ಬಿಜೆಪಿ ಭದ್ರಕೋಟೆಯಾದ ಸಮಾಜವಾದದ ತವರು!

ಆರಂಭದಲ್ಲಿ ಕಾಂಗ್ರೆಸ್‌ ಹಿಡಿತದಲ್ಲಿದ್ದ ಕ್ಷೇತ್ರಪ್ರಮುಖ ಸಾಹಿತಿಗಳು, ರಾಜಕಾರಣಿಗಳ ನೆಲೆ

Team Udayavani, Apr 6, 2019, 1:29 PM IST

Udayavani Kannada Newspaper

ಶಿವಮೊಗ್ಗ: ರಾಜ್ಯದ ಸಾಹಿತ್ಯ ಮತ್ತು ಸಾಂಸ್ಕೃತಿಕ ರಾಜಧಾನಿ ಎಂಬ ಹೆಗ್ಗಳಿಕೆ ಹೊಂದಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಮಾಜವಾದಿ ಚಳವಳಿ, ಕಾಗೋಡು, ದಲಿತ, ರೈತ ಚಳವಳಿಗಳಿಂದಾಗಿ ಚಳವಳಿಗಳ ತವರೂರು ಎಂಬ ಪಟ್ಟ ಗಳಿಸಿದೆ.

ಸ್ವಾತಂತ್ರ್ಯಾ ನಂತರದಲ್ಲಿ ಎಲ್ಲೆಡೆಯಂತೆ ಶಿವಮೊಗ್ಗದ ಮೇಲೂ ಕಾಂಗ್ರೆಸ್‌ ಪ್ರಭಾವ ಬೀರಿತ್ತು. ಆದರೆ, ಅದಕ್ಕೂ ಹೆಚ್ಚಾಗಿ ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ ಅವರ ಚಿಂತನೆಗಳು ಮಲೆನಾಡಿನ ಹೋರಾಟ ಮನೋಭಾವದ ರಾಜಕಾರಣಿಗಳ ಮನೆ ಸೆಳೆಯಿತು. ಶಾಂತವೇರಿ ಗೋಪಾಲಗೌಡ, ವೈ.ಆರ್‌. ಪರಮೇಶ್ವರಪ್ಪ, ಬಂಗಾರಪ್ಪ, ಜೆ.ಎಚ್‌. ಪಟೇಲ್‌, ಕಾಗೋಡು ತಿಮ್ಮಪ್ಪ, ಎಂ.ಸಿ. ಮಹೇಶ್ವರಪ್ಪ, ಕೋಣಂದೂರು
ಲಿಂಗಪ್ಪರಂತಹ ಮುಖಂಡರು ರಾಜಕೀಯವಾಗಿ ಮುಂಚೂಣಿಗೆ
ಬಂದು ಕಾಂಗ್ರೆಸ್‌ ಅಲೆ ನಡುವೆಯೂ ಮಲೆನಾಡನ್ನು ಸಮಾಜವಾದಿಗಳ ನೆಲೆಬೀಡಾಗಿಸಿದರು.

ರಾಷ್ಟ್ರಕವಿ ಕುವೆಂಪು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ| ಯು. ಆರ್‌.ಅನಂತಮೂರ್ತಿ ಅವರತಂಹ ಪ್ರಖ್ಯಾತ ಸಾಹಿತಿ, ಲೇಖಕರು ಹುಟ್ಟಿ ಬೆಳೆದ ಜಿಲ್ಲೆಯಲ್ಲಿ ದಮನಿತರು ಮತ್ತು ಶೋಷಿತರ ಪರವಾದ ಹೋರಾಟಗಳನ್ನು ರಾಜ್ಯದೆಲ್ಲೆಡೆಗೆ ವಿಸ್ತರಿಸಿ ಸಮಾಜದಲ್ಲಿ ಅವರಿಗೆ ಗಟ್ಟಿ ನೆಲೆ ಒದಗಿಸಿದ ಹಿರಿಮೆ ಜತೆಗೆ ರಾಜಕೀಯವಾಗಿಯು ಗಣನೀಯ ಕೊಡುಗೆ ನೀಡಿದ ಜಿಲ್ಲೆ ಎನಿಸಿಕೊಂಡಿದೆ.

ಕಡಿದಾಳು ಮಂಜಪ್ಪ, ಎಸ್‌. ಬಂಗಾರಪ್ಪ, ಜೆ.ಎಚ್‌. ಪಟೇಲ್‌,
ಬಿ.ಎಸ್‌. ಯಡಿಯೂರಪ್ಪ ಸೇರಿ ನಾಲ್ವರು ಮುಖ್ಯಮಂತ್ರಿಗಳು, ಜೆ.ಎಚ್‌. ಪಟೇಲ್‌, ಬಿ.ಎಸ್‌. ಯಡಿಯೂರಪ್ಪ, ಕೆ.ಎಸ್‌. ಈಶ್ವರಪ್ಪ ಸೇರಿ ಮೂವರು ಉಪ ಮುಖ್ಯಮಂತ್ರಿಗಳನ್ನು ಕೊಡುಗೆ ನೀಡಿದ್ದು ಸಹ ಇದೇ ಶಿವಮೊಗ್ಗ. ರಾಜ್ಯ ರಾಜಕಾರಣದಲ್ಲಿನ ಏಳುಬೀಳುಗಳಲ್ಲಿ ಶಿವಮೊಗ್ಗದ ರಾಜಕಾರಣಿಗಳು ಒಮ್ಮೆ
ಹೀರೋಗಳಾದರೆ, ಮಗದೊಮ್ಮೆ ವಿಲನ್‌ಗಳಾಗಿದ್ದೂ ಇದೆ. ಇಲ್ಲಿನ
ರಾಜಕಾರಣಿಗಳ ನಡೆಯನ್ನು ಅನುಸರಿಸಿ ರಾಜ್ಯ ರಾಜಕಾರಣವೂ ಮಗ್ಗಲು ಬದಲಿಸಿದ್ದಿದೆ.

ಕಾಂಗ್ರೆಸ್‌ ಭದ್ರಕೋಟೆ: 70ರ ದಶಕದ ಮಧ್ಯಭಾಗದವರೆಗೆ
ಇದ್ದ ಸಮಾಜವಾದಿಗಳ ಪ್ರಭಾವ ಆನಂತರದಲ್ಲಿ ಅದು ಜನತಾಪಕ್ಷದ ಕಡೆಗೆ ವಾಲಿತು. ಆದರೆ, ಜನತಾ ಪಕ್ಷದ
ಪ್ರಭಾವ ಬಹಳ ವರ್ಷಗಳವರೆಗೆ ಉಳಿಯದೆ ಮತ್ತೆ ಕಾಂಗ್ರೆಸ್‌ ಕಡೆಗೆ
ತಿರುಗಿತು. ಸಮಾಜವಾದಿ ಪಕ್ಷ, ಜನತಾ ಪಕ್ಷದ ಪ್ರಭಾವ ಕೆಲವೊಮ್ಮೆ ಜೋರಾಗಿದ್ದರೂ ಲೋಕಸಭೆಯಲ್ಲಿ ಒಮ್ಮೆ ಮಾತ್ರ ಸಮಾಜವಾದಿ ಪಕ್ಷದಿಂದ ಜೆ.ಎಚ್‌.ಪಟೇಲ್‌ ಜಯ ಗಳಿಸಿದ್ದು
ಬಿಟ್ಟರೆ ಕಾಂಗ್ರೆಸ್‌ ಅಭ್ಯರ್ಥಿಗಳೇ ನಿರಂತರವಾಗಿ ಗೆದ್ದು ಬಂದಿದ್ದಾರೆ. 90ರ ದಶಕದ ಕಡೆವರೆಗೆ ಶಿವಮೊಗ್ಗ ಕಾಂಗ್ರೆಸ್‌
ನ ಭದ್ರಕೋಟೆಯಾಗಿತ್ತು.

ಬಿಜೆಪಿ ಶಕ್ತಿ ಕೇಂದ್ರ: 80ರ ದಶಕದ ಆರಂಭದಲ್ಲಿ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಖಾತೆ ತೆರೆದ ಬಿಜೆಪಿ ಆನಂತರದಲ್ಲಿ ತನ್ನ ವ್ಯಾಪ್ತಿಯನ್ನು ನಿಧಾನವಾಗಿ ವಿಸ್ತರಿಸಿಕೊಳ್ಳುತ್ತಾ ಸಾಗಿತು.
90ರ ದಶಕದ ಅಂತ್ಯದ ಹೊತ್ತಿಗೆ ಇಡೀ ಜಿಲ್ಲೆಗೆ ವ್ಯಾಪಿಸಿದ್ದಲ್ಲದೆ ಮೊದಲ ಬಾರಿಗೆ 1998ರಲ್ಲಿ ಲೋಕಸಭೆ ಕ್ಷೇತ್ರವನ್ನೂ
ತನ್ನದಾಗಿಸಿಕೊಂಡಿತು. 2004ರಲ್ಲಿ ಬಂಗಾರಪ್ಪ ಅವರು ಬಿಜೆಪಿ ಸೇರಿ ಅದರ ಶಕ್ತಿಯನ್ನು ಮತ್ತಷ್ಟು ವೃದ್ಧಿಸಿದರು. ಕಡೆಗೆ ಅದು ಬಂಗಾರಪ್ಪ ಅವರನ್ನೇ ಸೋಲಿಸುವ ಮಟ್ಟಿಗೆ ಪ್ರಬಲವಾಗಿ ಬೆಳೆಯಿತು. ಯಡಿಯೂರಪ್ಪ, ಈಶ್ವರಪ್ಪ ಅವರಿಂದಾಗಿ ಪ್ರಸ್ತುತ ಶಿವಮೊಗ್ಗ ರಾಜ್ಯ ಬಿಜೆಪಿಯ ಶಕ್ತಿ ಕೇಂದ್ರವಾಗಿ ರೂಪುಗೊಂಡಿದೆ.

ಕ್ಷೇತ್ರ ವ್ಯಾಪ್ತಿ: 10 ವರ್ಷಗಳ ಹಿಂದೆ ಲೋಕಸಭೆ ಕ್ಷೇತ್ರವು ಶಿವಮೊಗ್ಗ ಜಿಲ್ಲೆಗಷ್ಟೆ ಸೀಮಿತವಾಗಿತ್ತು. 2008ರಲ್ಲಿ
ಆದ ಜನಸಂಖ್ಯೆವಾರು ಕ್ಷೇತ್ರ ಮರುವಿಂಗಣೆಯಲ್ಲಿ ಉಡುಪಿ
ಜಿಲ್ಲೆಯ ಬೈಂದೂರು ವಿಧಾನಸಭೆ ಕ್ಷೇತ್ರವನ್ನು ಶಿವಮೊಗ್ಗ ಲೋಕಸಭೆಗೆ ಸೇರಿಸಲಾಯಿತು. ಕ್ಷೇತ್ರದಲ್ಲಿ ಶಿವಮೊಗ್ಗ,
ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ತೀರ್ಥಹಳ್ಳಿ, ಸಾಗರ, ಶಿಕಾರಿಪುರ, ಸೊರಬ ಮತ್ತು ಬೈಂದೂರು ವಿಧಾನಸಭೆ
ಕ್ಷೇತ್ರಗಳಿವೆ. 9 ಕ್ಷೇತ್ರಗಳ ಪೈಕಿ ಭದ್ರಾವತಿ (ಕಾಂಗ್ರೆಸ್‌) ಹೊರತುಪಡಿಸಿದರೆ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ
ಶಾಸಕರಿದ್ದಾರೆ.

ಬಂಗಾರಪ್ಪ ಜಯಭೇರಿ: 1952ರಿಂದ ಇಲ್ಲಿವರೆಗೆ ಒಂದು ಉಪ ಚುನಾವಣೆ ಸೇರಿದಂತೆ 17 ಲೋಕಸಭೆ ಚುನಾವಣೆಗಳು ನಡೆದಿದ್ದು ಇದರಲ್ಲಿ ಅತಿ ಹೆಚ್ಚು 12 ಬಾರಿ ಕಾಂಗ್ರೆಸ್‌ ಅಥವಾ ಅದರ ಮತ್ತೂಂದು ಬಣ ಜಯ ಗಳಿಸಿದರೆ, 3 ಬಾರಿ ಬಿಜೆಪಿ, 2 ಬಾರಿ
ಸಮಾಜವಾದಿ ಪಕ್ಷ ಜಯ ಗಳಿಸಿದೆ. ವೈಯಕ್ತಿಕವಾಗಿ ನೋಡಿದಾಗ ಅತಿ ಹೆಚ್ಚು ಜಯಭೇರಿ ಭಾರಿಸಿದ್ದು ಮಾಜಿ ಸಿಎಂ ಎಸ್‌. ಬಂಗಾರಪ್ಪ. ಆರು ಬಾರಿ ಸ್ಪರ್ಧೆ ಮಾಡಿ ನಾಲ್ಕು ಬಾರಿ ಜಯ ಗಳಿಸಿದ್ದಾರೆ. ವಿಶೇಷವೆಂದರೆ ಆರು ಸ್ಪರ್ಧೆಯಲ್ಲಿ ಅವರು ಐದು (ಕೆಸಿಪಿ, ಕೆವಿಪಿ, ಕಾಂಗ್ರೆಸ್‌, ಬಿಜೆಪಿ, ಸಮಾಜವಾದಿ ಪಕ್ಷ) ಪ್ರತ್ಯೇಕ
ಪಕ್ಷಗಳನ್ನು ಪ್ರತಿನಿಧಿಸಿದ್ದರು.

ಟಿ.ವಿ. ಚಂದ್ರಶೇಖರಪ್ಪ ಅವರು ಮೂರು ಬಾರಿ ಸ್ಪ ರ್ಧಿಸಿ ಜಯ
ಗಳಿಸಿದರೆ, ಮೊದಲ ಎರಡು ಚುನಾವಣೆಯಲ್ಲಿ ಕೆ.ಜೆ. ಒಡೆಯರ್‌
ಜಯ ಗಳಿಸಿದ್ದರು. ಸಮಾಜವಾದಿ ಪಕ್ಷದಿಂದ ಮೂರು ಬಾರಿ ಸ್ಪರ್ಧಿಸಿದ್ದ ಜೆ.ಎಚ್‌. ಪಟೇಲ್‌ ಅವರಿಗೆ ಜಯ
ಒಲಿದಿದ್ದು ಒಮ್ಮೆ ಮಾತ್ರ. 1967ರಲ್ಲಿ ಲೋಕಸಭೆ ಪ್ರವೇಶಿಸಿದ ಅವರು ಕನ್ನಡದಲ್ಲೇ ಮಾತನಾಡುವ ಮೂಲಕ ಗಮನ ಸೆಳೆದಿದ್ದರು. ಆನಂತರದಲ್ಲಿ ಅವರು ಚನ್ನಗಿರಿ ವಿಧಾನಸಭೆ ಕ್ಷೇತ್ರವನ್ನು ಆಯ್ದುಕೊಂಡರು.

ಮುಯ್ಯಿಗೆ ಮುಯ್ಯಿ: 2014ರ ಲೋಕಸಭೆ ಚುನಾವಣೆಯಲ್ಲಿ
ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ ಮಾಜಿ ಸಿಎಂ ಬಿ.ಎಸ್‌.
ಯಡಿಯೂರಪ್ಪ ಅವರು ಹಿಂದೊಮ್ಮೆ ಲೋಕಸಭೆ ಚುನಾವಣೆಯಲ್ಲೇ ಸೋಲನುಭವಿಸಿದ್ದರು. 1991ರಲ್ಲಿ
ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಅವರು ತಮ್ಮ ಷಡಕ(ನಾದಿನಿ ಗಂಡ) ಕೆ.ಜಿ. ಶಿವಪ್ಪರನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿಸಿದರು. ಅವರ ವಿರುದ್ಧ ಬಿಜೆಪಿಯಿಂದ ಯಡಿಯೂರಪ್ಪ ಅವರು ಸ್ಪ ರ್ಧಿಸಿದರು. ಆದರೆ, ತೀವ್ರ
ಪೈಪೋಟಿಯಲ್ಲಿ 40 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. 2009ರಲ್ಲಿ ಮುಖ್ಯಮಂತ್ರಿಯಾಗಿದ್ದ
ಯಡಿಯೂರಪ್ಪ ಲೋಕಸಭೆ ಚುನಾವಣೆಯಲ್ಲಿ ಬಂಗಾರಪ್ಪ ವಿರುದ್ಧ ತಮ್ಮ ಪುತ್ರ ಬಿ.ವೈ. ರಾಘವೇಂದ್ರರನ್ನು
ಕಣಕ್ಕಿಳಿಸಿದರು. ಬಂಗಾರಪ್ಪರಿಗೆ ಅವರ ಕಡೇ ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿಂದ ಸೋಲುಣಿಸಿದ ಯಡಿಯೂರಪ್ಪ ಆ ಮೂಲಕ 18 ವರ್ಷಗಳ ಹಿಂದಿನ ಸೋಲಿಗೆ ಮುಯ್ಯಿ
ತೀರಿಸಿಕೊಂಡಿದ್ದರು.

ಶರತ್‌ ಭದ್ರಾವತಿ

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

KVK: ಸಾಂಪ್ರದಾಯಿಕ ಭತ್ತ ತಳಿಗಳ ಕ್ಷೇತ್ರೋತ್ಸವ

KVK: ಸಾಂಪ್ರದಾಯಿಕ ಭತ್ತ ತಳಿಗಳ ಕ್ಷೇತ್ರೋತ್ಸವ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.