ಸುಧಾರಿತ ರೂಪದಲ್ಲಿ ಭಾರತೀಯ ಸೇನೆಗೆ ಸೇರಲಿದೆ ಬ್ರಹ್ಮೋಸ್ ಕ್ಷಿಪಣಿ
ಹೆಚ್ಚಾಗಲಿದೆ ಬ್ರಹ್ಮೋಸ್ ಕ್ಷಿಪಣಿಯ ವೇಗ ಮತ್ತು ಟಾರ್ಗೆಟ್ ಸಾಮರ್ಥ್ಯ
Team Udayavani, Apr 9, 2019, 3:11 PM IST
ನವದೆಹಲಿ: ಭಾರತ ಮತ್ತು ರಷ್ಯಾ ಜಂಟಿಯಾಗಿ ತಯಾರಿಸುತ್ತಿರುವ ಸೂಪರ್ ಸಾನಿಕ್ ಕ್ರೂಸ್ ಮಿಸೈಲ್ ಬ್ರಹ್ಮೋಸ್ ನ ಗುರಿ ಬೇಧನಾ ಸಾಮರ್ಥ್ಯವನ್ನು ಹೆಚ್ಚಿಸಲು ಕ್ಷಿಪಣಿ ತಯಾರಿಕಾ ಕಂಪೆನಿ ಬ್ರಹ್ಮೋಸ್ ಏರೋಸ್ಪೇಸ್ ಕಂಪೆನಿ ನಿರ್ಧರಿಸಿದೆ. ಬ್ರಹ್ಮೋಸ್ ನ ಪ್ರಸ್ತುತ ಗುರಿ ಸಾಮರ್ಥ್ಯ 400 ಕಿಲೋಮೀಟರ್ ಗಳಾಗಿದ್ದು, ಇದನ್ನು 500 ಕಿಲೋಮೀಟರ್ ಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದರ ಗುರಿ ಬೇಧನಾ ಸಾಮರ್ಥ್ಯದ ಜೊತೆಜೊತೆಗೆ ಹೈಪರ್‌ಸೌಂಡ್ ವಿಧಾನದ ಮೂಲಕ ಈ ಕ್ಷಿಪಣಿಯ ವೇಗವರ್ಧನೆಗೂ ನಿರ್ಧರಿಸಲಾಗಿದೆ.
ಪ್ರಸ್ತುತ ಬ್ರಹ್ಮೋಸ್ ನ ಗರಿಷ್ಠ ವೇಗ 2.8 ಮ್ಯಾಕ್ ಗಳಷ್ಟಾಗಿದ್ದರೆ ಭವಿಷ್ಯದಲ್ಲಿ ಈ ವೇಗವನ್ನು 4.5 ಮ್ಯಾಕ್ ಗೆ ಹೆಚ್ಚಿಸಲಾಗುವುದು ಎಂದು ಕಂಪೆನಿಯ ಆಡಳಿತ ಸಹ ನಿರ್ದೆಶಕ ಅಲೆಕ್ಸಾಂಡರ್ ಮಾಸ್ಕಿವ್ ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಭಾರತೀಯ ಮೂರೂ ಸಶಸ್ತ್ರ ಪಡೆಗಳಲ್ಲೂ ಬ್ರಹ್ಮೋಸ್ ಕ್ಷಿಪಣಿ ಸಂಗ್ರಹವಿದೆ. ಸದ್ಯ ಶತ್ರುಗಳ ದೂರದ ಗುರಿಯನ್ನು ಬೇಧಿಸುವಲ್ಲಿ ಆಧುನಿಕ ಯುದ್ಧ ತಂತ್ರಜ್ಞಾನಕ್ಕೆ ಹೋಲಿಸಿದಲ್ಲಿ ಬ್ರಹ್ಮೋಸ್ ನ ಗುರಿ ಬೇಧನಾ ಸಾಮರ್ಥ್ಯ ಕಡಿಮೆಯಿದ್ದು ಇದನ್ನು ಹೆಚ್ಚಿಸುವ ಅನಿವಾರ್ಯತೆ ಇದೆ. ಮುಂದಿನ ತಲೆಮಾರಿನ ಯುದ್ಧತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಬ್ರಹ್ಮೋಸ್ ಎನ್.ಜಿ. (ನೆಕ್ಸ್ಟ್ ಜನರೇಷನ್) ಎಂಬ ಹೊಸ ಮಾದರಿಯ ಕ್ಷಿಪಣಿ ತಯಾರಿ ಯೋಜನೆ ಕಾರ್ಯಗತಗೊಳ್ಳುವ ಹಂತದಲ್ಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಕೆಲವೇ ವರ್ಷಗಳ ಒಳಗಾಗಿ ಮುಂದಿನ ತಲೆಮಾರಿನ ಈ ಬ್ರಹ್ಮೋಸ್ ಎನ್.ಜಿ. ಭಾರತೀಯ ಸೇನಾಪಡೆಗಳಿಗೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ.
ಈ ನೂತನ ಕ್ಷಿಪಣಿಯನ್ನು ಪ್ರಮುಖವಾಗಿ ಭಾರತೀಯ ವಾಯುಪಡೆಗೆಂದೇ ತಯಾರಿಸಲಾಗುತ್ತಿರುವುದು ವಿಶೇಷವಾಗಿದೆ. ಭಾರತೀಯ ವಾಯುಪಡೆಯ ಸುಖೋಯ್ 30 ಎಂ.ಕೆ.ಐ. ಹಾಗೂ ತೇಜಸ್ ಲಘು ಯುದ್ಧ ವಿಮಾನಗಳಿಗೆ ಹೊಂದಿಕೊಳ್ಳುವ ಮಾದರಿಯಲ್ಲಿ ಈ ಕ್ಷಿಪಣಿಗಳನ್ನು ತಯಾರಿಸಲಾಗುತ್ತಿದೆ. ಇದೀಗ ವಾಯುಪಡೆಯ ಬಳಿಯಲ್ಲಿರುವ ಬ್ರಹ್ಮೋಸ್ ಕ್ಷಿಪಣಿಯ ತೂಕ 2.5 ಟನ್ ಗಳಾಗಿದ್ದರೆ ಈ ಹೊಸ ತಲೆಮಾರಿನ ಕ್ಷಿಪಣಿ 1.5 ಟನ್ ಗಳಷ್ಟು ತೂಕವನ್ನು ಹೊಂದಿರಲಿದೆ. ಮಾತ್ರವಲ್ಲದೆ ಈ ಕ್ಷಿಪಣಿ ತಯಾರುಗೊಂಡ ಬಳಿಕ ಸುಖೋಯ್ ಯುದ್ಧ ವಿಮಾನವೊಂದು ಏಕಕಾಲಕ್ಕೆ ಐದು ಕ್ಷಿಪಣಿಗಳನ್ನು ಹೊತ್ತೂಯ್ಯಬಲ್ಲ ಸಾಮರ್ಥ್ಯವನ್ನು ಪಡೆಯಲಿದೆ. ಮತ್ತು ಇದಕ್ಕಾಗಿ ಸುಖೋಯ್ ರಚನೆಯಲ್ಲಿ ಬದಲಾವಣೆಗಳನ್ನು ತರಲು ನಿರ್ಧರಿಸಲಾಗಿದೆ. ಪ್ರಸ್ತುತ ಸುಖೋಯ್ ಯುದ್ಧ ವಿಮಾನವು ಏಕಕಾಲಕ್ಕೆ ಒಂದು ಕ್ಷಿಪಣಿಯನ್ನು ಮಾತ್ರವೇ ಹೊತ್ತೂಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.