ಹೃದಯದ ಖಾಯಿಲೆಯಿಂದ ಬಳಲುತ್ತಿರುವ ಸ್ವರ್ಣಲತಾ
ದಾನಿಗಳ ಸಹಾಯದ ನಿರೀಕ್ಷೆಯಲ್ಲಿ ನೀರ್ಚಾಲು ಸಮೀಪದ ಬಡಕುಟುಂಬ
Team Udayavani, Apr 8, 2019, 4:01 PM IST
ಬದಿಯಡ್ಕ: ಕಾಸರಗೋಡು ಜಿಲ್ಲೆಯ ನೀರ್ಚಾಲು ಸಮೀಪದ ಪೆರ್ವದಲ್ಲಿ ತನ್ನ ಮೂವರು ಹೆಣ್ಣು ಮಕ್ಕಳು ಹಾಗೂ ಗಂಡ ಸುಬ್ರಹ್ಮಣ್ಯ ಭಟ್ಟರನ್ನೊಳಗೊಂಡು ವಾಸಿಸುತ್ತಿರುವ ಸ್ವರ್ಣಲತಾ ಹೃದಯದ ಖಾಯಿಲೆಯಿಂದ ಬಳಲುತ್ತಿದ್ದು ಔಷಧಿಗಾಗಿ ಸಹೃದಯಿ ದಾನಿಗಳ ನೆರವನ್ನು ಕೋರುತ್ತಿದ್ದಾರೆ.
ಹೆಚ್ಚಿನ ಆದಾಯವೇನೂ ಇಲ್ಲದೆ ಕಡಿಮೆ ಆಸ್ತಿಯನ್ನು ಹೊಂದಿರುವ ಪುಟ್ಟ ಮನೆಯಲ್ಲಿ ವಾಸಿಸುವ ಇವರ ಕುಟುಂಬಕ್ಕೆ ಗಂಡ ಸುಬ್ರಹ್ಮಣ್ಯ ಭಟ್ಟರ (ಪ್ಲಂಬರ್) ಸಣ್ಣ ಆದಾಯವೇ ಆಸರೆಯಾಗಿದೆ. ವರ್ಷಗಳ ಹಿಂದೆ ಸಾಲ ಮಾಡಿ ದೊಡ್ಡ ಮಗಳ ವಿವಾಹವನ್ನು ಮಾಡಿದ್ದರು. ನಂತರ ಕೊಂಚ ನೆಮ್ಮದಿಯಲ್ಲಿರುವಾಗ ಸ್ವರ್ಣಲತಾರಿಗೆ ಹೃದಯದ ಖಾಯಿಲೆ ಬಾಧಿಸಿದ್ದು, ಚಿಕಿತ್ಸೆಗಾಗಿ ದೊಡ್ಡ ಮೊತ್ತನ್ನೇ ವ್ಯಯಿಸಲಾಗಿದೆ. ಆದರೂ ಇನ್ನೂ ಸಂಪೂರ್ಣ ಗುಣಮುಖವಾಗದ ಇವರಿಗೆ ಜೀವನ ಪರ್ಯಂತ ಔಷಧಿ ಪರಿಶೋಧನೆ ಅಗತ್ಯವಿರುವುದಾಗಿ ವೈದ್ಯರು ಸೂಚಿಸಿರುತ್ತಾರೆ.
ಸದ್ಯ ಪ್ರತೀ ತಿಂಗಳ ಔಷಧಿ ಖರ್ಚಿಗೆ ರೂಪಾಯಿ 3500ಕ್ಕೂ ಹೆಚ್ಚು ಅಗತ್ಯವಿದೆ. ಇದರೊಂದಿಗೆ ಮನೆ ಖರ್ಚು, ಮಕ್ಕಳ ವಿದ್ಯಾಭ್ಯಾಸ ಖರ್ಚು ಎಲ್ಲವನ್ನೂ ಸರಿ ಹೊಂದಿಸಲು ಪರದಾಡುವಂತಹ ಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಹಾಯಕ್ಕಾಗಿ ನೀರ್ಚಾಲು ಕೇಂದ್ರೀಕರಿಸಿ ಕಾರ್ಯಚರಿಸುತ್ತಿರುವ ನಿವೇದಿತಾ ಸೇವಾ ಮಿಷನ್ ಕಾರ್ಯಕರ್ತರನ್ನು ಅವರು ಸಂಪರ್ಕಿಸಿ ಧನ ಸಹಾಯವನ್ನು ಅಪೇಕ್ಷಿಸಿರುತ್ತಾರೆ.
ಆದುದರಿಂದ ಸಹೃದಯೀ ದಾನಿಗಳು ಮುಂದೆ ಬಂದು ಈ ಕುಟುಂಬದ ಸಂಕಷ್ಟಕ್ಕೆ ನಿವೇದಿತಾ ಸೇವಾ ಮಿಶನ್‌ನೊಂದಿಗೆ ಕೈಜೋಡಿಸಿ ಅವರಿಗೆ ನೆರವಾಗಬೇಕೆಂದು ಸಂಬಂಧಪಟ್ಟವರು ವಿನಂತಿಸಿಕೊಂಡಿರುತ್ತಾರೆ.
ಹೆಚ್ಚಿನ ವಿವರಗಳ ಅಗತ್ಯವಿದ್ದಲ್ಲಿ ಸುಬ್ರಹ್ಮಣ್ಯ ಭಟ್ಟರ 8129532157 ನಂಬ್ರದ ಮೊಬೆಲ್ ಸಂಪರ್ಕಿಸಬಹುದಾಗಿದೆ. ಧನಸಹಾಯವನ್ನು ಮಾಡಲಿಚ್ಛಿಸುವ ದಾನಿಗಳು ಸುಬ್ರಹ್ಮಣ್ಯ ಭಟ್, ಬ್ಯಾಂಕ್ ಖಾತೆ ಸಂಖ್ಯೆ 5322500100934301, ಐಎಫ್‌ಎಸ್‌ಸಿ ಕೋಡ್ ಕೆಎಆರ್‌ಬಿ0000532, ಕರ್ನಾಟಕ ಬ್ಯಾಂಕ್, ನೀರ್ಚಾಲು ಶಾಖೆಗೆ ಹಣವನ್ನು ವರ್ಗಾಯಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.