ಮನೆ ಪಕ್ಕದಲ್ಲೇ ಟಿಸಿ: ತೆರವಿಗೆ ಒತ್ತಾಯ
ವರ್ಷದ ಹಿಂದೆ ಸ್ಥಳಾಂತರ; ಮನವಿಗೆ ಸ್ಪಂದನೆ ಇಲ್ಲ
Team Udayavani, Apr 6, 2019, 11:59 AM IST
ಜಾಲ್ಸೂರು : ಮನೆಯ ಪಕ್ಕದಲ್ಲೇ ಟ್ರಾನ್ಸ್‌ಫಾರ್ಮರ್ ಅಳವಡಿಸಿ ವರ್ಷವಾಗುತ್ತಿದೆ. ಇದನ್ನು ತೆರವು ಮಾಡುವಂತೆ ಕುಟುಂಬದ ಸದಸ್ಯರು ಆಗ್ರಹಿಸಿದರೂ ಸ್ಥಳಾಂತರಿಸಿಲ್ಲ. ಹೀಗಾಗಿ, ಭಯದಲ್ಲೇ ಬದುಕುವಂತಾಗಿದೆ.
ಜಾಲ್ಸೂರು ಗ್ರಾಮದ ಕುಂದ್ರುಕೋಡಿಯ ಕೆ. ನಾರ್ಣಪ್ಪ ಅವರ ಮನೆಯ ಸಮೀಪ ಮೆಸ್ಕಾಂ ಟಿ.ಸಿ.ಯೊಂದನ್ನು ಅಳವಡಿಸಿದೆ. ಯಾವುದೇ ಮುನ್ಸೂಚನೆ ಕೊಡದೆ ಹಾಕಲಾಗಿರುವ ಈ ಟಿ.ಸಿ. ಮನೆಯಿಂದ ಗರಿಷ್ಠ 6 ಮೀ. ಅಂತರದಲ್ಲಿದೆ. ರಾತ್ರಿ ವೇಳೆ ನೆಮ್ಮದಿಯಿಂದ ನಿದ್ರಿಸಲೂ ಆಗುತ್ತಿಲ್ಲ ಎನ್ನುವುದು ನಾರ್ಣಪ್ಪ ಅವರ ಅಳಲು.
ಮೊದಲಿದ್ದ ಸ್ಥಳ ಬದಲಿಕೆ
ಈ ಹಿಂದೆ ಅಳವಡಿಸಿದ್ದ ಸ್ಥಳದಿಂದ ಟಿ.ಸಿ.ಯನ್ನು ತೆರವುಗೊಳಿಸಿ ಇಲ್ಲಿಗೆ ವರ್ಗಾಯಿಸಿದ್ದಾರೆ. ಮೊದಲಿನ ಟಿಸಿ ಮನೆಯಿಂದ 15 ಮೀ. ದೂರದಲ್ಲಿತ್ತು. ಅಲ್ಲಿ ಜನವಸತಿ ಇರಲಿಲ್ಲ. ಈಗ ನಾರ್ಣಪ್ಪ ಅವರ ಮನೆ ಪಕ್ಕದಲ್ಲೇ ಹಾಕಿದ್ದಾರೆ. ಮೊದಲು ಟಿ.ಸಿ. ಇದ್ದ ಸ್ಥಳದಲ್ಲಿ ಕಟ್ಟಡವೊಂದು ನಿರ್ಮಾಣವಾಗಿದೆ. ಸ್ಥಳ ಬದಲಾವಣೆಗೆ ಇದೂ ಕಾರಣವೇ ಎಂಬ ಸಂಶಯ ಕಾಡುತ್ತಿದೆ.
ಬೆಂಕಿ ಕಿಡಿ ಹೊರಬರುತ್ತಿದೆ
ಟ್ರಾನ್ ಫಾರ್ಮರ್‌ನಲ್ಲಿ ಆಗಾಗ ಬೆಂಕಿಯ ಕಿಡಿಗಳು ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ನಾರ್ಣಪ್ಪ ದಂಪತಿ ಜಾಲ್ಸೂರಿನ ಮುಖ್ಯ ಪೇಟೆಯಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದೂ, ಬೆಳಗ್ಗಿನ ಹೊತ್ತಲ್ಲಿ ಮನೆಯಲ್ಲಿ ಯಾರೂ ಇರುವುದಿಲ್ಲ. ಈ ಭಾಗದಲ್ಲಿ ಕಾಲನಿ ಮಕ್ಕಳು ಹೊರಗಡೆ ಆಟವಾಡುತ್ತಾರೆ. ಅಚಾನಕ್ಕಾಗಿ ಅನಾಹುತ ಸಂಭವಿಸಿದರೆ ಗಮನಿಸುವವರಿಲ್ಲ. ಟಿ.ಸಿ. ಹಾಕುವ ಮೊದಲು ಆ ಜಾಗದಲ್ಲಿ ಮನೆಗೆ ಮಾರ್ಗ ಮಾಡುವ ಯೋಚನೆಯಿತ್ತು. ಆದರೆ, ಅದನ್ನು ಅನುಷ್ಠಾನಕ್ಕೆ ತರುವ ಮೊದಲೇ ಟಿ.ಸಿ. ಅಳವಡಿಸಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಾಣಬೇಕಿದೆ ಎಂದು ನಾರ್ಣಪ್ಪ ದಂಪತಿ ಹೇಳುತ್ತಾರೆ.
ಹಲವು ಇಲಾಖೆಗೆ ದೂರು
ಕುಂದ್ರುಕೋಡಿಯಲ್ಲಿ ಅಳವಡಿಸಿರುವ ಟಿಸಿ ತೆರವುಗೊಳಿಸಲು ಮೆಸ್ಕಾಂಗೆ ಪತ್ರ ಬರೆಯಲಾಗಿದೆ. ಫೋನ್ ಮೂಲಕ ಸುಳ್ಯ ಶಾಸಕರಿಗೆ ಮನವಿ ಮಾಡಿದ್ದಾರೆ. ಜಾಲ್ಸೂರು ಗ್ರಾ.ಪಂ.ಗೂ ದೂರು ಕೊಡಲಾಗಿದೆ. ವಿಭಾಗೀಯ ಅಭಿಯಂತರು, ಮೆಸ್ಕಾಂ ಉಪವಿಭಾಗ ಸುಳ್ಯ, ಅಧೀಕ್ಷಕ ಎಂಜಿನಿಯರ್, ವಿದ್ಯುತ್ ನಿರ್ವಹಣೆ ಮತ್ತು ಪಾಲನೆ ವೃತ್ತ, ಮಂಗಳೂರು, ಕಾರ್ಯಪಾಲಕ ಅಭಿಯಂತರು, ಮೆಸ್ಕಾಂ ಮಂಗಳೂರು, ಇ.ಇ. ಪುತ್ತೂರು ಮೆಸ್ಕಾಂ, ಎ.ಇ. ಸುಳ್ಯ ಮೆಸ್ಕಾಂ, ಜೆ.ಇ. ಸುಳ್ಯ ಮೆಸ್ಕಾಂ – ಇವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಲಾಗಿದೆ. ಧನಾತ್ಮಕ ಪ್ರತಿಕ್ರಿಯೆ ದೊರತಿದ್ದರೂ ಪ್ರಯೋಜನ ಆಗಲಿಲ್ಲ ಎಂದು ನಾರ್ಣಪ್ಪ ಹೇಳಿದ್ದಾರೆ. ಮಳೆಗಾಲದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಮೆಸ್ಕಾಂ ತತ್‌ಕ್ಷಣ ಕಾರ್ಯಪ್ರರ್ವತ್ತರಾಗಬೇಕಿದೆ.
ಶೀಘ್ರ ಬದಲಾವಣೆ
ಕೆಲಸಗಾರರ ಕೊರತೆಯಿಂದ ಟ್ರಾನ್ ಫಾರ್ಮರ್ ತೆರವುಗೊಳಿಸಲು ಸಾಧ್ಯವಾಗಲಿಲ್ಲ. ಇನ್ನೆರಡು ದಿನಗಳಲ್ಲಿ ಸ್ಥಳ ಬದಲಿಸಲಾಗುವುದು.
– ಹರೀಶ್
ಎ.ಇ., ಮೆಸ್ಕಾಂ, ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.