ಹಣ, ಹೆಂಡ ಹಂಚಿ ಗೆದ್ದವರು ಸಮಸ್ಯೆಗೆ ಸ್ಪಂದಿಸಲ್ಲ
Team Udayavani, Apr 8, 2019, 3:00 AM IST
ದೇವನಹಳ್ಳಿ: ರಾಜಕೀಯ ಇತ್ತೀಚಿನ ದಿನಗಳಲ್ಲಿ ವ್ಯಾಪರೀಕರಣವಾಗಿದೆ. ಜನರಿಗೆ ಹಣ ಮತ್ತು ಹೆಂಡ ಕೊಟ್ಟು ಗೆಲ್ಲುವ ಅಭ್ಯರ್ಥಿಗಳು ಜನರ ಸಮಸ್ಯೆಗೆ ಸ್ಪಂದಿಸುವುದಿಲ್ಲ. ಹಾಗಾಗಿ, ಅಂತಹವರಿಗೆ ತಕ್ಕಪಾಠ ಕಲಿಸಬೇಕೆಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಎಸ್.ವರಲಕ್ಷ್ಮೀ ತಿಳಿಸಿದರು.
ನಗರದ ಬಿಬಿ ರಸ್ತೆಯಲ್ಲಿ ಆರಂಭಿಸಲಾದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಿಪಿಎಂ ಕಚೇರಿ ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ರೈತರ ಭವಿಷ್ಯ ಅತಂತ್ರವಾಗಿದೆ. ರೈತರ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ.
ಹೆಣ್ಣು ಮಕ್ಕಳನ್ನು ಹಡೆದ ತಂದೆ, ತಾಯಂದಿರು ವ್ಯವಸಾಯ ಮಾಡುವ ಹುಡುಗರಿಗೆ ತಮ್ಮ ಮಕ್ಕಳನ್ನು ನೀಡಲು ಸಿದ್ಧರಿಲ್ಲ. ಕಡೆಗೆ ವ್ಯಾಚ್‌ಮನ್ ಆದರೂ ಸರಿ ಅಂತಹ ಹುಡುಗನಿಗೆ ಹೆಣ್ಣು ಮಕ್ಕಳನ್ನು ಕೊಟ್ಟು ಮದುಮೆ ಮಾಡುತ್ತೇವೆ ಎನ್ನುವಂತಹ ಕಾಲ ಬಂದಿದೆ ಎಂದರು.
ಬಡವರು, ಕಾರ್ಮಿಕರಿರಾಗಿ ಶ್ರಮಿಸುವೆ: ದೇಶದಲ್ಲಿ ಇಂದು ಕೃಷಿಕರಿಗೆ ಭದ್ರತೆ ಇಲ್ಲದಾಗಿದೆ. ಬಿಜೆಪಿ ಸರ್ಕಾರ ಅಧೀಕಾರಕ್ಕೆ ಬರುವ ಮುನ್ನಾ ರೈತರ ಅಭಿವೃದ್ಧಿಗಾಗಿ ಸ್ವಾಮಿನಾಥನ್ ಅವರ ವರದಿ ಜಾರಿಗೆ ತರುತ್ತೇವೆ ಎಂದವರು ನಂತರ ಚಕಾರ ಎತ್ತಲ್ಲಿಲ್ಲ.
ರೈತರ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸಿತ್ತಿದ್ದು, ಭದ್ರತೆ ಇಲ್ಲದೇ ಜೀವನ ನಡೆಸುತ್ತಿದ್ದಾರೆ. ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರಕ್ಕೆ ಲಕ್ಷಾಂತರ ಮಂದಿ ಸೇರಿಸುತ್ತಾರೆ. ಅವರೆಲ್ಲರನ್ನೂ ಹಣ ನೀಡಿ ಕರೆತರುತ್ತಾರೆ.
ನಮ್ಮ ಪಕ್ಷ ಯಾವುದೇ ರೀತಿಯ ಹಣದ ಆಮಿಷ ಒಡ್ಡುವುದಿಲ್ಲ. ಬದಲಾಗಿ, ನಾವು ನಿಷ್ಠೆಯಿಂದ ಬಡವರು ಹಾಗೂ ಕಾರ್ಮಿಕರಿರಾಗಿ ಶ್ರಮಿಸುತ್ತೇವೆ. ತಮ್ಮ ಮತ ನಮಗೆ ನೀಡಿ. ಯಾವುದೇ ಕಾರಣಕ್ಕೂ ತಮ್ಮ ಅಮೂಲ್ಯ ಮತವನ್ನು ಯಾರಿಗೂ ಮಾರಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ಮೋದಿ ಸರ್ಕಾರ ಕೆಳಗಿಳಿಸಿ: ಬಯಲುಸೀಮೆ ರೈತರಿಗಾಗಿ ಮಂಗಳೂರಿನ ನೇತ್ರಾವತಿ ನದಿಯನ್ನು ಈ ಭಾಗಕ್ಕೆ ತಿರುಗಿಸುವ ಕಾರ್ಯವಾಗಬೇಕಾಗಿದೆ. ಎತ್ತಿನಹೊಳೆ ಯೋಜನೆ ಪೂರ್ಣಗೊಂಡರೆ ಮಾತ್ರ ಮಳೆಗಾಲದಲ್ಲಿ ಕುಡಿಯುವ ನೀರು ಸಿಗುತ್ತದೆ. ಹೆಬ್ಟಾಳ ಹಾಗೂ ನಾಗವಾರ ಕೊಳಚೆ ನೀರನ್ನು ಈ ಭಾಗಕ್ಕೆ ತರುವ ಹುನ್ನಾರ ನಡೆಯುತ್ತಿದೆ.
ಲಕ್ಷಾಂತರ ಲೀಟರ್ ಹಾಲು ಹಾಗೂ ಅಪಾರ ಪ್ರಮಾಣದಲ್ಲಿ ತರಕಾರಿ ನೀಡುವ ರೈತರಿಗೆ ಕೊಳಚೆ ನೀರು ನೀಡಲಾಗುತ್ತಿದೆ. ನಮ್ಮ ಪಕ್ಷ ಕೂಲಿ ಕಾರ್ಮಿಕರಿಗಾಗಿ ಮತ್ತು ರೈತರ ಪರ ಹೋರಾಟ ಮಾಡುತ್ತಲೇ ಬಂದಿದೆ. ಹಲವಾರು ಸಂದರ್ಭಗಳಲ್ಲಿ ನಮ್ಮ ಹೋರಾಟಕ್ಕೆ ತಕ್ಕ ಪ್ರತಿ ಫಲ ಸಿಕ್ಕಿದೆ.
ಸಂವಿಧಾನದ ನಾಲ್ಕು ಆಧಾರ ಸ್ತಂಭಗಳಾದ ಜಾತ್ಯಾತೀತ, ಪ್ರಜಾಪ್ರಭುತ್ವ, ಆರ್ಥಿಕ ಸ್ವಾವಲಂಬನೆ, ಸಾಮಾಜಿಕ ನ್ಯಾಯ ಮತ್ತು ಒಕ್ಕೂಟ ತತ್ವ ಈಗ ಅಪಾಯದಲ್ಲಿವೆ. ಇವುಗಳನ್ನು ರಕ್ಷಿಸಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಕೆಳಗಿಳಿಸಬೇಕು ಎಂದರು.
ಮೋದಿಗೆ ತಕ್ಕಪಾಠ ಕಲಿಸಿ: ಭಾರತ ಯುವಜನ ಪ್ರಕೋಷ್ಠಕದ ಸಂಚಾಲಕ ಮಣಿಕಾಂತ್ ಮಾತನಾಡಿ, ಸಂಸದ ವೀರಪ್ಪ ಮೊಯ್ಲಿ ಏನು ಕೆಲಸ ಮಾಡಿದ್ದಾರೆ. 10 ವರ್ಷಗಳಿಂದ ಕೇವಲ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಮೋಸ ಮಾಡುತ್ತ ಹೊರಟಿದ್ದಾರೆ.
ನರೇಂದ್ರ ಮೋದಿ ಮತ್ತು ವೀರಪ್ಪ ಮೊಯ್ಲಿ ಅಂಬಾನಿ ಜತೆ ಚೆನ್ನಾಗಿದ್ದಾರೆ. ಅವರಿಂದ ಸಹಕಾರ ಪಡೆದು ಚುನಾವಣೆಯಲ್ಲಿ ನಿಂತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯುವಕರಿಗೆ ಉದ್ಯೋಗ ಸೃಷ್ಟಿಸುತ್ತೇನೆಂದು ಹೇಳಿ ಆ ಭರವಸೆಯನ್ನು ಈರೇಡಿಸಲಿಲ್ಲ.
ಪಕೋಡ ಮಾರಿ ಜೀವನ ಸಾಗಿಸಬಹುದು ಎಂಬ ಹೇಳಿಕೆ ನೀಡುವವರಿಗೆ ತಕ್ಕ ಪಾಠ ಕಲಿಸಬೇಕೆಂದರು. ಈ ವೇಳೆ ರಾಜ್ಯ ಪ್ರಾಂತ ರೈತಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ, ಜಿಲ್ಲಾ ಪ್ರಾಂತ ರೈತಸಂಘದ ಅಧ್ಯಕ್ಷ ವೀರಣ್ಣ, ರಾಜ್ಯ ಸಿಪಿಎಂ ಕಾರ್ಯದರ್ಶಿ ಗೋಪಾಲ ಕೃಷ್ಣ, ಸುಮಿತ್ರಮ್ಮ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.