“ಕುಟುಂಬ ಜೀವನದ ಪ್ರಥಮ ಕಾರ್ಯ’


Team Udayavani, Apr 8, 2019, 2:27 PM IST

sudi-1
ಬಂಟ್ವಾಳ:  ವರ್ಷಂಪ್ರತಿ ಖೀದ್‌ ಮತುಲ್‌ ಇಸ್ಲಾಂ ಅಸೋಸಿಯೇಶನ್‌ ನಡೆಸುವ ಸರಳ ಸಾಮೂಹಿಕ ವಿವಾಹವು ಮಹತ್ತರ ಕಾರ್ಯವಾಗಿದೆ. ಕುಟುಂಬ ಜೀವನದ ಪ್ರಥಮ ಕಾರ್ಯ ವಿವಾಹ ವಾಗಿದೆ. ಈ ಸೇವೆಗೆ ತಕ್ಕ ಪ್ರತಿಫಲ ದೇವರು ನೀಡಲಿ ಎಂದು  ಹತ್ತನೇ ಮೈಲುಕಲ್ಲು ತ್ವಾಹಾ ಜುಮಾ ಮಸೀದಿ ಖತೀಬ್‌ ಜಾಫರ್‌ ಮುಸ್ತಾನಿ ಹೇಳಿದರು.
ಎ. 7ರಂದು ಫ‌ರಂಗಿಪೇಟೆ ನೇತ್ರಾವತಿ ನದಿ ದಡದಲ್ಲಿ ಮುಹಿಯ್ಯುದ್ದೀನ್‌ ಜುಮಾ ಮಸೀದಿ ಸಹಕಾರದೊಂದಿಗೆ ಖೀದ್‌ ಮತುಲ್‌ ಇಸ್ಲಾಂ ಅಸೋಸಿಯೇಶನ್‌ ಫ‌ರಂಗಿಪೇಟೆ ಆಶ್ರಯದಲ್ಲಿ ನಡೆದ 6ನೇ ವರ್ಷದ 10 ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಂಪಣಮಜಲು ಅರಫಾ ಮಸೀದಿಯ ಖತೀಬ ಅಬ್ದುಲ್‌ ನಾಸೀರ್‌ ಧಾರಿಮಿ ದುವಾ ನಡೆಸಿದರು. ಜಿ.ಪಂ. ಮಾಜಿ ಸದಸ್ಯ ಉಮ್ಮರ್‌ ಫಾರೂಕ್‌ ಮಾತ ನಾಡಿ, ಈ ವರೆಗೆ 59 ಜೋಡಿಗಳಿಗೆ ಸಾಮೂಹಿಕ ವಿವಾಹ ಈ ಸಂಘಟನೆಯ ಮೂಲಕ ನಡೆದಿದೆ. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಇಲ್ಲಿನ ಸಮಸ್ತ ಜನರ ಸಹಕಾರದಿಂದ ಸಾಧ್ಯವಾಗಿದೆ ಎಂದು ಹೇಳಲು ಸಂತೋಷವಾಗುತ್ತಿದೆ. ಬಡ ಕುಟುಂಬದ ಸಂಕಟವನ್ನು, ನಮ್ಮ ಮನೆಯ ಕುಟುಂಬದ ಹೆಣ್ಣು ಮಕ್ಕಳ ಸಮಸ್ಯೆ ಎಂದು ತಿಳಿದು ದೇವರು ಮೆಚ್ಚುವ ಉತ್ತಮ ಕಾರ್ಯ ಕ್ರಮವನ್ನು ಖೀದ್‌ ಮತುಲ್‌ ಇಸ್ಲಾಂ ಅಸೋಸಿಯೇಶನ್‌ ಮಾಡಿದೆ ಎಂದು ತಿಳಿಸಿದರು.
ಹಾಪೀಲ್‌ ಮಹಮ್ಮದ್‌ ರಂಝೀ ಕಿರಾಅತ್‌ ಪಠಿಸಿದರು.  ವಳಚ್ಚಿಲ್‌ ಜುಮಾ ಮಸೀದಿಯ ಗೌರವ ಅಧ್ಯಕ್ಷ ಝಫರುಲ್ಲಾ ಒಡೆಯರ್‌, ಬದ್ರಿಯಾ ಮಸೀದಿ ಖತೀಬ್‌ ಅಬುಸಾಲಿ ಫೈಝಿ, ಹಾಜಿ ಅಬ್ದುಲ್‌ ರಝಾಕ್‌ ಮಲೇಶಿಯಾ, ಫ‌‌ರಂಗಿಪೇಟೆ ಮದ್ರಸದ ಸದರ್‌ ಮುಅಲ್ಲಿಮ್‌ ಇಸ್ಮಾಯಿಲ್‌, ಹಜಾಜ್‌ ಗ್ರೂಪ್‌ ಮಾಲಕ ಹನೀಫ್ ಹಾಜಿ ಗೋಳ್ತಮಜಲು, ಪ್ರಮುಖರಾದ ಮುಸ್ತಾಫ ಎಸ್‌.ಎಂ., ಇಸ್ಮಾಯಿಲ್‌ ಕೆ.ಇ.ಇ.ಎಲ್‌., ಯೂಸುಫ್‌ ಅಲಂಕಾರ್‌, ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್‌ ಮಾರಿಪಳ್ಳ,  ಮಾಜಿ ಅಧ್ಯಕ್ಷ ಹನೀಫ್‌, ಎಫ್‌.ಎ. ಖಾದರ್‌, ಅಬೀದ್‌ ಅಲಿ, ಆರಾಫಾ ಲತೀಫ್‌, ಸೆಲೀಂ ಟೈಲರ್‌ ಫರಂಗಿಪೇಟೆ, ಆಲ್ತಾಫ್‌ ಮೇಲ್ಮನೆ, ನೂರುಲ್‌ ಹುದಾ ಮದ್ರಸ ಕುಂಜತಕಲ ಇದರ ಮಾಜಿ ಅಧ್ಯಕ್ಷ ಅಬೀದ್‌ ಆಲಿ, ಅರಪಾ ಗ್ರೂಪ್‌ನ ಲತೀಫ್, ಸಂಘಟನೆಯ ಪ್ರಮುಖರಾದ ಉಮ್ಮರ್‌ ಫಾರೂಕ್‌, ಮಹಮ್ಮದ್‌ ಬಾವಾ, ಯೂಸುಫ್‌ ಅಲಂಕಾರ್‌, ಎಫ್.ಎನ್‌. ಬಶೀರ್‌, ಹಾಶೀಫ್‌ ಇಕ್ಬಾಲ್‌, ಮಜೀದ್‌ ಫ‌ರಂಗಿಪೇಟೆ ಉಪಸ್ಥಿತರಿದ್ದರು.
ಆಸೀಫ್ ಇಕ್ಬಾಲ್‌ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ಮಹಮ್ಮದ್‌ ತುಂಬೆ, ಅಬ್ದುಲ್‌ ಹಮೀದ್‌ ಗೋಳ್ತ ಮಜಲುವ  ನಿರೂಪಿಸಿದರು.
   ದಾಂಪತ್ಯ ಜೀವನಕ್ಕೆ  ಪಾದಾರ್ಪಣೆ
ಸರಳ ಸಾಮೂಹಿಕ ವಿವಾಹದಲ್ಲಿ ಮಹಮ್ಮದ್‌ ನೌಫ‌ಲ್‌ ಕೆಂಜಾರು ರಾಜಗುಡ್ಡೆ-ಅಜ್ವಿನಾ ಕೊಜಪ್ಪಾಡಿ ಹರೆಕಳ, ಮಹಮ್ಮದ್‌ ಶಾಫಿ ಅಮ್ಲಮೊಗರು -ನಸೀಮಾ ತಿಲಕನಗರ ಅಮ್ಲಮೊಗರು, ಗಫಾರ್‌ ಬಾರಿಯಾ ಕಲ್ಲೇರಿ- ತಾಹೀರಾ ಕೊಯಿಲ, ಮಹಮ್ಮದ್‌ ಅನ್ಸಾರ್‌ ಫ‌ರಂಗಿಪೇಟೆ -ರಮಿನತ್‌ ಸುಜೀರ್‌ ಕೊಡಂಗೆ, ಕಲಂದರ್‌ ಶಾಫಿ ಬಸ್ತಿಗುಡ್ಡೆ ಬೆಳ್ಳಾರೆ – ಆಶೀಕಾ ಕೊಡಿಂಬಾಡಿ, ಅಬ್ದುಲ್‌ ರಶೀದ್‌ ಸುಜೀರ್‌ ದೈಯಡ್ಕ -ಅನೀಶಾ ಸುಜೀರ್‌ ದೈಯಡ್ಕ, ಅಸ್ಲಾಂ ಪರ್ಲಡ್ಕ ಕಾಸರಗೋಡು – ವಹೀದಾ ಆಲಡ್ಕ ಪಾಣೆಮಂಗಳೂರು, ಇಸ್ಮಾಯಿಲ್‌ ಎಂ. ಕೊಯಿಲ ಉಪ್ಪಿನಂಗಡಿ -ನಶೀಮಾ ಬಾರಿಯಾ ಕಲ್ಲೇರಿ  ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.
ಈವರೆಗೆ 59 ಜೋಡಿಗಳು
ಅಧ್ಯಕ್ಷತೆ ವಹಿಸಿದ್ದ ಫ‌ರಂಗಿಪೇಟೆ ಮುಹೀದ್ದೀನ್‌ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್‌ ಬಾವಾ ಮಾತನಾಡಿ, 2000ನೇ ಇಸವಿಯಲ್ಲಿ ಪ್ರಾರಂಭವಾದ ಸಾಮೂಹಿಕ ವಿವಾಹದಲ್ಲಿ  ಈವರೆಗೆ ಸುಮಾರು 59  ಜೋಡಿ ಗಳು ದಾಂಪತ್ಯ
ಜೀವನಕ್ಕೆ ಪಾದಾರ್ಪಣೆ  ಮಾಡುವಲ್ಲಿ ಈ ಸಂಘಟನೆ ಪ್ರಮುಖ ಪಾತ್ರ ವಹಿಸಿವೆ  ಎಂದು ತಿಳಿಸಿದರು.

ಟಾಪ್ ನ್ಯೂಸ್

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.