ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕೈಜೋಡಿಸಿ
ಉತ್ತಂಗಿ ಗ್ರಾಮಕ್ಕೆ ಡಿಎಚ್‌ಒ ಭೇಟಿ ನೀಡಿ ಪರಿಶೀಲನೆ
Team Udayavani, Apr 6, 2019, 4:39 PM IST
ಬಳ್ಳಾರಿ: ಜಿಲ್ಲೆಯ ಹಡಗಲಿ ತಾಲೂಕು ಉತ್ತಂಗಿ ಗ್ರಾಮದಲ್ಲಿ ಜ್ವರ ಪೀಡಿತರ ಮನೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಶಿವರಾಜ್ ಹೆಡೆ ಭೇಟಿ ನೀಡಿ ಚರ್ಚಿಸಿದರು.
ಬಳ್ಳಾರಿ: ಸಾರ್ವಜನಿಕರು ಎಲ್ಲೆಂದರಲ್ಲಿ ಉಗುಳುವುದನ್ನು ತಡೆಯುವ ಮೂಲಕ ಸಮುದಾಯದಲ್ಲಿ ಹರಡುವ ಎಚ್1ಎನ್1,
ಕ್ಷಯರೋಗ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಶಿವರಾಜ್ ಹೆಡೆ ಹೇಳಿದರು.
ಜಿಲ್ಲೆಯ ಹೂವಿನಹಡಗಲಿ ತಾಲೂಕು ಉತ್ತಂಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮದಲ್ಲಿ ಜ್ವರ ಪೀಡಿತರ ಮನೆಗೆ ಖುದ್ದು ಭೇಟಿ ನೀಡಿ ರೋಗಿಯೊಂದಿಗೆ ಚರ್ಚಿಸಿದ ಬಳಿಕ ಅವರು ಮಾತನಾಡಿದರು.
ಮನುಷ್ಯನ ಮಾಡುವ ಕೆಲವೊಂದು ತಪ್ಪುಗಳಿಂದ ಸಾಂಕ್ರಾಮಿಕ ರೋಗಗಳು ಬೇಗ ಹರಡುತ್ತವೆ. ಅದರ ಮಾರಕದಿಂದ ಎಚ್1
ಎನ್1ನಂತಹ ರೋಗಗಳನ್ನು ನಿಯಂತ್ರಿಸಲು ಪ್ರಯತ್ನಿಸಬೇಕು ಎಂದ ಅವರು, ವೈದ್ಯರ ಸಲಹೆ ಇಲ್ಲದೇ ಔಷಧಗಳನ್ನು ಸೇವಿಸಬಾರದು. ಜನನಿಬಿಡ ಪ್ರದೇಶದಲ್ಲಿ ಕರವಸ್ತ್ರದಿಂದ
ಮುಚ್ಚಿಕೊಳ್ಳದೇ ಕೆಮ್ಮುವುದು ಅಥವಾ ಸೀನುವುದು ಮಾಡಬಾರದು. ಕಣ್ಣು, ಮೂಗು, ಬಾಯಿಯನ್ನು ಆಗಾಗ ಕೈಯಿಂದ ಮುಟ್ಟಬಾರದು. ಹೀಗೆ ಮಾಡಿದರೆ ರೋಗವನ್ನು ತಡೆಯಲು ಹಾಗೂ ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ| ಕೆ.ಚಂದ್ರಶೇಖರ್, ಡಾ| ವಿನೋದ್, ಡಾ| ಚಂದ್ರಶೇಖರ ನಾಯ್ಕ,
ಎಂಎಲ್‌ಎಚ್‌ಪಿ ಹರ್ಷಿತಾ, ಮಂಜುಶ್ರೀ ನಾಯ್ಕ, ಎಚ್.ಸಿ.ತನುಮಣಿ, ಕಿರಿಯ ಆರೋಗ್ಯ ಸಹಾಯಕರಾದ ಅಶ್ವಿನಿ.ಎ, ಕಲ್ಪನಾ, ರೂಪಿಣಿ, ಎಂ.ಜಿ. ಬಂಡಾರಿ, ಕಾರ್ತಿಕ, ಸುಭಾಷ್, ಗಿರಿಜಮ್ಮ, ಮಂಜುಳಾ ಹಾಗೂ ಆಶಾ ಕಾರ್ಯಕರ್ತೆಯರು
ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
Bengaluru: ಕಳೆದ ದೀಪಾವಳಿಗಿಂತ ಶೇ.34 ತಗ್ಗಿದ ವಾಯುಮಾಲಿನ್ಯ
Crime: ಶೀಲ ಶಂಕಿಸಿ ಪತ್ನಿ ಕತ್ತು ಸೀಳಿಆತ್ಮಹತ್ಯೆಗೆ ಯತ್ನಿಸಿದ ಪತಿ
Thalapathy 69: ರಿಲೀಸ್ ಗೂ ಮುನ್ನ ಕೋಟಿ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.