ರಾಹುಲ್ಗೆ ಪ್ರಧಾನಿ ಯೋಗ ಕಡಿಮೆ
Team Udayavani, Apr 8, 2019, 6:10 AM IST
ಗುಳೇದಗುಡ್ಡ (ಬಾಗಲಕೋಟೆ): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಧಾನಿಯಾಗುವ ಯೋಗ ತುಂಬಾ ಕಡಿಮೆ. ಇಬ್ಬರೂ ಈ ಬಾರಿ ಪ್ರಧಾನಿ ಆಗುವುದು ಅನುಮಾನ…
– ಇದು ಗುಳೇದಗುಡ್ಡದ ಸಾಂಪ್ರದಾಯಿಕ ಫಲ ಭವಿಷ್ಯ ನುಡಿಯುವ “ಇಲಾಳ ಮ್ಯಾಳ’ದವರ ಭವಿಷ್ಯವಾಣಿ… ಪ್ರತಿವರ್ಷದಂತೆ ಇಲಾಳ ಮ್ಯಾಳದವರು ಈ ಬಾರಿಯೂ ಯುಗಾದಿ ಪಾಡ್ಯದ ದಿನ ಬೆಳಗ್ಗೆ ಮಳೆ, ಬೆಳೆ, ವ್ಯಾಪಾರ ವಹಿವಾಟು, ರಾಜಕೀಯ ಕುರಿತು ಭವಿಷ್ಯವಾಣಿ ನುಡಿದಿದ್ದಾರೆ. ಮೋದಿಯವರಿಗೆ ಶೇ.67ರಷ್ಟು
ಪ್ರಧಾನಿಯಾಗುವ ಯೋಗವಿದೆ. ಆದರೆ, ಅವರು ಪ್ರಧಾನಿಯಾಗಲು ಸುಬ್ರಹ್ಮಣ್ಯ ದರ್ಶನ ಮಾಡಬೇಕು. ಇನ್ನು ರಾಹುಲ್ ಗಾಂಧಿಗೆ ಶೇ.46ರಷ್ಟು ಪ್ರಧಾನಿಯಾಗುವ ಯೋಗವಿದೆ. ಅವರು ಮಹಾಕಾಳಿ ದರ್ಶನ ಪಡೆಯಬೇಕು ಎಂದು ಭವಿಷ್ಯದಲ್ಲಿ ಹೇಳಿದ್ದಾರೆ.
ಕೆಂಪುಕೋಟೆಯಲ್ಲಿ ಹತ್ತು ಸೂತ್ರ ರಚಿಸಿದ್ದಾರೆ. ಏಳು ಹಂತದ ಮತದಾನ ಇದೆ. ಇದರಲ್ಲಿ ಒಂದರಿಂದ ನಾಲ್ಕು ಹಂತದ ಮತದಾನ ಸುಗಮವಾಗಿ ಸಾಗುತ್ತದೆ. ಐದು ಮತ್ತು ಏಳನೇ ಹಂತದ ಮತದಾನಗಳು ಕೆಟ್ಟ ಘಳಿಗೆಗಳನ್ನು ತರುತ್ತವೆ. ಚುನಾವಣೆ ಬಳಿಕ ಯಾರು, ಯಾರಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ ಎಂದು “ಇ ಲಾಳ ಮ್ಯಾಳ’ದ ಮಲ್ಲಿಕಾರ್ಜುನ ಗೊಬ್ಬಿ ಭವಿಷ್ಯ ನುಡಿದಿದ್ದಾರೆ. ಇವರು ಭವಿಷ್ಯ
ನುಡಿಯುವ ಕಾಯಕ ಮಾಡಿಕೊಂಡು ಬರುತ್ತಿದ್ದು, ಇವರ ಭವಿಷ್ಯ ನಿಜವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.