ಬೇವು ಬೆಲ್ಲ- ಸುಖ ದುಃಖಗಳ ಸಂಕೇತ
ಇಂದು ಸಂಭ್ರಮದ ಯುಗಾದಿ ಹಬ್ಬ ಆಚರಣೆ
Team Udayavani, Apr 6, 2019, 10:18 AM IST
ಪಕ್ಷಿಗಳಲ್ಲಿ ನವಿಲು, ಪ್ರಾಣಿಗಳಲ್ಲಿ ಮಾನವ, ಋತುಗಳಲ್ಲಿ ವಸಂತ ಋತು ಶ್ರೇಷ್ಠವಾದಂತೆ ಎಲ್ಲ ಹಬ್ಬಗಳಲ್ಲಿ ಯುಗಾದಿ ಶ್ರೇಷ್ಠ. ಈ ಹಬ್ಬವನ್ನು ಭಾರತ ಪರ್ವದಲ್ಲಿ ಬೇರೆ-ಬೇರೆ ಹೆಸರಿನಿಂದ, ಸಾಮಾನ್ಯವಾಗಿ ಎಲ್ಲರೂ ಆಚರಿಸುತ್ತಾರೆ. ಹಬ್ಬಗಳಲ್ಲಿ ಶ್ರೇಷ್ಠವಾದ ಪ್ರಸಿದ್ಧವಾದ ಯುಗಾದಿ ಹಬ್ಬ ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಬರುತ್ತದೆ. ಯುಗಾದಿ ಹಬ್ಬವು ಹಿಂದೂಗಳ ದೃಷ್ಟಿಯಲ್ಲಿ ವರ್ಷಾರಂಭದ ಪವಿತ್ರ ದಿನ.
ಯುಗಾದಿ ಹಿಂದೂಗಳಿಗೆ ಹೊಸ ವರ್ಷ. ಈ ದಿನ ಮನೆ ಮಂದಿ, ಸಂಬಂಧಿಕರಿಗೆಲ್ಲ ಬೇವು ಬೆಲ್ಲ ಹಂಚುವುದು ವಿಶೇಷ. ಜೀವನದಲ್ಲಿ ಸುಖ ದುಃಖವನ್ನು ಒಂದೇ ರೀತಿಯಲ್ಲಿ ತೆಗೆದುಕೊಳ್ಳಬೇಕು. ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ನಡೆಯಬೇಕು. ಸುಖ ದುಃ ಖವನ್ನು ಸಮಾನವಾಗಿ ಬೇವು ಬೆಲ್ಲದಂತೆ ಸ್ವೀಕರಿಸಬೇಕು ಎಂಬ ಸಂದೇಶದೊಂದಿಗೆ ಹಂಚುತ್ತಾರೆ.
ಯುಗಾದಿ ಹಬ್ಬದಂದು ಬೇವು ಬೆಲ್ಲವನ್ನು ತಿನ್ನುವುದರ ಮೂಲಕ ಆಚರಿಸುತ್ತಾರೆ. ಇನ್ನೂ ಕೆಲವೆಡೆ ಬೇವು ಬೆಲ್ಲವನ್ನು ಆರು ರಸಗಳನ್ನು ಸೇರಿಸಿ ತಯಾರಿಸುತ್ತಾರೆ. ಬೇವಿನ ಮೊಗ್ಗುಗಳು ಅಥವಾ ಕಹಿ ಹೂಗಳು ದುಃಖದ ಸಂಕೇತವಾಗಿದೆ. ಬೆಲ್ಲ ಮತ್ತು ಮಾಗಿದ ಬಾಳೆ ಸಂತೋಷದ ಸಂಕೇತ. ಹಸಿರು ಮೆಣಸಿನಕಾಯಿ ಅಥವಾ
ಮೆಣಸು ಖಾರದ ರುಚಿಯನ್ನು ಹೊಂದಿದ್ದು ಕೋಪದ ಸಂಕೇತ. ಉಪ್ಪು ಭಯದ ಸಂಕೇತ, ಹುಣಿಸೆಹಣ್ಣು ವಾಕರಿಕೆ ತರಿಸುವಂತಹ
ಸಂದರ್ಭದ ಸಂಕೇತ. ಬಲಿಯದ ಮಾವಿನ ಕಾಯಿ ಒಗರಿನ ಗುಣ ಹೊಂದಿದ್ದು ಇದು ಅಹಿತ ಕರ ಸಂದರ್ಭದ ಸಂಕೇತವಾಗಿದೆ. ಜೀವನ ದಲ್ಲಿ ಬರುವ ಎಲ್ಲ ಘಟನೆಗಳನ್ನು ಸಮನಾಗಿ ಸ್ವೀಕರಿಸುತ್ತೇವೆ ಎಂಬುದು ಇತರ ತಾತ್ಪರ್ಯ.
ವೈಜ್ಞಾನಿಕ ಮಹತ್ವ
ಪ್ರತಿಯೊಂದು ಆಚರಣೆಗಳ ಹಿಂದೆ ಒಂದು ಕಾರಣ, ಸಂದೇಶ ಇದ್ದೇ ಇರುತ್ತದೆ. ಯುಗಾದಿಯ ಬೇವು ಬೆಲ್ಲ ಆಚರಣೆಯು
ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೆ ಅದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಬೇವು ಔಷಧೀಯ ಸಸ್ಯವಾಗಿದ್ದು, ಉತ್ತಮ ರೋಗ ನಿರೋಧಕ ಶಕ್ತಿ ಹೊಂದಿದೆ. ತ್ವಚೆಯ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೇವು ಪ್ರೋಟಿನ್ ಮತ್ತು ಖನಿಜಾಂಶವನು ಹೊಂದಿದೆ.
ಎಳೆತಾದ ಬೇವಿನ ಹೂವುಗಳನ್ನು ಬೆಲ್ಲದ ಪುಡಿಯೊಂದಿಗೆ ಸೇರಿಸಿ ಸವಿಯುವುದು ಪದ್ಧತಿ. ಬೇವಿನ ಹೂವಿನ ಚಿಗುರು, ಬೆಲ್ಲದ
ಪುಡಿ, ಹಸಿ ಹುಣಸೆಹಣ್ಣು, ಮಾವಿನ ಕಾಯಿಯ ತುರಿ ಮಿಶ್ರ ಮಾಡಿ ತಿನ್ನುವುದು ಆರೋಗ್ಯಕ್ಕೆ ಉತ್ತಮ ಮತ್ತು ಕೋಪ ಕಡಿಮೆ ಮಾಡಲು ಇದು ಸಹಕಾರಿ. ಮನಸ್ಸಿಗೆ ಹರ್ಷ ನೀಡಿ ಚಟುವಟಿಕೆಯಿಂದಿರಲು, ದೇಹಕ್ಕೆ ಶಕ್ತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೇವು ಬೆಲ್ಲವನ್ನು ಊಟದ ಮೊದಲು ಸವಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.
ಪಂಚಾಂಗ ಶ್ರವಣದ ಮಹತ್ವ
ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದು ಹಬ್ಬದ ವೈಶಿಷ್ಟ್ಯ ಹಾಗೂ ಸಂಪ್ರದಾಯ. ಅಂದು ಮಧ್ಯಾಹ್ನ ಅಥವಾ ಸಂಜೆ ಹಳ್ಳಿಗಳಲ್ಲಿ ಆಲದ ಮರದ ಕೆಳಗೆ, ದೇವಸ್ಥಾನಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪಂಚಾಂಗ ಪಠಣ, ಸಾಮೂಹಿಕ ಶ್ರವಣ
ನಡೆಯುತ್ತದೆ. ಇದು ಮಹಾಭಾರತದ ಕಾಲದಿಂದಲೂ ನಡೆದುಕೊಂಡು ಬಂದಿದೆ.
ಚಂದ್ರನ ಸ್ಥಾನ, ವಿವಿಧ ರಾಶಿ, ಗೃಹಗಳ ಸ್ಥಿತಿಗತಿ ಮುಂತಾದ ವಿಷಯಗಳ ಜತೆಗೆ ಧರ್ಮ, ಭಗವದ್ಗೀತೆ, ಪುರಾಣಗಳ ಸಾರವನ್ನು ತಿಳಿಸುವ ಅದ್ಭುತ ಕಾರ್ಯವೇ ಈ ಪಂಚಾಂಗ ಶ್ರವಣ. ಇದು ಹನುಮನ ದೇಗುಲದಲ್ಲಿ ಹೆಚ್ಚಾಗಿ ನಡೆಯುತ್ತದೆ. ಈ ಹಬ್ಬದ ದಿನ ಪಂಚಾಂಗ ಶ್ರವಣ ಮಾಡುವಾಗ ಸಂಪತ್ತು, ಆಯುಷ್ಯ ವೃದ್ಧಿ, ನಕ್ಷತ್ರದಿಂದ ಪಾಪನಾಶ, ಯೋಗದಿಂದ ರೋಗ ನಾಶ, ಕರಣದಿಂದ ಚಿಂತಿಸುವ ಕಾರ್ಯದಲ್ಲಿ ಸಿದ್ಧಿ ಲಭಿಸುತ್ತದೆ ಎಂಬ ನಂಬಿಕೆ ಇದೆ. ಇದರಲ್ಲಿ ರಾಶಿ ಭವಿಷ್ಯದಿಂದ ಹಿಡಿದು ಮಳೆ ಬೆಳೆ, ಆಯವ್ಯಯ, ಭವಿಷ್ಯ, ಯುದ್ಧ, ಶಾಂತಿ, ಹೀಗೆ ಮನುಕುಲದ ಒಳಿತು ಅಡಗಿರುವ
ವಿಚಾರಗಳೇ ಪ್ರಮುಖವಾಗಿರುತ್ತದೆ.
ಬೇವಿನ ಎಲೆಗಳ ಆಯ್ಕೆ
ಬೇವಿನಲ್ಲಿ ನಾನಾ ಬಗೆಗಳಿವೆ. ಕಾಡುಬೇವು, ಸಿಹಿಬೇವು
ಇತ್ಯಾದಿ. ಕಾಡುಬೇವು ಒರಟಾದ ಎಲೆಯಾಗಿದ್ದು, ಕಹಿಯೊಂದಿಗೆ
ಸ್ವಲ್ಪ ಒಗರಾಗಿರುತ್ತದೆ. ಸಿಹಿಬೇವು ರುಚಿಯಾಗಿರುತ್ತದೆ ಮತ್ತು
ಎಲೆಗಳು ತೆಳುವಾಗಿ ತಿಳಿ ಹಸಿರಾಗಿರುತ್ತದೆ. ಸಾಮಾನ್ಯವಾಗಿ
ಸಿಹಿಬೇವು ಸವಿಯಲು ಉತ್ತಮ.
ಬೆಲ್ಲ ಹೀಗಿರಲಿ
ಕೆಂಪಾದ ಬಂಗಾರದ ಬಣ್ಣದ ಆಕರ್ಷಕ ಬೆಲ್ಲದ ಅಚ್ಚುಗಳು
ಹೆಚ್ಚಾಗಿ ಆಕರ್ಷಕವಾಗಿ ಕಾಣುತ್ತದೆ. ಆದರೆ
ಇವುಗಳು ಹೆಚ್ಚು ಸುಣ್ಣದ ಅಂಶವನ್ನು ಹೊಂದಿದ್ದು
ಆರೋಗ್ಯದ ದೃಷ್ಟಿಯಿಂದ ಉತ್ತಮವಾದುದಲ್ಲ. ಕಪ್ಪಾದ
ಕಡು ಕೆಂಪು ಬಣ್ಣದ ಆರ್ಗಾನಿಕ್ ಬೆಲ್ಲ ಉತ್ತಮವಾದುದು.
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.