ಬ್ಯುಸಿನೆಸ್‌ನಲ್ಲಿ ಗೆಲ್ಲಲು ಏನು ಮಾಡಬೇಕು? ಏನು ಮಾಡಬೇಕು?


Team Udayavani, Apr 8, 2019, 11:25 AM IST

business

ಸ್ವಂತ ಬಿಜಿನೆಸ್‌ ಮಾಡಬೇಕು,ಆ ಪ್ರಯತ್ನದಲ್ಲಿ ಗೆಲ್ಲಬೇಕು. ಇದು, ಪ್ರತಿಯೊಬ್ಬ ಮನುಷ್ಯನೊಳಗೂ ಇರುವ ಸುಪ್ತ ಬಯಕೆ. ಅವನೊಬ್ಬ ಯಶಸ್ವಿ ಕೃಷಿಕನೋ, ಒಳ್ಳೇ ಸಂಬಳದ ನೌಕರನೋ ಆಗಿದ್ದರೂ ಕೂಡ, ಅಂಥವನಿಗೂ ಏನಾದ್ರೂ ಬ್ಯುಸಿನೆಸ್‌ ಮಾಡಬೇಕು ಎಂಬು ಹಪಹಪಿ ಇದ್ದೇ ಇರುತ್ತದೆ. ತನ್ನ ಜೊತೆಗೇ ಇದ್ದ ಸಂಬಂಧಿಯೋ, ಗೆಳೆಯನೋ, ಪರಿಚಯದವರೋ ಹೊಸದೊಂದು ಬ್ಯುಸಿನೆಸ್‌ ಆರಂಭಿಸಿ ಗೆದ್ದು ಬಿಟ್ಟರೆ, ನಾನೂ ಅಂಥದೊಂದು ರಿಸ್ಕ್ ತಗೊಳ್ಳಬಹುದಲ್ಲ ಎಂಬು ಆಸೆ ಇದ್ದಕ್ಕಿದ್ದಂತೆ ಕೈ ಜಗ್ಗುತ್ತದೆ.

ಆನಂತರದಲ್ಲಿ ಸುಮ್ಮನೇ ಇರಲು ಸಾಧ್ಯವಾಗುವುದೇ ಇಲ್ಲ. ಹೊಸ ಬ್ಯುಸಿನೆಸ್‌ ಆರಂಭಿಸಲು ಮನಸ್ಸು ಒಳಗೊಳಗೇ ಸಜ್ಜಾಗುತ್ತಿರುತ್ತದೆ. ಕಣ್ತೆರದರೂ, ಕಣ್ಮುಚ್ಚಿದರೂ ಗೆಲುವಿನ ಕನಸೇ. ಹೋಟೆಲ್‌, ಪ್ರಾವಿಷನ್‌ ಸ್ಟೋರ್‌, ಪುಸ್ತಕದ ಅಂಗಡಿ, ಫ‌ೂಟ್‌ ಸ್ಟಾಲ್‌, ಜೆರಾಕ್ಸ್‌ ಶಾಪ್‌… ಹೀಗೆ ಯಾವುದೇ ಹೊಸದೊಂದು ಉದ್ಯಮ ಆರಂಭಿಸಲು ಹೊರಡುತ್ತಾರಲ್ಲ, ಅವರಿಗೆಲ್ಲ ಇರುವ ಕೆಟ್ಟ
ಗುಣ ಅಂದರೆ- ಓವರ್‌ ಕಾನಿ³ಡೆನ್ಸ್‌. ಅಂದರೆ, ಈ ಪ್ರಯತ್ನದಲ್ಲಿ ಗೆದ್ದೇಗೆಲೆವೆ ಎಂಬ ಅತಿಯಾದ ಆತ್ಮವಿಶ್ವಾಸ. ನಮ್ಮ ಸುತ್ತಮುತ್ತಲೂ ಪ್ರತಿಸ್ಪರ್ಧಿಗಳಿದ್ದಾರೆ. ಅವರೊಂದಿಗೆ ಸೆಣಸಾಡುತ್ತಲೇ ನಾವು ಗೆಲ್ಲಲು ಪ್ರಯತ್ನಿಸಬೇಕು. ಅಕಸ್ಮಾತ್‌ ಈ ಪ್ರಯತ್ನದಲ್ಲಿ ನಾವು ಸೋತು ಹೋದರೆ? ಎಂದು ಹೆಚ್ಚಿನವರು ಯೋಚಿಸುವುದೇ ಇಲ್ಲ.ಅವರು ಗೆದ್ದಿದ್ದಾರೆ ಅಲ್ವ? ಅವರೇ ಗೆದ್ದ ಮೇಲೆ ನಾವೂ ಗೆಲ್ತಿವಿ ಎಂದಷ್ಟೇ ಲೆಕ್ಕಹಾಕುತ್ತಾರೆ.

ಅನುಕರಣೆಯಿಂದ ಲಾಭವಿಲ್ಲ
ಬ್ಯುಸಿನೆಸ್‌ ಆರಂಭಿಸುವ ಪ್ರತಿಯೊಬ್ಬರೂ ತಿಳಿದಿರಬೇಕಾ  ಸಂಗತಿಯೊಂದಿದೆ. ಯಾವತ್ತೂ ಪ್ರತಿ ಸ್ಪರ್ಧಿಯನ್ನು ಅನುಕರಿಸಲು ಹೋಗಬಾರದು. ಉದಾಹರಣೆಗೆ- ಈಗಾಗಲೇ ಒಂದು ಹೋಟೆಲ್‌ ಆರಂಭವಾಗಿರುವ ಸ್ಥಳದಲ್ಲಿಯೇ ಹೊಸದೊಂದು ಹೋಟೆಲ್‌ ಆರಂಭಿಸಿದರೆ, ಎದುರು ಹೋಟೆಲ್‌ನಲ್ಲಿ ಇದೆಯಲ್ಲ; ಅಷ್ಟೇ ಬೆಲೆ ಇದ್ದರೆ, ಹೊಸ ಹೋಟೆಲಿಗೆ ಖಂಡಿತ ಜನ ಬರುವುದಿಲ್ಲ. ಜನ ಬರಬೇಕು ಅಂದರೆ, ಕಡಿಮೆ ಬೆಲೆ ಇಡಬೇಕು. ಹಾಗೆಯೇ ಈ ಮೊದಲೇ ಪರಿಚಯವಾಗಿರುವ ಹೋಟೆಲ್‌ಗಿಂತ ಹೆಚ್ಚಿನ ಟೇಸ್ಟ್‌ ಎಲ್ಲಾ ತಿಂಡಿಗೂ ಇರುವಂತೆ ನೋಡಿಕೊಳ್ಳಬೇಕು. ಇದೇ ಮಾತನ್ನು ಮ್ಯಾಗಜೀನ್‌ ಆರಂಭಿಸುವ/ಪ್ರಾವಿಷನ್‌ ಸ್ಟೋರ್‌ ತೆರೆಯುವ ಉತ್ಸಾಹಿಗಳಿಗೂ ಹೇಳಬಹುದು.

ನೆನಪಿಡಿ; ಪಕ್ಕದ ಅಂಗಡಿಗಿಂತ ಎರಡು ರುಪಾಯಿ ಕಡಿಮೆ ಬೆಲೆಗೆ ಎಲ್ಲ ವಸ್ತುಗಳನ್ನೂ ಮಾರಿದರೆ, ಅದೊಂದು ಕಾರಣಕ್ಕೇ ಹೊಸ ಬ್ಯುಸಿನೆಸ್‌ಗೆ ಮಾರ್ಕೆಟ್‌ ಮತ್ತು ಪ್ರಚಾರ ಸಿಕ್ಕಿಬಿಡುತ್ತದೆ. ಅದ್ದೂರಿಯಿಂದ ದೂರವಿರಿ
ಸಾವಿರ ಮೈಲಿಯ ಪ್ರಯಾಣವೂ ಒಂದು ಪುಟ್ಟ ಹೆಜ್ಜೆಯಿಂದ ಶುರುವಾಗುತ್ತದೆ ಎಂಬು ಮಾತಿದೆಯಲ್ಲವೇ? ಈ ಬ್ಯುಸಿನೆಸ್‌ ಎಂಬುದೂ ಹಾಗೆಯೇ, ಇಲ್ಲಿ, ಒಂದೊಂದೇ ರುಪಾಯಿ ಜೊತೆಯಾಗುತ್ತಾ ಹೋಗಬೇಕು. ಪೈಸೆಗೆ ಪೈಸೆ ಜೊತೆಯಾಗುತ್ತಾ ಹೋಗಬೇಕೇವಿನಃ ಲೆಕ್ಕಕ್ಕೇ ಸಿಗದ ರೀತಿಯಲ್ಲಿ ಹಣ ಪೋಲಾಗಬಾರದು.

ಒಮ್ಮೆ ನೆನಪು ಮಾಡಿಕೊಳ್ಳಿ. ಕೆಲವು ಹೋಟೆಲ್‌ಗ‌ಳು, ಅಂಗಡಿಗಳು ಧಾಂ ಧೂಂ ಎಂಬ ಅಬ್ಬರದೊಂದಿಗೇ ಐದಾರು ತಿಂಗಳು ನಡೆಯುತ್ತವೆ. ಆಮೇಲೊಂದು ದಿನ ಇದ್ದಕ್ಕಿದ್ದಂತೆ ಬಾಗಿಲು ಮುಚ್ಚಿ ಕೊಳ್ಳುತ್ತವೆ. ಯಾಕೆ
ಹೀಗೆ ಎಂದು ವಿಚಾರಿಸಿದರೆ, ಲಾಸ್‌ ಆಯ್ತಂತೆ ಎಂಬ ಸಿದ್ಧ ಉತ್ತರ ಸಿಗುತ್ತದೆ. ಏನಾಗಿರುತ್ತದೆ ಅಂದರೆ, ಜನರನ್ನು ಆಕರ್ಷಿಸಬೇಕು, ಅದಕ್ಕಿಂತ ಹೆಚ್ಚಾಗಿ, ಎದುರಾಳಿಗಿಂತ ಜೋರಾಗಿ ಸದ್ದು ಮಾಡಬೇಕು ಎಂಬ ಹಪಾಹಪಿಯಲ್ಲಿ ಐವತ್ತಕ್ಕೂ ಹೆಚ್ಚು ಲೈಟ್‌, 20ಕ್ಕೂ ಹೆಚ್ಚು ಫ್ಯಾನ್‌ ಬಳಕೆ ಆಗಿರುತ್ತದೆ. ಅಂಗಡಿ ವ್ಯಾಪಾರದಿಂದ ದೊರೆತ ಲಾಭ, ಈ ಅದ್ದೂರಿತನಕ್ಕೇ ಖರ್ಚಾಗಿ ಹೋಗಿರುತ್ತದೆ.
ಆಸೆ ಇರಲಿ, ದುರಾಸೆ ಬೇಡ ಮೊದಲೇ ಹೇಳಿದಂತೆ, ಒಂದಷ್ಟು ಲಾಭ ಮಾಡಿಕೊಳ್ಳಬೇಕು ಎಂಬ ಆಸೆಯಿಂದಲೇ ಎಲ್ಲರೂ ಬ್ಯುಸಿನೆಸ್‌ಗೆ ಮುಂದಾಗುತ್ತಾರೆ. ಯಾವುದೇ ವ್ಯವಹಾರ ನಿಮ್ಮ ಕೈ ಹಿಡಿಯುತ್ತಿದೆ ಅನ್ನಿಸಿದರೆ ಅದರಿಂದ ಕನಿಷ್ಠ ಲಾಭ ಮಾಡಿಕೊಳ್ಳುವತ್ತ ಮಾತ್ರ ಗಮನವಿರಲಿ. ಯಾವುದೋ ಒಂದು ಉತ್ಪನ್ನ ನಿಮ್ಮಲ್ಲಿ ಮಾತ್ರ ಸಿಗುತ್ತದೆ ಎಂದಾದರೆ, ಅದರಿಂದ ಗರಿಷ್ಠ ಲಾಭ ಮಾಡಿಕೊಳ್ಳುವ ದುಬುìದ್ಧಿ ಬೇಡ. ವ್ಯಾಪಾರ ಮಾಡುವಾಗ ಖಂಡಿತ ಆಸೆ ಇರಲಿ, ದುರಾಸೆಗೆ ಯಾವತ್ತು ಬಲಿಯಾಗಬೇಡಿ. ಸಾಲ ಕೊಟ್ರೆ ಸೋಲು ಗ್ಯಾರಂಟಿ ವ್ಯಾಪಾರ ಅಂದ ಮೇಲೆ ಸಾಲ ಕೇಳುವವರು ಬಂದೇ ಬರುತ್ತಾರೆ. ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಎಂದು ಬೋರ್ಡ್‌ ಬರೆಸಿ ಹಾಕಿದರೂ, ಸಾಲ ಕೇಳುವವರ ಸಂಖ್ಯೆ ಕಡಿಮೆ ಆಗುವುದಿಲ್ಲ. ಕೆಲವೊಮ್ಮೆ, ತೀರಾ ಪರಿಚಯದವರೇ, ಸಂಬಂಧಿಗಳೇ ಸಾಲ ಕೇಳುತ್ತಾರೆ.

ಆಗೆಲ್ಲಾ ನಿಷ್ಠುರವಾಗಿ “ನೋ’ ಅಂದರೆ ಮಾತ್ರ ಬ್ಯುಸಿನೆಸ್‌ ನಲ್ಲಿ ಸಕ್ಸಸ್‌ ಆಗಬಹುದು. ಅದರ ಬದಲಾಗಿ, ಪರಿಚಯದವರಿಗೆ “ನೋ’ ಅನ್ನುವುದು ಹೇಗೆ ಎಂದೆಲ್ಲ ಯೋಚಿಸಿ, ಸಾಲ ಕೊಟ್ಟು ಬಿಟ್ಟರೆ, ಖಂಡಿತ ಅದರಿಂದ ಲಾಸ್‌ ಆಗುವುದು ಗ್ಯಾರಂಟಿ.

ತರಂಗಿಣಿ

ಟಾಪ್ ನ್ಯೂಸ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.