ಹೊಸಂಗಡಿ: ವಾರಾಹಿ ಬುಡದಲ್ಲೇ ಕುಡಿಯಲು ನೀರಿಲ್ಲ !
Team Udayavani, Apr 9, 2019, 6:30 AM IST
ಕುಂದಾಪುರ: ಇಲ್ಲಿ ಏಷ್ಯಾದಲ್ಲೇ ಎರಡನೆಯ ಅತಿದೊಡ್ಡ ಭೂಗರ್ಭ ವಿದ್ಯುದಾಗಾರವಿದೆ. ವಾರಾಹಿ ಏತನೀರಾವರಿ ಯೋಜನೆ ಕಳೆದ ಮೂರೂವರೆ ದಶಕಗಳಿಂದ ನಿರಂತರ ಮುಂದುವರಿಯುತ್ತಿ ರುವ ಕಾಮಗಾರಿಯಾಗಿ ಪ್ರಸಿದ್ಧ. ಈ ಯೋಜನೆಯಿಂದಾಗಿ ಅನೇಕ ಕಡೆಗೆ ನೀರಾವರಿಗೆ ವ್ಯವಸ್ಥೆಯಾಗಿದೆ.
ಇನ್ನಷ್ಟು ಕಡೆಗೆ ಆಗಲಿದೆ. ಆದರೆ ಇಲ್ಲೇ ನದಿ ಹರಿಯುತ್ತಿದ್ದರೂ ಹೊಸಂಗಡಿಗೆ ಮಾತ್ರ ಪ್ರಯೋಜನ ಆಗಿಲ್ಲ. ಈ ಬಾರಿ ಹಿಂದೆಂದಿಗಿಂತ ಬಹಳ ಬೇಗನೇ ನೀರಿನ ಸಮಸ್ಯೆ ಇಲ್ಲಿ ಕಾಣಿಸಿಕೊಂಡಿದೆ.
ಹೊಸಂಗಡಿ ಪೇಟೆ ವಾಸಿಗಳಿಗೆ ಕುಡಿಯಲು ನೀರಿಲ್ಲ, ಸ್ಥಳೀಯರ ಬಹುತೇಕ ಬಾವಿಗಳು ಬತ್ತಿ ಹೋಗಿದ್ದು ದೂರದ ಊರುಗಳಿಂದ ಸೈಕಲ್, ಬೈಕ್, ವ್ಯಾನ್‌ಗಳಲ್ಲಿ ಜನರು ಕುಡಿಯುವ ನೀರು ತರುವ ಪರಿಸ್ಥಿತಿ ಬಂದಿದೆ. ಟಾಟಾ ಏಸ್, 407 ವಾಹನಗಳಲ್ಲಿ ಟ್ಯಾಂಕ್ ಮೂಲಕ ನೀರು ಖರೀದಿ ಮಾಡುತ್ತಿದ್ದಾರೆ.ಜಲ ವಿದ್ಯುದಾಗಾರದಿಂದ ಕೇವಲ ಎರಡು ಕಿ.ಮೀ. ದೂರದ ಬಾಗಿಮನೆ ಎಂಬಲ್ಲಿ ನೀರು ಹೊರಬಂದರು ಪೇಟೆಯಲ್ಲಿ ನೀರಿಲ್ಲದ ಸ್ಥಿತಿ ಇದೆ. ಮೇಲ್‌ಬಾಗಿಮನೆ, ಕೆಳಬಾಗಿಮನೆ ಪರಿಸರಕ್ಕೆ ಸಂಡೂರು ಜಲವಿದ್ಯುತ್ ಯೋಜನೆ ಮೂಲಕ ನೀರು ಸರಬರಾಜಾಗುತ್ತಿದೆ.
ಎಲ್ಲೆಲ್ಲಿ ನೀರಿಲ್ಲ
ಹೊಸಂಗಡಿ ಪೇಟೆಯಲ್ಲಿ ಸುಮಾರು ಐವತ್ತಕ್ಕೂ ಅಧಿಕ ಮನೆಗಳಿಗೆ ನೀರಿಲ್ಲ. ಅಂತೆಯೇ ಭದ್ರಾಪುರ, ಮಾವಿನಮನೆ, ಕಾರೂರು, ರಾಂಪನಜೆಡ್ಡು, ಬೆದ್ರಳ್ಳಿ, ಹೆಗ್ಗೊàಡ್ಲು, ಕೆರೆಕಟ್ಟೆ ಮೊದಲಾದ ಕಡೆ ಬಾವಿ ಗಳು ಬತ್ತಿ ಹೋಗಿವೆ.
ಕೋಟೆಕೆರೆ
ನಾಲ್ಕು ವರ್ಷಗಳ ಹಿಂದೆ ಕೋಟೆಕೆರೆಯ ಹೂಳೆತ್ತಿದ ಕಾರಣ ಈವರೆಗೆ ನೀರಿಗೆ ಸಮಸ್ಯೆ ಇರಲಿಲ್ಲ. ಈಗ ಮತ್ತೆ ಹೂಳು ತುಂಬಿದ ಕಾರಣ ಕೋಟೆಕೆರೆಯಲ್ಲಿ ನೀರು ಆರಿದೆ. ಇದರಿಂದ ಈ ಭಾಗದ ಪರಿಸರದ ಬಾವಿಗಳಿಗೆ ಸಮಸ್ಯೆಯಾಗಿದೆ.
ವಾರಾಹಿ ನೀರನ್ನು ಕೋಟೆಕೆರೆ ಗಿಂತಲೂ ಮೇಲೆ ಇರುವ ಬಾಕಲ್‌ಕೆರೆಗೆ ಹರಿಸಿದರೆ ನೂರಾರು ಬಾವಿಗಳಿಗೆ ಪ್ರಯೋಜನ ವಾಗಲಿದೆ. ಹೆನ್ನಾಬೈಲು, ಸಿದ್ದಾಪುರದವರೆಗಿನ ಸಮಸ್ಯೆ ನಿವಾರಣೆಯಾಗಲಿದೆ. ಆದರೆ ಇದಕ್ಕಾಗಿ ದೊಡ್ಡ ಮೊತ್ತದ ಯೋಜನೆ ತಯಾರಾಗುವವರೆಗೆ ಸಮಸ್ಯೆ ಅನುಭವಿಸ ಲೇಬೇಕು.
ಹೊಸಂಗಡಿ ಪಂಚಾಯತ್ ಮೂಲಕ ಶನಿವಾರದಿಂದ ನೀರು ವಿತರಣೆ ಆರಂಭವಾಗಿದೆ. ಈಗಾಗಲೇ 7-8 ಪ್ರದೇಶ ಗಳಿಂದ ಕುಡಿಯುವ ನೀರು ಸರಬರಾಜಿಗೆ ಬೇಡಿಕೆ ಬಂದಿದೆ. ಗುಡ್ಡ ಪ್ರದೇಶಗಳಲ್ಲಿ ಕೂಡ ನೀರಿಲ್ಲದ ಕಾರಣ ಅಲ್ಲಿಗೆಲ್ಲ ನೀರು ಸರಬರಾಜು ಮಾಡಬೇಕಿದೆ.
ಪೂರೈಕೆ ಮಾಡಲಾಗುತ್ತಿದೆ
ಶನಿವಾರದಿಂದ ನೀರಿನ ಪೂರೈಕೆ ಮಾಡಲಾಗುತ್ತಿದೆ. ವಿವಿಧೆಡೆಗಳಿಂದ ಬೇಡಿಕೆ ಬಂದಿದ್ದು ಅದರಂತೆ ಅಲ್ಲಿಗೆಲ್ಲ ಕಳುಹಿಸಲಾಗುತ್ತಿದೆ. ಬಾವಿಗಳೆಲ್ಲ ಬೇಗನೇ ಬತ್ತಿದ ಕಾರಣ ನೀರಿನ ಬೇಡಿಕೆ ಹೆಚ್ಚಾಗಿದೆ.
-ಗಿರೀಶ್ ಕುಮಾರ್ ಶೆಟ್ಟಿ, ಪಿಡಿಒ, ಹೊಸಂಗಡಿ
ನೀರು ಖರೀದಿ
ಪಂಚಾಯತ್‌ಗೆ ನೀರಿಗಾಗಿ ಅರ್ಜಿ ಕೊಟ್ಟು ಒಂದು ತಿಂಗಳು ಕಳೆಯಿತು. ಇನ್ನೂ ವ್ಯವಸ್ಥೆಯಾಗಿಲ್ಲ. ಈಗ ನಾವು ಹಣ ಕೊಟ್ಟು ಖಾಸಗಿಯವರಿಂದ ನೀರು ಖರೀದಿಸುತ್ತಿದ್ದೇವೆ. ಹೊಸಂಗಡಿ ಪೇಟೆಯಲ್ಲೇ ಸಮಸ್ಯೆ ಇದೆ.
-ಸುಭಾಶ್ಚಂದ್ರ ಶೆಟ್ಟಿ, ನಿವೃತ್ತ ಶಿಕ್ಷಕರು
- ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.