ಬೇವು-ಬೆಲ್ಲ ಬಾಂಧವ್ಯದ ಹಬ್ಬ ಯುಗಾದಿ

ಭಾರತೀಯರಿಗೆ ಇದುವೇ ಹೊಸ ವರ್ಷ ಪ್ರಕೃತಿ ಆರಾಧನೆಯೇ ಹಬ್ಬದ ವೈಶಿಷ್ಟ್ಯ

Team Udayavani, Apr 6, 2019, 12:48 PM IST

06-April-13

ಗುರುಮಠಕಲ್‌: ಚಿಗುರೊಡೆದ ಬೇವು- ಮಾವಿನ ಮರ.

ಗುರುಮಠಕಲ್‌: ಭಾರತೀಯರಿಗೆ ಯುಗಾದಿಯೇ ಹೊಸ ವರ್ಷ. ಆದ್ದರಿಂದಲೇ ವರ್ಷಾರಂಭ ಹಾಗೂ ವರ್ಷಾಂತ್ಯವನ್ನೂ ವಸಂತ ಋತುವಿನಲ್ಲಿಯೇ ಆಚರಿಸುತ್ತಾರೆ.

ಭಾರತೀಯರು ಪ್ರಕೃತಿ ಪ್ರಿಯರು. ಅದಕ್ಕಾಗಿಯೇ ಪ್ರಕೃತಿ ದೇವಿಯ
ಆರಾಧನೆಯಲ್ಲಿ ಬಹುತೇಕ ಹಬ್ಬಗಳನ್ನು ಪ್ರಕೃತಿ ಮಡಿಲಲ್ಲಿಯೇ ಆರಾಧಿಸುತ್ತಾರೆ. ಪ್ರಕೃತಿ ಸೌಂದರ್ಯ ತುಂಬಿಕೊಂಡು, ಚಿಗುರೊಡೆದು ಸಂತಸವನ್ನಾಚರಿಸುವ ವಸಂತದಲ್ಲೇ ಯುಗಾದಿ
ಹಬ್ಬ ಆಚರಿಸಲಾಗುತ್ತದೆ. ಅಲ್ಲದೇ ಚಾಂದ್ರಮಾನ ಹಾಗೂ ಸೌರಮಾನ ಪಂಚಾಂಗಗಳಿಗೆ ಅನುಗುಣವಾಗಿ ಎರಡು ಯುಗಾದಿಗಳನ್ನೂ ಆಚರಿಸಲಾಗುತ್ತದೆ.

ಚಾಂದ್ರಮಾನದ ಪ್ರಕಾರ ಮಾಸ-ಸರಣಿಯಲ್ಲಿ ಮೋದಿ ದಿನದಂದು ಸೂರ್ಯೋದಯದೊಂದಿಗೆ ನವಸಂವತ್ಸರ ಪ್ರಾರಂಭವಾಗುತ್ತದೆ. ಸೌರಮಾನ ಪಂಚಾಂಗದ ಪ್ರಕಾರ ಅಶ್ವಿ‌ನಿ ನಕ್ಷತ್ರ ಬಿದ್ದಾಗ ಯುಗಾದಿ ಪ್ರಾರಂಭವಾಗುತ್ತದೆ. ಫಾಲ್ಗುಣ-ಚೈತ್ರಗಳನ್ನು ಹಾದು ವೈಶಾಖ ಮಾಸದವರೆಗೂ ಮುಂದುವರಿಯುವ ವಸಂತ ಕಾಲದಲ್ಲಿ ಹಲವು ಹಬ್ಬಗಳಿವೆ. ಅವುಗಳಲ್ಲಿ ಯುಗಾದಿ ಮಹತ್ವವಾದದ್ದು.

ಸಂಭ್ರಮದ ಆಚರಣೆ: ಗೋಡೆಗಳಿಗೆ ಸುಣ್ಣ ಬಳಿಸಿ, ಮನೆಯಂಗಳ ತೊಳೆದು, ರಂಗೋಲಿ ಬಿಡಿಸಿ, ತಳಿರು-ತೋರಣ ಧ್ವಜ ಪತಾಕೆ ಕಟ್ಟಿ ಯುಗಾದಿಗೆ ಪ್ರತಿ ಮನೆಯೂ ಸಿದ್ಧವಾಗುತ್ತದೆ. ಉದಯೋನ್ಮುಖ ಸೂರ್ಯನ ಪ್ರಥಮ ರಶ್ಮಿ ನೋಡಲು ಪರಿವಾರದವರು ಅಂಗಳದಲ್ಲಿ ನೆರೆಯುತ್ತಾರೆ. ನದಿ ತೀರದವರು ಉದಯ ಕಾಲದಲ್ಲಿ ತೀರ್ಥ ಸ್ನಾನ ಮಾಡಿ ಪಾನವರಾಗುವುದುಂಟು.

ಮನೆಯೊಡತಿಯು ಎಲ್ಲರಿಗೂ ಎಣ್ಣೆ ಶಾಸ್ತ್ರ ಮಾಡಿ ಅಭ್ಯಂಗ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ವಿಧಿ-ವಿಧಾನಗಳಂತೆ ಪೂಜೆ, ನೈವೇದ್ಯ ಮಾಡಿ ಅವರವರ ಮನೆತನದ ಪದ್ಧತಿಯಂತೆ ಎಲ್ಲರೂ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ.

ಬೇವು-ಬೆಲ್ಲದ ಬಾಂಧವ್ಯ: ಕನ್ನಡಿಗರು ಬೇವು-ಬೆಲ್ಲವನ್ನು ನೈವೇದ್ಯ ಮಾಡುತ್ತಾರೆ. ಶತಾಯುರ್ವಜ್ರದೇಹಾಯ ಸರ್ವ ಸಂಪತ್ಯರಾಯ ಚ, ಸರ್ವಾರಿಷ್ಟ ನಿನಾಶಾಯ ನಿಂಬಕಂದಲ ಭಕ್ಷಣಂ ಎಂಬ ಶ್ಲೋಕ ಪಠಿಸುತ್ತ ಪರಸ್ಪರ ಹಂಚಿಕೊಳ್ಳುತ್ತಾರೆ. ಕಹಿ ಬೇವೂ; ಸಿಹಿ ಬೆಲ್ಲವೂ ಎರಡು ಜೀವಕ್ಕೆ ಒಳಿತು ತರುವಂತೆ ಸಿಹಿ ಸುಖವೂ; ಕಹಿ ದುಃಖವೂ ನಮಗೆ ಉನ್ನತಿಯನ್ನೇ ತರಲಿ ಎಂಬ ಹಾರೈಕೆ ಇಲ್ಲಿದೆ.

ಮೃಷ್ಟಾನ್ನ ಭೋಜನ: ಹಬ್ಬದೂಟದಲ್ಲಿ ಒಬ್ಬಟ್ಟು, ಪಾಯಸ, ಅಂಬೊಡೆ ಇರಲೇಬೇಕು. ಬಂಧುಮಿತ್ರರನ್ನೂ ಆಹ್ವಾನಿಸಿ ಸಹಭೋಜನ ಮಡುವುದು ಯುಗಾದಿ ವಿಶೇಷ. ಪ್ರಕೃತಿ
ರೂಪದಲ್ಲಿ ಕಂಗೊಳಿಸುವ ಲಕ್ಷ್ಮೀ ಪೂಜಿಸುವುದು ವಾಡಿಕೆ. ಮಾವಿನ ಚಿಗುರು-ಮಂಜಿರಗಳನ್ನೇ ಬಳಿಸಿ ಬಗೆ ಬಗೆಯ ಅಡುಗೆ, ಪೂಜೆ, ಅಲಂಕಾರ ಮಾಡುತ್ತಾರೆ.

ಯುಗಾದಿಯಂದೇ ನವಯುಗ: ಮತ್ಸ್ಯಾವತಾರ ತಾಳಿದ ಮಹಾವಿಷ್ಣು ಯುಗಾದಿಯಂದೇ ನವಯುಗ ಪ್ರಾರಂಭಿಸಿದನೆಂದು ಕಥೆಯಿದೆ. ಅಂತೆಯೂ ಬ್ರಹ್ಮ ದೇವನು ಯುಗಾದಿಯಂದೇ ತನ್ನ ಸೃಷ್ಟಿಗೆ ಮೊದಲಾದನೆಂಬ ಕಥೆಯೂ ಇದೆ. ಸೂರ್ಯದೇವನು ಅಂದೇ ತನ್ನ ಪ್ರಥಮ ಕಿರಣ ಹೊಮ್ಮಿಸಿ ಭೂಮಿಯಲ್ಲಿನ
ಬದುಕಿಗೆ ಚಾಲನೆ ಕೊಟ್ಟನೆಂಬ ಮಾತು ಇದೆ. ಶಾಲಿವಾಹನ ಮಹಾರಾಜನು ಶಾಲಿವಾಹನ ಶಕಿ ಯುಗಾದಿಯಂದೇ ಪ್ರಾರಂಭಿಸಿದನೆಂಬುದು ವಾಡಿಕೆ. ಅಂತೆಯೇ ಇಂದಿಗೂ ಹಲವು
ಗ್ರಾಮ-ಮಠ-ಮಂದಿರಗಳಲ್ಲಿ ಯುಗಾದಿಯಿಂದ ರಥೋತ್ಸವ, ಪಲ್ಲಕ್ಕಿ ಉತ್ಸವ, ಜಾತ್ರೆ, ಸಂಗೀತೋತ್ಸವಗಳು ಜರುಗುತ್ತವೆ.

ಹೀಗೆ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ..ಹೊಸ ವರ್ಷಕ್ಕೆ ಹೊಸ ಹರುಷಕ್ಕೆ ಹೊಸತು ಹೊಸತು ತರುತಿದೆ… ಎನ್ನುವ ಹಾಡು ಜನಮಾನಸವಾಗಿದೆ.

ಹಬ್ಬದೂಟದಲ್ಲಿ ಹಲವು ಖ್ಯಾದಪೇಯಗಳ ಜೊತೆಗೆ ಒಬ್ಬಟ್ಟು,
ಪಾಯಸ, ಅಂಬೊಡೆ ಇರಲೇಬೇಕು. ಬಂಧುಗಳನ್ನು ಆಹ್ವಾನಿಸಿ ಅವರೊಡನೆ ಸಹಭೋಜನ ಮಾಡುವುದು ಹಬ್ಬದ ವಿಶೇಷ. ಯುಗಾದಿ ಜೀವನಕ್ಕೆ ಹೊಸ ತಿರುವುದು, ಹೊಸ ಚೈತನ್ಯ ನೀಡಲಿ.
.ಮಲ್ಲೇಶಪ್ಪ ಬೇಲಿ, ಹಿರಿಯರು

ಯುಗಾದಿಯಂದು ಹಲವು ಮಠ-ಮಂದಿರಗಳಲ್ಲಿ ರಥೋತ್ಸವ, ಪಲ್ಲಕ್ಕಿ ಉತ್ಸವ ಸೇರಿದಂತೆ ಜಾತ್ರೆ-ಸಂಗೀತೋತ್ಸವಗಳು ಜರುಗುತ್ತವೆ. ಸಂತ ಸಮಯದಲ್ಲಿ ವಸಂತ ಮಾಸದಲ್ಲಿ ಬರುವ ಯುಗಾದಿ ಬಯಲಲ್ಲೂ, ಒಳಗೂ ಹಬ್ಬವನ್ನಾಚರಿಸಲು ಸೂಕ್ತ ಸಮಯ. ಆದ್ದರಿಂದಲೇ ಅಹೋರಾತ್ರಿ ಉತ್ಸವ, ಮೇಳಗಳು ನಡೆಯುತ್ತವೆ.
.ಬಸವರಾಜ ಬೂದಿ,
ನಿವೃತ್ತ ಶಿಕ್ಷಕ

ಚನ್ನಕೇಶವುಲು ಗೌಡ

ಟಾಪ್ ನ್ಯೂಸ್

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

Laxmi-Minister

ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು

SriLanka ನೌಕಾಪಡೆಯಿಂದ 17 ತಮಿಳುನಾಡಿನ ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

12-google-search

Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?

Jaipur: 13 ಮಂದಿಯನ್ನು ಬಲಿ ಪಡೆದ ದುರಂತದಲ್ಲಿ LPG ಟ್ಯಾಂಕರ್ ಚಾಲಕ ಬದುಕುಳಿದಿದ್ದೇ ರೋಚಕ

ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

Laxmi-Minister

ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.