ಕೊಡಗು ಜೆಡಿಎಸ್ ಪುನಾರಚನೆ : ನೂತನ ಪದಾಧಿಕಾರಿಗಳ ನೇಮಕ
Team Udayavani, Apr 8, 2019, 6:30 AM IST
ಮಡಿಕೇರಿ: ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರು ಜಿಲ್ಲಾ ಘಟಕ ಹಾಗೂ ತಾಲೂಕು ಘಟಕಗಳನ್ನು ಪುನರ್ ರಚಿಸಿದ್ದು, ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಹೆಸರುಗಳನ್ನು ಘೋಸಿದ ಅವರು ಪಕ್ಷದ ಬಲವರ್ಧನೆಯ ದೃಷ್ಠಿಯಿಂದ ವಿವಿಧ ಘಟಕಗಳನ್ನು ಪುನರ್ ರಚಿಸಲಾಗಿದೆ ಎಂದರು.
ಜಿಲ್ಲಾ ವಕ್ತಾರರಾಗಿ ಪಾರೆಮಜಲು ಕುಸುಮ ಕಾರ್ಯಪ್ಪ, ಎಂ.ಟಿ.ಕಾರ್ಯಪ್ಪ, ಮಹಾಪ್ರಧಾನ ಕಾರ್ಯ ದರ್ಶಿಯಾಗಿ ಶನಿವಾರ ಸಂತೆಯ ಅದೀಲ್ ಪಾಷ, ಮಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಗೋಣಿಕೊಪ್ಪದ ಅಪ್ಪನೆರವಂಡ ಶಾಂತಿ ಅಚ್ಚಪ್ಪ ಅವರು ನೇಮಕಗೊಂಡಿದ್ದಾರೆ.
ಉಪಾಧ್ಯಕ್ಷರುಗಳಾಗಿ ಸೋಮವಾರಪೇಟೆಯ ಬಗ್ಗನ ಅನಿಲ್, ನೆಲ್ಲಿ ಹುದಿಕೇರಿಯ ಶಿವದಾಸ್, ಹೆಬ್ಟಾಲೆ ನಾಗೇಶ್, ಮಡಿಕೇರಿಯ ಯಲದಾಳು ಕೇಶವಾನಂದ, ಶಿರಂಗಾಲದ ಎನ್.ಎಸ್.ರಮೇಶ್, ಭಾಗಮಂಡಲದ ಪಾಣತ್ತಲೆ ವಿಶ್ವನಾಥ್, ಸುಲೇಮಾನ್, ಸಿದ್ದಾಪುರದ ಪೇರುಬಾಬು ಪುಟ್ಟಸ್ವಾಮಿ, ರಾಜಪೇಟೆಯ ಮೋನ್, ಪೊನ್ನಂಪೇಟೆಯ ಎಂ.ಸಿ.ಬೆಳ್ಳಿಯಪ್ಪ, ಶನಿವಾರಸಂತೆಯ ಪುಷ್ಪನಾಗರಾಜ್, ಬೋಜಪ್ಪ, ಬಸವನಹಳ್ಳಿಯ ಚಂದ್ರಶೇಖರ್ ಅವರನ್ನು ನೇಮಕ ಮಾಡಲಾಗಿದೆ.
ಪ್ರಧಾನ ಕಾರ್ಯದರ್ಶಿಗಳಾಗಿ ಕೊಡ್ಲಿಪೇಟೆ ಬೆಂಬಳೂರು ದೇವಪ್ಪ ಗೌಡ, ಕೊಳೆಕೇರಿ ಬಿ.ಎಚ್.ಅಹ್ಮದ್, ಮೂರ್ನಾಡು ಬಲ್ಲಾಚಂಡ ಗೌತಮ್, ಅಮ್ಮತ್ತಿ ಕೆ.ಪಿ.ನಾಗರಾಜು, ಸೋಮವಾರಪೇಟೆ ಟಿ.ಸಿ.ಮಂದಣ್ಣ, ಬೆಟ್ಟಗೇರಿಯ ಸೂದನ ಈರಪ್ಪ, ಕೊಡ್ಲಿಪೇಟೆ ಸಂಗಮೇಶ, ಶನಿವಾರಸಂತೆ ಹೆಚ್.ಬಿ. ನಾಗಪ್ಪ, ಸಂಘಟನಾ ಕಾರ್ಯದರ್ಶಿಗಳಾಗಿ ಶನಿವಾರಸಂತೆ ಪಾಪಣ್ಣ, ಮಡಿಕೇರಿಯ ಸುಖೇಶ್ ಚಂಗಪ್ಪ, ಬೆಟ್ಟಗೇರಿಯ ಅಬ್ದುಲ್ಲ, ಬಾಳೆಲೆ ದಿನೇಶ್, ಸಿದ್ದಲಿಂಗಪುರ ಕೋಟಿರಾಮಣ್ಣ, ಮೈತಾಡಿ ಬಾಳೆಕುಟ್ಟಿರ ದಿನಿ, ಮಹ್ಮದ್ ಹನೀಫ್, ಖಜಾಂಚಿಯಾಗಿ ಚೆಟ್ಟಳ್ಳಿಯ ಡೆನ್ನಿಬರೋಸ್ ನೇಮಕಗೊಂಡಿದ್ದಾರೆ.
ಕಾರ್ಯಕಾರಿ ಸುತಿಯ ಸದಸ್ಯರುಗಳಾಗಿ ಸೋಮವಾರಪೇಟೆಯ ರಾಜೇಶ್, ಎಂ.ಟಿ. ಮಂದಣ್ಣ, ಶನಿವಾರಸಂತೆಯ ಮುತ್ತಯ್ಯಗೌಡ್ರು, ರಾಜಪ್ಪ, ಮಾದಪುರದ ಮುಸ್ತಫ ಸೀದಿ, ಗೌಡಳ್ಳಿಯ ಕೂಗೂರು ಕುಮಾರಪ್ಪ, ಕುಶಾಲನಗರದ ಕಮಲಗಣಪತಿ, ಎಸ್.ಬಿ. ನಂದಕುಮಾರ್, ಶುಂಠಿಕೊಪ್ಪದ ಕರೀಂ, ಸೋಮವಾರಪೇಟೆಯ ಜಾನಕಿ ವೆಂಕಟರಾಮ್, ಕಾಕೋಟುಪರಂಬು ಪಂದ್ಯಂಡ ರ, ಚೆನ್ನಂಗಿ ಜಯಮ್ಮ, ಪೊನ್ನಂಪೇಟೆಯ ಕಳ್ಳಿಚಂಡ ನಟೇಶ್, ಅಜ್ಜಮಾಡ ಲವಕುಶಾಲಪ್ಪ, ವಾಟೇರಿರ àರಾಜ್ ಅಪ್ಪಚ್ಚು, ಕೋಚಮಾಡ ಹರೀಶ್, ಮಡಿಕೇರಿ ತಾಲೂಕು ಅಧ್ಯಕ್ಷರಾಗಿ ಕುಟ್ಟನ ಸಂದೀಪ್, ಸೋಮವಾರಪೇಟೆ ಅಧ್ಯಕ್ಷರಾಗಿ ಕೆ.ಪಿ.ನಾಗರಾಜು, ರಾಜಪೇಟೆ ಅಧ್ಯಕ್ಷರಾಗಿ ಎಚ್.ಎಸ್.ಮತೀನ್, ಕುಶಾಲನಗರ ಅಧ್ಯಕ್ಷರಾಗಿ ಸಿ.ಎಲ್.ವಿಶ್ವ ಹಾಗೂ ಪೊನ್ನಂಪೇಟೆ ಅಧ್ಯಕ್ಷರಾಗಿ ಕೋಳೆರ ದಯಾಚಂಗಪ್ಪ ಹಾಗೂ ಪರಿಶಿಷ್ಟಜಾತಿ ಘಟಕದ ಜಿಲ್ಲಾಧ್ಯಕ್ಷರಾಗಿ ಬಿ.ಡಿ.ಅಣ್ಣಯ್ಯ ಆಯ್ಕೆಯಾಗಿದ್ದಾರೆ ಎಂದು ಕೆ.ಎಂ.ಗಣೇಶ್ ಮಾತಿ ನೀಡಿದರು.
ಪಕ್ಷದ ಗೌರವ ಅಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ ಕೊಡಗು ಜಿಲ್ಲೆಗೆ ಕಾಫಿ ಬೆಳೆಗಾರರ ಕಣ್ಣೀರನ್ನು ಒರೆಸುವ ಸಂಸದರ ಅಗತ್ಯದ್ದು, ನಿಷ್ಕ್ರಿಯ ಸಂಸದ ಪ್ರತಾಪ್ ಸಿಂಹ ಈ ಬಾರಿ ದೊಡ್ಡ ಅಂತರದಲ್ಲಿ ಸೋಲು ಅನುಭಸಲಿದ್ದಾರೆ ಎಂದು ಭವಿಷ್ಯ ನುಡಿದರು. ನೂತನ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರು ಪಕ್ಷ ಸಂಘಟನೆಯನ್ನು ಚುರುಕುಗೊಳಿಸಿದ್ದು, ಅಲ್ಪಾವಧಿಯಲ್ಲೇ ಪಕ್ಷವನ್ನು ಪುನರ್ ರಚಿಸುವ ಮೂಲಕ ಬಲವರ್ಧನೆಗೆ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹವೆಂದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ..ನಾಗೇಶ್, ಪ್ರಧಾನ ಕಾರ್ಯದರ್ಶಿ ಮನ್ಸೂರ್ ಆಲಿ, ಉಪಾಧ್ಯ ಕ್ಷರುಗಳಾದ ಪಾಣತ್ತಲೆ ಶ್ವನಾಥ್ ಕೊಂಡಂಗೇರಿ ಯೂಸುಫ್ ಉಪಸ್ಥಿತರಿದ್ದರು.
ಭಿನ್ನಾಭಿಪ್ರಾಯವಿಲ್ಲ
ಜಿಲ್ಲಾ ಜೆಡಿಎಸ್‌ನಲ್ಲಿ ಯಾವುದೇ ಗೊಂದಲಗಳಿಲ್ಲ, ಎಲ್ಲಾ ನಾಯಕರುಗಳು ಒಗ್ಗಟ್ಟಾಗಿ ಮೈತ್ರಿ ಅಭ್ಯರ್ಥಿಯ ಗೆಲುಗಾಗಿ ಶ್ರುಸುತ್ತಿದ್ದಾರೆ. ಹಿರಿಯ ನಾಯಕ ಬಿ.ಎ.ಜೀಜಯ ಅವರನ್ನು ಜಿಲ್ಲಾ ಸಮಿತಿಯ ಪೋಷಕರನ್ನಾಗಿ ಆಯ್ಕೆ ಮಾಡಲಾಗಿದ್ದು, ದೂರವಾಣಿ ಮೂಲಕ ಸಂಪರ್ಕಿಸಿ ಸಹಕಾರ ಕೋರಲಾಗಿದೆ. ಸೂಕ್ತ ರೀತಿಯ ಭರವಸೆಯೂ ದೊರೆತಿದೆ ಎಂದು ಗಣೇಶ್ ಸ್ಪಷ್ಟಪಡಿಸಿದರು. ಪಕ್ಷದ ವರಿಷ್ಠರ ಆದೇಶಕ್ಕೆ ಪ್ರತಿಯೊಬ್ಬರು ಬದ್ಧರಾಗಿರುವುದು ಅನಿವಾರ್ಯವೆಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.