ಮುಂಬಯಿ ಶೇರು ಪೇಟೆಯಲ್ಲಿ ಎಚ್ಚರಿಕೆಯ ನಡೆ: 88 ಅಂಕಗಳ ಮುನ್ನಡೆ
Team Udayavani, Apr 9, 2019, 10:25 AM IST
ಮುಂಬಯಿ : ವಹಿವಾಟುದಾರರು ಮತ್ತು ಹೂಡಿಕೆದಾರರು ಎಚ್ಚರಿಕೆಯ ನಡೆ ತೋರಿರುವ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 36 ಅಂಕಗಳ ಅಲ್ಪ ಮುನ್ನಡೆ ದಾಖಲಿಸಿತು.
ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು ಎರಡೇ ದಿನಗಳು ಬಾಕಿ ಇದ್ದು ಅದರೊಂದಿಗೆ ಕಂಪೆನಿಗಳ ವಾರ್ಷಿಕ ಫಲಿತಾಂಶಗಳ ಪ್ರಕಟನೆ ಆರಂಭವಾಗುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯಲ್ಲಿ ಎಚ್ಚರಿಕೆಯ ನಡೆ ತೋರಿಬಂದಿದೆ.
ಇಂದು ಬೆಳಗ್ಗೆ 10.25ರ ಸುಮಾರಿಗೆ ಸೆನ್ಸೆಕ್ಸ್ 88.45 ಅಂಕಗಳ ಮುನ್ನಡೆಯನ್ನು ದಾಖಲಿಸಿ 38,788.98 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 16.90 ಅಂಕಗಳ ಮುನ್ನಡೆಯೊಂದಿಗೆ 11,621.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 8 ಪೈಸೆಗಳ ಹಿನ್ನಡೆಯನ್ನು ಕಂಡು 69.73 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. ನಿನ್ನೆ ಸೋಮವಾರ ಒಂದೇ ದಿನ ಡಾಲರ್ ಎದುರು ರೂಪಾಯಿ 44 ಪೈಸೆಗಳ ಕುಸಿತವನ್ನು ದಾಖಲಿಸಿ 69.67 ರೂ. ಮಟ್ಟಕ್ಕೆ ಜಾರಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.