಿಕೊಳ್ಳುವರು. ಮೂರು ಅವಧಿಗೆ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ, ಪ್ರಕೃತ ಪಕ್ಷದ ರಾಜ್ಯ ಸಮಿತಿ ಸದಸ್ಯರಾಗಿ ಸಾಕಷ್ಟು ಅನುಭವವವನ್ನು ಹೊಂದಿರುವ ಕೆ.ಪಿ. ಸತೀಶ್ಚಂದ್ರನ್ ಅವರು ಮತ್ತೆ ಈ ಕ್ಷೇತ್ರವನ್ನು ಎಡರಂಗದ ತೆಕ್ಕೆಯಲ್ಲೇ ಉಳಿಸುವ ವಿಶ್ವಾಸದೊಂದಿಗೆ ನಾಗಾಲೋಟದಲ್ಲಿ ಸಾಗುತ್ತಿರುವರು. ಮಲೆಯಾಳಿಯಾದರೂ ಕನ್ನಡ ತುಳು ಮಾತುಗಳನ್ನು ಅಲ್ಪಸ್ವಲ್ಪ ಬಲ್ಲವರಾಗಿದ್ದಾರೆ. ಹಿದಿನಿಂದಲೂ ಬಹುತೇಕ ಮಂಡಲಗಳಲ್ಲೂ ಹತೋಟಿ ಹೊಂದಿರುವ, ಹೆಚ್ಚಿನ ಮತದಾರರ ಪರಿಚಯವಿರುವ ಇವರು ಭಾರೀ ಬಹುಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವನ್ನು ಹೊಂದಿದ್ದಾರೆ. ಲೋಕಸಭಾ ಕೇÒತ್ರಕ್ಕೆ ಪ್ರಥಮವಾಗಿ ಸ್ಪರ್ಧಿಸುತ್ತಿರುವ ಇವರು ಹಿಂದೆ ಎರಡು ಬಾರಿ ತೃಕ್ಕರಿಪ್ಪುರ ವಿಧಾನಸಭಾ ಕೇÒತ್ರದ ಶಾಸಕರಾಗಿ ಅನುಭವ ಸಂಪನ್ನರಾಗಿರುವರು.
ಬಿರುಸಿನ ಪ್ರಚಾರ
ಐಕ್ಯರಂಗದ ಅಭ್ಯರ್ಥಿ ಎ.ಐ.ಸಿ.ಸಿ ಸದಸ್ಯ, ಕೆ.ಪಿ.ಸಿ.ಸಿ. ವಕ್ತಾರ ರಾಜ್‌ಮೋಹನ್ ಉಣ್ಣಿತ್ತಾನ್ ಕಳೆದ 2006ರಲ್ಲಿ ತಲಶೆÏàರಿಯಲ್ಲಿ ಮತ್ತು 2016ರಲ್ಲಿ ಕುಂಡರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವರು.ಉತ್ತಮ ವಾಗ್ಮಿಯಾಗಿರುವ ಇವರು ಕೇರಳದ ಚಾನೆಲ್ ಚರ್ಚೆಗಳಲ್ಲಿ ಭಾಗವಹಿಸಿ ಜನಪ್ರಿಯರಾಗಿರುವರು. ಕಳೆದ ಬಾರಿ ಕಾಸರಗೋಡಿನಲ್ಲಿ ಕೇವಲ 6,921 ಮತಗಳ ಅಂತರದಿಂದ ಸೋಲನ್ನು ಕಂಡ ಐಕ್ಯರಂಗ, ಈ ಬಾರಿ ಭಾರೀ ಅಂತರದ ಗೆಲುವು ನಿಶ್ಚಿತವೆಂಬುದಾಗಿ ಬೆಂಬಲಿಗರೊಂದಿಗೆ ಬಿರುಸಿನ ಪ್ರಚಾರದಲ್ಲಿ ಸಾಗುತ್ತಿರುವರು.ಬಹುಮತದ ಅಂತರವನ್ನು ಮತದಾರರೇ ನಿರ್ಧರಿಸಬಲ್ಲರೆನ್ನುವರು.
ಹಿಂದಿನ ಯುಪಿಎ ಸರಕಾರದ ಅಭಿವೃದ್ಧಿ ಸಾಧನೆ, ಇಂದಿನ ಕೇಂದ್ರ ಎನ್.ಡಿ.ಎ.ಮತ್ತು ರಾಜ್ಯ ಎಡರಂಗ ಸರಕಾರಗಳ ಆಡಳಿತ ವೈಫಲ್ಯಗಳನ್ನು ಮತದಾರರ ಮುಂದೆ ಎತ್ತಿತೋರಿಸಿ ಮತ್ತೆ ಕೇಂದ್ರದಲ್ಲಿ ಕೋಮುವಾದ ಸರಕಾರದ ಬದಲು
ಜಾತ್ಯಾತೀತ ಸರಕಾರದ ಆಡಳಿತಕ್ಕೆ ಸಹಕರಿಸಬೇಕೆಂಬ ಅಭ್ಯರ್ಥನೆ ಇವರದು.
ತಿಲಕಕ್ಕೆ ತಿಲಾಂಜಲಿ ?
ಆಸ್ತಿಕರಾಗಿದ್ದು ಹಣೆಯಲ್ಲಿ ಸದಾ ಅಡ್ಡ ನಾಮ ಹಾಕುತ್ತಿದ್ದ ರಾಜ್‌ಮೋಹನ್ ಇದೀಗ ಅಲ್ಪಸಂಖ್ಯಾಕರ ಮತ ತಪ್ಪುವ ಭಯದಲ್ಲಿ ತಿಲಕಕ್ಕೆ ತಿಲಾಂಜಲಿ ಹಾಡಿರು ವರೆಂಬ ಆರೋಪ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷರದ್ದು.ಆದರೆ ಈ ಕುರಿತು ಮಾಧ್ಯಮದ ಪ್ರಶ್ನೆಗೆ ತಿಲಕ ತೊಡುವಲ್ಲಿ ತುರಿಕೆಯ ಬಾಧೆಯಿಂದ ಕೆಲಕಾಲ ತಿಲಕ ಧರಿಸಬಾರ ದೆಂಬ ವೈದ್ಯರ ಸಲಹೆಯನ್ನು ಪಾಲಿಸ ಬೇಕಾಗಿದೆ. ವಾಸಿಯಾದ ಬಳಿಕ ಮತ್ತೆ ತಿಲಕ ತೊಡುವು ದಾಗಿ ಅಭ್ಯರ್ಥಿಯ ಹೇಳಿಕೆ ಯಾಗಿದೆ. ಈ ಬಾರಿ ಕಾಂಗ್ರೆಸ್ ಪಕ್ಷದ ಪಾಲಿಗೆ ದೇಶದಾದ್ಯಂತ ಉತ್ತಮ ವಾತಾ ವರಣ ಸೃಷ್ಟಿಯಾಗಿದ್ದು ಕೇರಳದಲ್ಲೂ ಬದಲಾವಣೆಯ ಗಾಳಿ ಬೀಸುತ್ತಿರುವ ವಿಶ್ವಾಸ ಹೊಂದಿದ್ದಾರೆ.
ತಂತ್ರಿಯವರ ಟೆಂಪಲ್‌ರನ್
ಅಚ್ಚಕನ್ನಡಿಗ, ಮಲೆಯಾಳ ಬಲ್ಲ ಎನ್.ಡಿ.ಎ. ಅಭ್ಯರ್ಥಿ ಕುಂಟಾರು ರವೀಶ ತಂತ್ರಿಯವರು ವೈದಿಕ ತಾಂತ್ರಿಕ ವಿಧಿವಿಧಾನಗಳಿಗೆ ಆಲ್ಪ ವಿರಾಮ ಹಾಡಿ ರಾಜಕೀಯಕ್ಕೆ ಧುಮುಕಿ ಸದ್ಯ ಬಿ.ಜೆ.ಪಿ.ರಾಜ್ಯ ಸಮಿತಿ ಸದಸ್ಯರಾಗಿರುವರು. ಕಳೆದ 2016ರ ವಿಧಾನ ಸಭಾ ಚುನಾವಣೆಯಲ್ಲಿ ಕಾಸರಗೋಡು ವಿಧಾನಸಭಾ ಕೇÒತ್ರದಲ್ಲಿ ಸ್ಪರ್ಧಿಸಿರುವರು. ಸ್ಥಳೀಯ ಕಾರ್ಯಕರ್ತರ ಅಪೇಕ್ಷೆಯಂತೆ ಆಯಾ ಸ್ಥಳಗಳ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದ ಬಳಿಕ ಕಾರ್ಯಕರ್ತರೊಂದಿಗೆ ಮತಯಾಚನೆಗೆ ತೆರಳುತ್ತಾರೆ.
ಪ್ರಧಾನಿ ನರೇಂದ್ರಮೋದಿ ಅವರ ಸರಕಾರದ ಸಾಧನೆಯ ಕುರಿತು ಮತದಾರರಿಗೆ ವಿವರಿಸುತ್ತಾ ಶಬರಿಮಲೆ ಆಚಾರ ಸಂರಕ್ಷಣೆಗೆ ರಾಜ್ಯ ಸರಕಾರ ಅಡ್ಡಿಪಡಿಸಿದ ಮತ್ತು ರಾಜ್ಯ ಸರಕಾರದ ಆಡಳಿತ ವಿಫಲತೆಯನ್ನು ಜನರ ಮುಂದಿರಿಸಿ ಮತ ಯಾಚಿಸುತ್ತಿರುವ ತಂತ್ರಿಯವರು ದೇಶಾದ್ಯಂತ ಮತ್ತೂಮ್ಮೆ ಮೋದಿ ಹವಾ ಇದ್ದು ಇಲ್ಲಿಯೂ ಗೆಲುವಿನ ವಿಶ್ವಾಸದಲ್ಲಿದ್ದಾರೆ. ತಂತ್ರಿಯನ್ನು ಮಂತ್ರಿ ಮಾಡಲು ಹೊರಟಿರುವರೆಂಬ ವಿಪಕ್ಷದ ಗೇಲಿಗೆ ಮಂತ್ರಿಸ್ಥಾನ ದೊರೆತಲ್ಲಿ ಈ ತಂತ್ರಿ ಮಂತ್ರಿಸ್ಥಾನವನ್ನು ಸಮರ್ಥವಾಗಿ ನಿಭಾಯಿಸಬಲ್ಲೆನೆನ್ನುವರು.ತಂತ್ರಿಯವರು ಕಾರಡ್ಕ ಗ್ರಾ. ಪಂ. ಮಾಜಿ ಅಧ್ಯಕ್ಷೆ ಪತ್ನಿ ಸುಜಾತಾ ತಂತ್ರಿಯವರೊಂದಿಗೆ ದಂಪತಿ ಸಮೇತ ಪರ್ಯಟನೆಯಲ್ಲಿ ಮತ ಯಾಚಿಸುತ್ತಿರುವರು.
ಕಾರ್ಯಕರ್ತರ ಕೊರತೆ: ಬಿರುಬಿಸಿಲಿನಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಲು ಕಾರ್ಯಕರ್ತರು ಹಿಂದೇಟು ಹಾಕುತ್ತಿರುವರು.ಇದು ಪ್ರಧಾನ ರಾಜಕೀಯ ಪಕ್ಷಗಳ ನಾಯಕರಿಗೆ ತಲೆನೋವಾಗಿದೆ. ಪ್ರಥಮ, ದ್ವಿತೀಯ, ತೃತೀಯ ಹಂತದ ಬಳಿಕ ಕೊನೆ ಹಂತದ ಮತಯಾಚನೆ ಎಲ್ಲÉ ಪಕ್ಷಗಳ ನಾಯಕರ ಯೋಜನೆಯಾಗಿದ್ದರೂ ಇದನ್ನು ಕಾರ್ಯಕರ್ತರು ಪಾಲಿಸಲು ಮುಂದಾಗುತ್ತಿಲ್ಲ. ಹಿಂದಿನ ಕಾಲದಲ್ಲಿ ಹೆಚ್ಚಿನ ಮತದಾರರು ಶಿಕ್ಷಿತರಾಗಿಲ್ಲವಾಯಿತು.ಆದರೆ ಇಂದು ಹೆಚ್ಚಿನ ಮತದಾರರು ಸುಶಿಕ್ಷಿತ ರಾಗಿದ್ದು ಪ್ರಬುದ್ಧ ಮತದಾರರು ಆಯಾ ಪಕ್ಷಗಳಿಗೆ ಮತ ನೀಡಲು ಚುನಾವಣೆ ಘೋಷಿಸಿದ ಬಳಿಕ ನಿರ್ಧರಿಸಿದ್ದಾರೆ. ಆದ್ದರಿಂದ ಮತದಾರರರಲ್ಲಿ ಒಂದು ಬಾರಿ ಮತಯಾಚನೆಗೆ ತೆರಳಿದರೆ ಸಾಕೆಂಬ ನಿಲುವು ಆಯಾ ರಾಜಕೀಯ ಪಕ್ಷಗಳ ಕಾಯಕರ್ತರದು.
ಹಿಂದಿನ ಕಾಲದಂತೆ ಇಂದು ಎಲ್ಲ ಪಕ್ಷಗಳ ಹೆಚ್ಚಿನ ಕಾಯಕರ್ತರು ಮತಯಾಚನೆಯ ಸೇವೆಗೆ ಸಿದ್ಧರಲ್ಲ. ಹೆಚ್ಚಿನವರು ಪೇಯ್ಡ ಕಾಯಕರ್ತರಾಗಿ ಮಾರ್ಪಾಡು ಗೊಂಡಿದ್ದಾರೆ. ಆದುದರಿಂದ ಕಾರ್ಯಕರ್ತರ ಖರ್ಚುವೆಚ್ಚವನ್ನು ಆಯಾ ಪಕ್ಷಗಳೇ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಮಾತ್ರವಲ್ಲದೆ ಪಾರ್ಟಿಯ ವತಿಯಿಂದ ಗುಂಡು ತುಂಡಿನ ಪಾರ್ಟಿಯನ್ನೂ ನೀಡಬೇಕಾಗುವುದು.
ಮಹಿಳೆಯರದೇ ಪಾರಮ್ಯ
ಕೇರಳ ರಾಜ್ಯದಾದ್ಯಂತ ಎ. 23ರಂದು ಒಂದೇ ಹಂತದಲ್ಲಿ 20 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿರುವುದು. ಮಂಜೇಶ್ವರ, ಕಾಸರಗೋಡು, ಉದುಮ, ಕಾಞಂಗಾಡು, ತೃಕ್ಕರಿಪುರ, ಪಯ್ಯನ್ನೂರು, ಕಲ್ಯಾಶೆÏàರಿ ಎಂಬೀ 7 ವಿಧಾನಸಭಾ ಕೇÒತ್ರಗಳನ್ನು ಹೊಂದಿರುವ ಈ ಕೇÒತ್ರದಲ್ಲಿ ಮಹಿಳೆಯರದೇ ಮೇಲುಗೈ ಯಾಗಿದೆ. ಒಟ್ಟು 13,24,387 ಮತದಾರರಲ್ಲಿ 6,36,689 ಪುರುಷ ಮತದಾರರು ಮತ್ತು 6,87,696 ಮಹಿಳಾ ಮತದಾರರನ್ನು ಹೊಂದಿದ್ದಾರೆ. 683 ಕೇಂದ್ರಗಳಲ್ಲಿ ಒಟ್ಟು 1,317 ಮತಗಟ್ಟೆಗಳನ್ನು ಹೊಂದಿದೆ. ಕಳೆದ 15 ಅವಧಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ 12 ಬಾರಿಯೂ ಎಡರಂಗದ ಪಾಲಾದ ಕಾಸರಗೋಡು ಲೋಕಸಭಾ ಕ್ಷೇತ್ರದ ಜಿದ್ದಾಜಿದ್ದಿನ ಹೋರಾಟ ದಲ್ಲಿ ಈ ಬಾರಿ ವಿಜಯಲಕ್ಷ್ಮಿ ಯಾರ ಪಾಲಿಗೆ ಒಲಿಯು ವಳೆಂದು ಕಾದು ನೋಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.