ಕರಾವಳಿ ಅಪರಾಧ ಸುದ್ದಿಗಳು


Team Udayavani, Apr 8, 2019, 10:45 AM IST

crime-news-symbolic-750

ಉಳಿ: ಅಟ್ಟದಿಂದ ಬಿದ್ದು ಸಾವು
ಪುಂಜಾಲಕಟ್ಟೆ: ಮನೆಯ ಅಟ್ಟದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಬಂಟ್ವಾಳ ತಾಲೂಕು ಉಳಿ ಗ್ರಾಮದ ಮಾದೋಡಿ ನಿವಾಸಿ ಶಿವರಾಮ ಗೌಡ (68) ಅವರು ಎ. 5ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರು ಎ.4ರಂದು ರಾತ್ರಿ ಅಡಿಕೆ ಗೋಣಿ ಇರಿಸಲು ಅಟ್ಟಕ್ಕೆ ಹೋಗಿದ್ದು, ಮರದ ಏಣಿ ಮೂಲಕ ಇಳಿಯುತ್ತಿದ್ದಾಗ ಬಿದ್ದು ತಲೆಗೆ ಗಂಭೀರ ಏಟಾಗಿತ್ತು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಮೃತರ ಪುತ್ರ, ಶಿಕ್ಷಕ ಸಂತೋಷ್‌ ದೂರಿನಂತೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶಿವರಾಮ ಗೌಡರು ಪ್ರಗತಿಪರ ಕೃಷಿಕರಾಗಿದ್ದು ಟೈಲರಿಂಗ್‌ ವೃತ್ತಿಯನ್ನೂ ನಡೆಸುತ್ತಿದ್ದರು. ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದು, ಎ.4ರಂದು ಕಕ್ಯಪದವಿನಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಭಾಗವಹಿಸಿದ್ದರು. ಅವರು ಉಳಿ ಯುವಕ ಮಂಡಲದ ಮಾಜಿ ಅಧ್ಯಕ್ಷ, ಸರಪಾಡಿ ವ್ಯ.ಸೇ.ಸ. ಬ್ಯಾಂಕ್‌ ಮಾಜಿ ನಿರ್ದೇಶಕರಾಗಿದ್ದರು. ಉತ್ತಮ ಕಬಡ್ಡಿ ಆಟಗಾರರಾಗಿದ್ದರು. ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೇಬಿ ಕುಂದರ್‌, ಮಾಜಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್‌ ಮತ್ತಿತರರು ಅಂತಿಮ ದರ್ಶನ ಪಡೆದರು.

ಕ್ರಿಕೆಟ್‌ ಬೆಟ್ಟಿಂಗ್‌ ನಿರತ ನಾಲ್ವರ ಸೆರೆ: 48,070 ರೂ. ಮೌಲ್ಯದ ಸೊತ್ತು ವಶ
ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೊಬೈಲ್‌ ಆ್ಯಪ್‌ ಮೂಲಕ ಕ್ರಿಕೆಟ್‌ ಬೆಟ್ಟಿಂಗ್‌ ನಿರತ ನಾಲ್ವ ರನ್ನು ಉರ್ವ ಪೊಲೀ ಸರು ಬಂಧಿ ಸಿ, 48,070 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿ ಕೊಂಡಿದ್ದಾರೆ. ಬಿಜೈ ನ್ಯೂ ರೋಡ್‌ನ‌ ನಿವಾಸಿ ಇರ್ವಿನ್‌ ಜೆರಾಲ್ಡ್‌ ಡಿ’ಸೋಜಾ, ವಿಜಯಪುರ ಜಿಲ್ಲೆ ಮುದ್ದೆಬಿಹಾಳದ ತಾಳಿಕೋಟೆ ನಿವಾಸಿ ಹಾಜಿ ಇಸ್ಮಾ ಯಿಲ್‌(26), ಬೆಳ್ತಂಗಡಿ ಕಳಂಜೆಯ ಜೋಸೆಫ್ ಥೋಮಸ್‌ (27) ಮತ್ತು ಅಡ್ಯಾರ್‌ ವಳಚ್ಚಿಲ್‌ ನಿವಾಸಿ ಇಸ್ಮಾಯಿಲ್‌ (65) ಬಂಧಿತರು. ಎ.4ರಂದು ಬಿಜೈ ನ್ಯೂ ರೋಡ್‌ 4ನೇ ತಿರುವು ರಸ್ತೆಯ ಒಲಿವಾ ಅಪಾರ್ಟ್‌ಮೆಂಟ್‌ನ ಮನೆಯೊಂದ ರಲ್ಲಿ ಬೆಟ್ಟಿಂಗ್‌ ಗಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಉರ್ವ ಸಿಐ ನೇತೃ ತ್ವದ ತಂಡ ದಾಳಿ ನಡೆಸಿ, ಇರ್ವಿನ್‌ ಜೆರಾಲ್ಡ್‌ ಡಿ’ ಸೋಜಾನನ್ನು ಬಂಧಿ ಸಿ ತು. ಆತ ನಿಂದ ಮೂರು ಮೊಬೈಲ್‌ ಫೋನ್‌, ಲ್ಯಾಪ್‌ಟಾಪ್‌ ಹಾಗೂ 1,450 ರೂ. ನಗದು ಸಹಿತ ಒಟ್ಟು 36,450 ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಎ. 5ರಂದು ಬಿಜೈನ ಲಾಡಿjಗೆ ದಾಳಿ ಮಾಡಿ, ಕ್ರಿಕೆಟ್‌ ಬೆಟ್ಟಿಂಗ್‌ ನಿರತ ಹಾಜಿ ಇಸ್ಮಾಯಿಲ್‌, ಜೋಸೆಫ್ ಥೋಮಸ್‌ ಮತ್ತು ಇಸ್ಮಾಯಿಲ್‌ ಅವರನ್ನು ಬಂಧಿಸಲಾ ಗಿದೆ. ಬಂಧಿ ತ ರಿಂದ ಮೂರು ಮೊಬೈಲ್‌, 1,320 ರೂ. ನಗದು ಸಹಿತ ಒಟ್ಟು 11,620 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಚಿಮಿಣಿ ದೀಪದಿಂದ ಬೆಂಕಿ: ಓರ್ವ ಸಾವು
ಮಂಗಳೂರು, : ಬಲ್ಲಾಳ್‌ಬಾಗ್‌ನ ವಿವೇಕನಗರದ ಮನೆಯಲ್ಲಿ ಮಲಗಿದ್ದಾಗ ಹಾಸಿಗೆಗೆ ಆಕಸ್ಮಿಕ ಬೆಂಕಿ ತಗುಲಿ ರವೀಂದ್ರ (40) ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ರಾತ್ರಿ ಸುಮಾರು 10.45ರ ವೇಳೆಗೆ ಚಿಮಣಿ ದೀಪ ಅಚಾನಕ್‌ ಆಗಿ ಬಿದ್ದು ರವೀಂದ್ರ ಅವರ ಹಾಸಿಗೆ ಮತ್ತು ಬಟ್ಟೆಗಳಿಗೆ ಬೆಂಕಿ ತಗುಲಿತ್ತು. ಬಳಿಕ ಬೆಂಕಿ ಕೊಠಡಿ ಪೂರ್ತಿ ವ್ಯಾಪಿಸಿ ರವೀಂದ್ರ ಹೊರಬರಲಾಗದೆ ಸ್ಥಳದಲ್ಲೇ ಸಾವನ್ನಪ್ಪಿದರು.  ಮನೆಯಲ್ಲಿ ರವೀಂದ್ರ ಮತ್ತು ಅವರ ತಾಯಿ ಲಕ್ಷ್ಮೀ ಮಾತ್ರ ವಾಸವಾಗಿದ್ದು, ಲಕ್ಷಿ ಅಸೌಖ್ಯದಿಂದ ಬಳಲುತ್ತಿದ್ದ ಕಾರಣ ಹೊರಗೆ ಮಲಗಿದ್ದರು. ಅವರು ಬೆಂಕಿಯನ್ನು ಕಂಡು ಬೊಬ್ಬೆ ಹಾಕಿದ್ದು, ಸ್ಥಳೀಯರು ಬಂದು ಬೆಂಕಿ ನಂದಿಸಿದರು. ರವೀಂದ್ರ ಅವರು ನಗರದ ಕೊಡಿಯಾಲ್‌ಬೈಲ್‌ನ ಪಾಸ್‌ಪೋರ್ಟ್‌ ಕಚೇರಿಯಲ್ಲಿ ಗುಮಾಸ್ತರಾಗಿ ದ್ದರು. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

8-madikeri

Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

7-bus

Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.