ಮೋದಿಯಿಂದ ದೇಶದಲ್ಲಿ ಭಯದ ವಾತಾವರಣ
Team Udayavani, Apr 9, 2019, 3:00 AM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಸರ್ಕಾರದ ಸ್ವಾಯತ್ತ ಸಂಸ್ಥೆಗಳೆಲ್ಲವೂ ಮೋದಿ ಪರ ಕೆಲಸ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಭ್ಯರ್ಥಿ ಪರ ಸೋಮವಾರ ಪ್ರಚಾರ ನಡೆಸಿದ ಅವರು, ಈ ದೇಶದಲ್ಲಿ ಯಾರಾದರೂ ನೀಚ ರಾಜಕಾರಣ ಮಾಡುತ್ತಿದ್ದರೆ ಅದು ನರೇಂದ್ರ ಮೋದಿ ಮಾತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಭದ್ರತೆ ಹಾಗೂ ದೇಶದ ನಾಯಕತ್ವ, ಈ ಎರಡೇ ವಿಚಾರಗಳು ಬಿಜೆಪಿಗೆ ಇರುವ ವಿಷಯಗಳು. ಸೈನಿಕರ ಸಾವನ್ನೂ ಪ್ರಧಾನಿಯವರು ಬಂಡವಾಳ ಮಾಡಿಕೊಂಡಿದ್ದಾರೆ. ಪುಲ್ವಾಮಾ ಪ್ರಕರಣವನ್ನು ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.
ಚುನಾವಣೆ ಹತ್ತಿರ ಬಂದಾಗ ದೇಶದ ಅಭದ್ರತೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ನಿವೃತ್ತ ಸೇನಾಧಿಕಾರಿಯೊಬ್ಬರು ನನಗೆ ಎರಡು ವರ್ಷದ ಹಿಂದೆಯೇ ಹೇಳಿದ್ದರು. ಅದೇ ರೀತಿ ಮೋದಿ ನಡೆದುಕೊಂಡಿದ್ದಾರೆ ಎಂದು ಪುನರುತ್ಛರಿಸಿದರು.
ಮೋದಿ ಸರ್ಕಾರ ಮತ್ತೆ ದೇಶದಲ್ಲಿ ಬರುವುದಿಲ್ಲ. ಒಂದು ವೇಳೆ ಅವರು ಅಧಿಕಾರಕ್ಕೆ ಬಂದರೆ ನಾಲ್ಕೂವರೆ ಟ್ರಿಲಿಯನ್ ಕೋಟಿ ಸಾಲ ಮಾಡಿ ಸರ್ಕಾರ ನಡೆಸಲು ಹೊರಟಿದ್ದಾರೆ. ಮೋದಿಯವರದು ದಿವಾಳಿ ಸರ್ಕಾರ ಎಂದು ದೂರಿದರು.
ಮೋದಿ ಇಲ್ಲೇನು ಕಿಸಿದಿರೋದು?: ಮೋದಿ ಪರ ಘೋಷಣೆ ಹಾಕುತ್ತಾರೆ. ಆದರೆ, ನರೇಂದ್ರ ಮೋದಿ ಇಲ್ಲಿ ಕಿಸಿದಿರೋದು ಏನು ಎಂದು ವಾಗ್ಧಾಳಿ ನಡೆಸಿದರು. ಕರಾವಳಿ ಭಾಗದಲ್ಲಿ 500 ಜನ ನಮ್ಮನ್ನು ನೋಡಿ ಅಣ್ಣಾ, ಅಣ್ಣಾ ಎಂದು ಕರೆಯುತ್ತಾರೆ. ಆದರೆ, ನಾಲ್ಕು ಜನ ಯುವಕರ ಗುಂಪು ಮೋದಿ, ಮೋದಿ ಎಂದು ಕರೆಯುತ್ತದೆ. ಈ ಯುವಕರಿಗೆ ಬುದ್ದಿ ಇದೆಯಾ?. ಇವರಿಗೆ ಮೋದಿ ಕೆಲಸ ಕೊಡಿಸಿದ್ದಾರಾ?. ಸುಮ್ಮನೆ ಮೋದಿ, ಮೋದಿ ಎಂದು ಕಿರುಚುತ್ತಿದ್ದಾರೆ ಎಂದು ಹೇಳಿದರು.
“ಲೋಕಸಭೆ ಚುನಾವಣೆ ನಂತರ ನಾನು ನೆಗೆದು ಬೀಳುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ. ಆದರೆ, ದೈವ ನಂಬಿ ಬಂದ ಕುಟುಂಬ ನಮ್ಮದು. ಅಷ್ಟು ಸುಲಭವಾಗಿ ನಾನು ಸಾಯುವುದಿಲ್ಲ. ನನಗೆ ಆಯಸ್ಸು ಗಟ್ಟಿಯಾಗಿದೆ ಎಂದು ನಂಬಿದ್ದೇನೆ’ ಎಂದು ತಿಳಿಸಿದರು.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸದಾನಂದಗೌಡರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅವರನ್ನು ಕ್ಷೇತ್ರದ ಜನರೂ ನೋಡಿಲ್ಲ. ತಮ್ಮ ಕೆಲಸ ನೋಡಿ ಮತ ಕೊಡಿ ಎನ್ನುವ ಬದಲು ಮೋದಿ ಅವರನ್ನು ನೋಡಿ ಮತ ಕೊಡಿ ಎಂದು ಕೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ದೇವೇಗೌಡರನ್ನು ಸಂಸತ್‌ಗೆ ಕೈ ಹಿಡಿದು ಕರೆದುಕೊಂಡು ಹೋಗಬೇಕು ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ದೇವೇಗೌಡರಿಗೆ ಇರುವ ಬ್ರೈನ್ 24 ವರ್ಷದ ಹುಡುಗನಿಗೂ ಇಲ್ಲ. ಅವರಿಗೆ ವಯಸ್ಸಾಗಿರಬಹುದು, ಆದರೆ, ಅವರ ಜ್ಞಾಪಕ ಶಕ್ತಿ, ಚಿಂತನೆ ಯಾವುದಕ್ಕೂ ಕಡಿಮೆ ಇಲ್ಲ. ಅವರು ಸಮಯ, ದಿನಾಂಕ, ದಿನ ಸೇರಿದಂತೆ ಪ್ರತಿದಿನದ ವಿಷಯಗಳನ್ನು ಕರೆಕ್ಟಾಗಿ ಹೇಳ್ತಾರೆ. ದೇವೇಗೌಡರ ಮೇಲೆ ಇಲ್ಲಿವರೆಗೆ ಒಂದು ಕಪ್ಪು ಚುಕ್ಕೆಯೂ ಇಲ್ಲ.
-ಎಚ್.ಡಿ.ಕುಮಾರಸ್ವಾಮಿ, ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.