ಯುಗಾದಿ, ವರ್ಷದ ತೊಡಕು ಸಂಭ್ರಮ
Team Udayavani, Apr 8, 2019, 3:00 AM IST
ಬೆಂಗಳೂರು: ಮನೆ, ದೇವಸ್ಥಾನ, ಸಂಘ-ಸಂಸ್ಥೆ, ಬೀದಿ-ಗಲ್ಲಿಗಳಲ್ಲಿ ಬೇವು ಬೆಲ್ಲ ವಿತರಿಸುವ ಮೂಲಕ ನಗರದಾದ್ಯಂತ ಶನಿವಾರ ಸಂಭ್ರಮದಿಂದ ಯುಗಾದಿ ಆಚರಣೆ ಮಾಡಲಾಯಿತು.
ಬಹುತೇಕರು ಮನೆಗಳಲ್ಲಿ ಮಾವಿನ ತೋರಣ ಕಟ್ಟಿ ಸಂಪ್ರದಾಯದಂತೆ ಹೊಸ ವರ್ಷ ಭರಮಾಡಿಕೊಂಡರು. ಮನೆ ಹಾಗೂ ದೇವಸ್ಥಾನಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಮುಂಭಾಗದಲ್ಲಿ ರಂಗೋಲಿ ಇಟ್ಟು, ವಿಶೇಷ ಪೂಜೆ ಸಲ್ಲಿಸಿ, ಬೇವು ಬೆಲ್ಲ ವಿತರಿಸಲಾಯಿತು.
ಬಹುತೇಕರು ಮನೆಯಲ್ಲಿ ಯುಗಾದಿ ಆಚರಣೆ ಹಿನ್ನೆಲೆಯಲ್ಲಿ ವಿವಿಧ ಸಿಹಿ ಖಾದ್ಯಗಳನ್ನು ಮಾಡಿದ್ದರು. ಯುಗಾದಿಯ ಮರುದಿನ ಭಾನುವಾರ ಬಂದಿರುವುದರಿಂದ ವರ್ಷದ ತೊಡಕು ಮಾಂಸ ಪ್ರಿಯರಿಗೆ ಇನ್ನಷ್ಟು ಖುಷಿ ಕೊಟ್ಟಿದ್ದೆ.
ನಗರದ ಬಹುತೇಕ ಕಡೆಗಳಲ್ಲಿ ಮಾಂಸದಂಗಡಿಗಳು ಬೆಳ್ಳಂಬೆಳಗ್ಗೆ ತೆರೆದಿದ್ದು, ಮಾರಾಟ ಆರಂಭಿಸಿದ್ದರು. ಬೆಳಗ್ಗೆ 11 ಗಂಟೆಯವರೆಗೆ ಗ್ರಾಹಕರು ಅಂಗಡಿಯ ಮುಂದೆ ಸರತಿ ಸಾಲಿನಲ್ಲಿ ನಿಂತು ಕೋಳಿ, ಕುರಿ ಮಾಂಸ ಖರೀದಿಸುತ್ತಿದ್ದ ದೃಶ್ಯ ಸಮಾನ್ಯವಾಗಿತ್ತು.
ಕುರಿ ಮಾಂಸದ ಕೆ.ಜಿ ಮೇಲೆ 20-30 ರೂ.ವರೆಗೆ ಏರಿಸಲಾಗಿತ್ತು. ಸಾಮಾನ್ಯವಾಗಿ ಒಂದು ಕೆ.ಜಿ. ಕುರಿ ಮಾಂಸಕ್ಕೆ 500 ರಿಂದ 550 ರೂ ಇದ್ದದ್ದು, ಭಾನುವಾರ ಇದ್ದಕ್ಕಿದ್ದಂತೆ 520ರಿಂದ 570 ರೂ.ನಂತೆ ಮಾರಾಟ ಮಾಡಿದ್ದಾರೆ. ಕೋಳಿ ಮಾಂಸದ ಕೆ.ಜಿ.ಗೆ 200 ರೂ.ವರೆಗೆ ಏರಿತ್ತು. ಮೀನಿನ ಮಾರುಕಟ್ಟೆಯಲ್ಲಿ ದರದುಬಾರಿಯಾಗಿತ್ತು.
150ರಿಂದ 180 ರೂ.ಗಳಿಗೆ ಮಾರುತ್ತಿದ್ದ ಮೀನುಗಳನ್ನು 200ರಿಂದ 240 ರೂ.ಗಳಿಗೆ ಹಾಗೂ 600, 800 ರೂ.ಗಳ ಮೀನಿನ ದರ 1000 ರೂ.ವರೆಗೆ ದರ ನಿಗದಿಪಡಿಸಲಾಗಿತ್ತು. ಮೊಟ್ಟೆ ಒಂದಕ್ಕೆ 5.50 ಯಿಂದ 6 ರೂ.ವರೆಗೆ ಮಾರಾಟವಾಗುತ್ತಿತ್ತು.
ಒಟ್ಟಾರೆಯಾಗಿ ಯುಗಾದಿನ ಹೂ, ಹಣ್ಣು ತರಕಾರಿ ಬೆಲೆ ಗಗನಕ್ಕೆ ಏರಿದ್ದು, ಮಾರನೆ ದಿನ ಕೋಳಿ ಮಾಂಸ, ಮೊಟ್ಟೆ ಮತ್ತು ಕುರಿ-ಮೇಕೆ ಮಾಂಸ ಹಾಗೂ ಮೀನನ ದರ ಹೆಚ್ಚಾಗಿದ್ದರೂ ಬೇಡಿಕೆ ಕುಗ್ಗಿರಲಿಲ್ಲ.
ಬೆಳ್ಳುಳ್ಳಿ-ಈರುಳ್ಳಿ, ಶುಂಠಿ, ನಿಂಬೆ ಹಣ್ಣು, ಸೌತೆಕಾಯಿ ಮತ್ತಿ ತರ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಬೆಳ್ಳುಳ್ಳಿ 80 ರೂ. ದಾಟಿದೆ. ನಿಂಬೆ ಹಣ್ಣು ಒಂದಕ್ಕೆ 5 ರೂ. ಮೇಲ್ಪಟ್ಟಿತ್ತು. ಶುಂಠಿ ಕೂಡ 80 ರೂ. ಇತ್ತು. ಕೊತ್ತಂಬರಿ ಸೊಪ್ಪು ದುಬಾರಿಯಾಗಿದ್ದು, ನಾಟಿ ಕೊತ್ತಂಬರಿ ಒಂದು ಕಂತೆಗೆ 40-50 ರೂ. ನಂತೆ ಮಾರಾಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Kannada Rajyotsava: ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಕನ್ನಡ: ತುಷಾರ್
Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು
Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.