ಮದುವೆ ಪತ್ರಿಕೆಯಲ್ಲಿ ಮತ ಜಾಗೃತಿ
Team Udayavani, Apr 9, 2019, 6:30 AM IST
ಕುಂದಾಪುರ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ನಾಮ ಸಂವತ್ಸರ, ವಧು – ವರರ ಹೆಸರು, ವಿವಾಹ ನಡೆಯುವ ಸ್ಥಳ, ಇನ್ನೂ ಹೆಚ್ಚೆಂದರೆ ಆಶೀರ್ವಾದವೇ ಉಡುಗೊರೆ ಎನ್ನುವ ಸಂದೇಶವಿರಬಹುದು. ಆದರೆ ಇಲ್ಲೊಂದು ಆಮಂತ್ರಣ ಪತ್ರಿಕೆ ವಿನೂತನವೆನ್ನುವಂತೆ ಈ ಬಾರಿಯ ಲೋಕಸಭಾ ಚುನಾವಣೆಯ ಕುರಿತು ಮತಜಾಗೃತಿ ಮೂಡಿಸುವಂತಿದೆ.
ಮೇ 1 ರಂದು ತಲ್ಲೂರು ಪಾರ್ತಿಕಟ್ಟೆ ಶ್ರೀ ಶೇಷಕೃಷ್ಣ ಕನ್ವೆಷನ್ ಸಭಾಭವನದಲ್ಲಿ ನಡೆಯುವ ಗೌರಿ – ಶ್ರೀನಿವಾಸ್ ದಂಪತಿ ಪುತ್ರ ಗಣೇಶ್ ಕುಮಾರ್ ಪಡುಕೋಣೆ ಹಾಗೂ ಲೀಲಾವತಿ – ನಾರಾಯಣ ಅವರ ಪುತ್ರಿ ಪೂರ್ಣಿಮಾ ಅವರ ವಿವಾಹ ಆಮಂತ್ರಣ ಪತ್ರಿಕೆಯು ಈ ಮತದಾನದ ಕುರಿತ ಜಾಗೃತಿ ಸಂದೇಶ ನೀಡುವ ಮೂಲಕ ಗಮನಸೆಳೆದಿದೆ.
ಒಂಚೂರು ಇಲ್ಕಾಣಿ..
ಆಮಂತ್ರಣ ಪತ್ರಿಕೆಯಲ್ಲಿ ಒಂಚೂರು ಇಲ್ಕಾಣಿ ಎನ್ನುತ್ತಾ ಮತದಾನ ಮಾಡಿ, ಪ್ರಜಾಪ್ರಭುತ್ವ ಗೆಲ್ಲಿಸಿ, ನಾವು ಮಾರಾಟಕ್ಕಿಲ್ಲ ನಮ್ಮ ಮತ ಮಾರಾಟಕ್ಕಿಲ್ಲ ಎನ್ನುವ ಸಂದೇಶವಿದೆ. ಅಷ್ಟೇ ಅಲ್ಲ, ಮದುವೆಗೆ ಬಂದವರು ವಧು – ವರರಿಗೆ ಯಾವುದೇ ಉಡುಗೊರೆ ನೀಡುವಂತಿಲ್ಲ, ಆದರೆ ನೀವು ಓಟು ಹಾಕಿದ್ದರೆ ನಿಮಗೊಂದು ವಿಶೇಷ ಉಡುಗೊರೆ ಕಾದಿದೆ ಎನ್ನುವ ಮಾಹಿತಿಯಿದೆ. ಮತದಾನ ಮಾಡಿದ ಬಗ್ಗೆ ಬೆರಳಿನ ಶಾಯಿ ಗುರುತು ತೋರಿಸಿದವರಿಗೆ ಪುಸ್ತಕ ಉಡುಗೊರೆ ರೂಪದಲ್ಲಿ ಸಿಗಲಿದೆ ಅಂತೆ.
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಕೈಗೊಳ್ಳುತ್ತಿರುವ ಮತದಾನ ಜಾಗೃತಿ ಕಾರ್ಯಕ್ರಮಗಳೊಂದಿಗೆ, ಸಾರ್ವಜನಿಕರೂ ಮತ ಜಾಗೃತಿ ಮೂಡಿಸುವ ಮೂಲಕ ಮಾದರಿಯೆನಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಟವರ್‌ನ ಬುಡದಲ್ಲೇ ನೆಟ್‌ವರ್ಕ್ ಇಲ್ಲ!
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
ಭಾರತ ಮಾತೆಗೆ ಕಿರೀಟ ತೊಡಿಸಿದ ಸರಕಾರ:’ವಿಶ್ವಾರ್ಪಣಮ್’ನಲ್ಲಿ ಪಲಿಮಾರು ಶ್ರೀ ಅಭಿಮತ
Udupi;ಗೀತಾರ್ಥ ಚಿಂತನೆ 146: ಚಾರ್ವಾಕ ಬಿಟ್ಟು ಉಳಿದೆಲ್ಲ ಮತಗಳಲ್ಲಿ ಪುಣ್ಯಪಾಪ ಕಲ್ಪನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.