ಸ್ವದೇಶಿ ನಿರ್ಮಿತ ‘ಧನುಷ್’ ಸೇನೆಗೆ ಸೇರ್ಪಡೆ
ಮೆಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಫಿರಂಗಿ ‘ಧನುಷ್’
Team Udayavani, Apr 8, 2019, 3:02 PM IST
ನವದೆಹಲಿ: ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ‘ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ಸ್ವದೇಶಿ ನಿರ್ಮಿತ ಧನುಶ್ ಫಿರಂಗಿ ತೋಪುಗಳನ್ನು ಸೋಮವಾರದಂದು ಜಬಲ್ಪುರದಲ್ಲಿ ಭಾರತೀಯ ಸೇನೆಗೆ ಹಸ್ತಾಂತರಿಸಲಾಯಿತು. ಧನುಶ್ ಫಿರಂಗಿಗಳನ್ನು ಎಲ್ಲಾ ಪ್ರದೇಶಗಳಲ್ಲೂ ಬಳಸಬಹುದಾಗಿದ್ದು ಮತ್ತು ಸ್ವದೇಶಿ ನಿರ್ಮಿತ ಫಿರಂಗಿಗಳಲ್ಲಿ ದೂರಗಾಮಿ ಸಾಮರ್ಥ್ಯವಿರುವ ಫಿರಂಗಿ ಇದಾಗಿದೆ. ತನ್ನ ಈ ವಿಶೇಷ ಸಾಮರ್ಥ್ಯಕ್ಕಾಗಿ ಇದನ್ನು ‘ದೇಶೀ ಬೋಫೋರ್ಸ್’ ಎಂದೇ ಕರೆಯಲಾಗುತ್ತದೆ, ಮತ್ತು ಇದರ ಗುರಿ ಸಾಮರ್ಥ್ಯ ವಿದೇಶಿ ಬೋಫೋರ್ಸ್ ಫಿರಂಗಿಗಿಂತ 11 ಕಿಲೋ ಮೀಟರ್ ಗಳಷ್ಟು ಹೆಚ್ಚಾಗಿದೆ.
80ರ ದಶಕದಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡ ಬೋಫೋರ್ಸ್ ಫಿರಂಗಿ ತಂತ್ರಜ್ಞಾನವನ್ನು ಬಳಸಿಕೊಂಡು ದೇಶೀಯವಾಗಿ ಧನುಶ್ ಅನ್ನು ನಿರ್ಮಿಸಲಾಗಿದೆ. ಕೆ-9 ವಜ್ರ ಮತ್ತು ಎಂ-777 ಅಲ್ಟ್ರಾ ಲೈಟ್ ಫಿರಂಗಿಗಳ ಬಳಿಕ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳುತ್ತಿರುವ ಮೂರನೇ ವಿಧದ ಫಿರಂಗಿ ಎಂಬ ಹೆಗ್ಗಳಿಕೆಗೆ ಧನುಶ್ ಪಾತ್ರವಾಗುತ್ತಿದೆ. ಆಂತರಿಕ ನ್ಯಾವಿಗೇಷನ್ ಆಧಾರಿತ ದೂರದರ್ಶಿ ವ್ಯವಸ್ಥೆ, ಸ್ವಯಂಚಾಲಿತ ಸ್ವ-ಸ್ಥಿತಿ ಮರಳುವಿಕೆ ವ್ಯವಸ್ಥೆ, ಸ್ವಯಂ ಅಳವಡಿತ ತೋಪು ಲೆಕ್ಕಾಚಾರ ವ್ಯವಸ್ಥೆ ಹಾಗೂ ಆಧುನಿಕ ಸುಧಾರಿತ ತಂತ್ರಜ್ಞಾನದ ಹಗಲು ರಾತ್ರಿ ನೇರ ಫೈರಿಂಗ್ ವ್ಯವಸ್ಥೆ ಸೇರಿದಂತೆ ಹಲವಾರು ಸುಧಾರಿತ ತಂತ್ರಜ್ಞಾನಗಳನ್ನು ‘ಧನುಷ್’ ಹೊಂದಿದೆ.
India’s #FirstEver indigenously designed & developed Dhanush 155mm/45 Calibre towed Gun System is ready for induction into #IndianArmy & will be handed over by Ordnance Factories Board #OFB on 8 April 19. Dhanush can be employed in all types of terrains. pic.twitter.com/o7ceCmDAeI
— ADG PI – INDIAN ARMY (@adgpi) April 7, 2019
ಡಿ.ಆರ್.ಡಿ.ಒ., ಡಿ.ಜಿ.ಕ್ಯು.ಎ., ಭಾರತ್ ಎಲೆಕ್ಟ್ರಾನಿಕ್ಸ್ ನಂತಹ ಡಿ.ಪಿ.ಎಸ್.ಯು., ಸೈಲ್ ನಂತಹ ಪಿ.ಎಸ್.ಯು.ಗಳು ಮತ್ತು ಹಲವಾರು ಖಾಸಗಿ ಉದ್ಯಮಗಳ ಸಹಯೋಗದೊಂದಿಗೆ ‘ಧನುಷ್’ ದೇಶೀಯವಾಗಿ ರೂಪುಗೊಂಡಿರುವುದು ವಿಶೇಷ. ಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಳ್ಳುವುದಕ್ಕೂ ಮುಂಚಿತವಾಗಿ ಧನುಷ್ ಫಿರಂಗಿಯನ್ನು ಹಲವಾರು ವ್ಯತಿರಿಕ್ತ ಸನ್ನಿವೇಶಗಳಲ್ಲಿ ತೀವ್ರ ಪರೀಕ್ಷೆಗೆ ಒಳಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.