ದ್ವೇಷ, ಆತಂಕ ಸೃಷ್ಟಿ ಮೋದಿ ಸಾಧನೆ: ಸುದರ್ಶನ್
Team Udayavani, Apr 6, 2019, 8:34 AM IST
ಮಂಗಳೂರು: ದ್ವೇಷ, ಆತಂಕದ ವಾತಾವರಣ ಸೃಷ್ಟಿಯೇ ಮೋದಿ ಸಾಧನೆಯಾಗಿದ್ದು, ಇದನ್ನು ತೊಡೆದು ಸೌಹಾರ್ದ ಮತ್ತು ಭಾವೈಕ್ಯ ಪರಂಪರೆಯ ರಕ್ಷಣೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಗತ್ಯ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್ ಹೇಳಿದರು.
ಶುಕ್ರವಾರ ಪಕ್ಷದ ಚುನಾವಣ ಪ್ರಣಾಳಿಕೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿ, ಪ್ರಸ್ತುತ ಚುನಾವಣೆ ವಿಷಯಗಳ ಆಧಾರದ ಮೇಲೆ ನಡೆಯುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಮಾನಮನಸ್ಕ ಪಕ್ಷಗಳು ಒಟ್ಟಾಗಿ ಬಿಜೆಪಿಗೆ ಸೋಲು ಉಣಿಸುವುದು ಖಚಿತ ಎಂದರು.
ಮೋದಿ ಸರಕಾರ ಜನವಿರೋಧಿ, ರೈತ ವಿರೋಧಿ ನೀತಿ ಅನುಸರಿಸುತ್ತ ಬಂದಿದೆ. ಆಡಳಿತದಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಭಯೋತ್ಪಾದನೆ ಹೆಚ್ಚಿದೆ. ಸಾಂವಿಧಾನಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗಿದೆ. ರಾಜ್ಯಗಳು ಮತ್ತು ಕೇಂದ್ರ ಸರಕಾರದ ನಡುವಣ ಸಂಬಂಧ ಶಿಥಿಲವಾಗಿದೆ. ಪ್ರಧಾನಿ ಮೋದಿ ಸಂಸತ್ತಿನಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಂಡಿಲ್ಲ ಎಂದ ಅವರು, ಸಂಸತ್ತಿಗೆ ಪ್ರಾಮುಖ್ಯ ನೀಡದ ಮೋದಿ ಜನಸಾಮಾನ್ಯರಿಗೆ ನೀಡಿಯಾರೇ ಎಂದರು.
ಆಧುನಿಕ ಭಾರತ ನಿರ್ಮಾಣ
ಮೋದಿಯವರು ನ್ಯೂ ಇಂಡಿಯಾ ನಿರ್ಮಾಣ ತಮ್ಮ ಗುರಿ ಎನ್ನುತ್ತಿದ್ದಾರೆ. ಭಾರತಕ್ಕೆ ಬೇಕಾಗಿರುವುದು ಮಾಡರ್ನ್ ಇಂಡಿಯಾ. ಇದು ಕಾಂಗ್ರೆಸ್ ಗುರಿ. ಎಲ್ಲರ ಪ್ರಗತಿ, ಭಾವೈಕ್ಯ ಕಾಂಗ್ರೆಸ್ ಸಿದ್ಧಾಂತವಾಗಿದೆ. ಈ ಹಿಂದೆ ಯುಪಿಎ ಸರಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿತ್ತು. ಈ ಬಾರಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಅನೇಕ ಜನಪರ, ಪ್ರಗತಿಪರ ಭರವಸೆಗಳನ್ನು ನೀಡಿದೆ. ಬಡತನ ನಿರ್ಮೂಲನಕ್ಕೆ ನ್ಯಾಯ್, ಉದ್ಯೋಗ ಸೃಷ್ಟಿಗಾಗಿ ಔದ್ಯೋಗಿಕ ಕ್ರಾಂತಿ, ಕೃಷಿ ಮತ್ತು ಕೃಷಿ ಕಾರ್ಮಿಕರ ಕಲ್ಯಾಣಕ್ಕೆ ವಿವಿಧ ಕಾರ್ಯಕ್ರಮಗಳು, ಸಾರ್ವತ್ರಿಕ ಆರೋಗ್ಯ ಸೇವೆ, ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ, ಸಾಂವಿಧಾನಿಕ ಸಂಸ್ಥೆಗಳ ರಕ್ಷಣೆ ಸೇರಿದಂತೆ ಅನೇಕ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ ಎಂದು ವಿವರಿಸಿದರು.
ರಾಹುಲ್‌ಗಿಂತ ನಳಿನ್ ಸಾಧನೆ ದೊಡ್ಡದು ಎಂಬ ಬಿಜೆಪಿ ಹೇಳಿಕೆ ಕುರಿತು ಪ್ರಶ್ನೆಗೆ ಉತ್ತರಿಸಿ, ದಕ್ಷಿಣ ಕನ್ನಡದಲ್ಲಿ ಬಿಜೆಪಿ ಸಂಸದ ನಳಿನ್ ಸಾಧನೆ ಶೂನ್ಯ. ಇಲ್ಲಿನ ಅಭಿವೃದ್ಧಿ ಕಾರ್ಯಗಳು ರಾಜ್ಯ ಸರಕಾರದಿಂದ ಆಗಿರುವುದು. ರಾಹುಲ್ ಗಾಂಧಿ ಜತೆಗೆ ನಳಿನ್ ಹೋಲಿಕೆ ಹಾಸ್ಯಾಸ್ಪದ ಎಂದರು.
ಮಾಜಿ ಸಚಿವ ಬಿ. ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮಿಥುನ್ ರೈ ಅವರ ಚುನಾವಣ ಏಜೆಂಟ್ ಸದಾಶಿವ ಉಳ್ಳಾಲ, ಜಿಲ್ಲಾ ವಕ್ತಾರ ಎ.ಸಿ. ವಿನಯರಾಜ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಕಾರ್ಯದರ್ಶಿ ನಜೀರ್ ಬಜಾಲ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.