ಮನಸ್ಸು ಅರಳಲಿ
Team Udayavani, Apr 10, 2019, 6:00 AM IST
ಜಗತ್ತಿನಲ್ಲಿ ಎಲ್ಲರಿಗೂ ಎದುರಾಗುವ ದೈನಂದಿನ ಸನ್ನಿವೇಶಗಳಿಗೆ ಸಾಮಾನ್ಯರು ತೋರುವ ಪ್ರತಿಕ್ರಿಯೆಗಳ ಮನೋ ವೈಜ್ಞಾನಿಕ ಹಾಗೂ ವೇದಾಂತಾನು ಗುಣ ವಿಶ್ಲೇಷಣೆಯ ಮೂಲಕ ಸಮರ್ಥ, ಸಂಪನ್ನ ಜೀವನದ ಮಾರ್ಗವನ್ನು ತೋರಿಸಿಕೊಡುತ್ತದೆ ಸ್ವಾಮಿ ದಯಾನಂದ ಸರಸ್ವತೀ ಅವರ ಮನಸ್ಸು ಅರಳಲಿ ಪುಸ್ತಕ. ಈ ಪುಸ್ತಕದ ಮೂಲಕ ಸ್ವಾಮೀ ದಯಾನಂದ ಸರಸ್ವತಿ ಅವರು ಜೀವನದ ಬಗೆಗಿನ ಹಲವು ಜಿಜ್ಞಾಸತ್ಮಕವಾದ ಪ್ರಶ್ನೆಗಳಿಗೆ ತಮ್ಮ ಅನುಭವದ ಮೂಲಕ ಸರಳವಾಗಿ ಉತ್ತರ ನೀಡಿರುವುದು ಗಮನಾರ್ಹವಾದುದು.
ಘಟನೆ 1
ದೇಹವೇನೊ ಪ್ರಕೃತಿ ನಿಯಮದಂತೆ ಬೆಳೆಯುತ್ದೆ. ಆದರೆ ವ್ಯಕ್ತಿತ್ವವು ಸಮಗ್ರವಾಗಿ ರೂಪಗೊಳ್ಳಬೇಕಾದರೆ ಮನಸ್ಸು ಅರಳಬೇಕು. ಇದಕ್ಕೆ ಆತ್ಮಾವಲೋಕನ, ಆತ್ಮ ಸಂಸ್ಮರಣ ಅನಿವಾರ್ಯ. ಮನಸ್ಸಿನೊಡನೆ ದ್ವಂದಕ್ಕೆ ನಿಲ್ಲದಂತೆ ವಿವಿಧತೆಯನ್ನು ಬೆಳೆಸಿಕೊಂಡಲ್ಲಿ ಶಾಂತಿಯೂ, ಸುಖವೂ ದೊರೆಯುತ್ತದೆ. ಹೀಗೆ ಮನಸ್ಸನ್ನು ಪಕ್ವಗೊಳಿಸುವಂಥ ನಡೆ ನುಡಿಗಳನ್ನು ಬೋಧಿಸುವ ಶಾಸ್ತ್ರವೇ ವೇದಾಂತ ಎಂದು ಅವರು ಪ್ರತಿಯೊಬ್ಬರಿಗೂ ಹೇಳುವ ಮಾತಾಗಿದೆ.
ಘಟನೆ 2
ಬದುಕೆಂಬ ಮೋಟರ್ ಗಾಡಿಗೂ ಸ್ಪಿಯರಿಂಗ್ ವ್ಹೀಲ್, ಗೇರ್ ಮೊದಲಾದವು ಇರುತ್ತವೆ! ಇವನ್ನು ಆತ್ಮ ವೀಕ್ಷಣೆಯಿಂದ ಅರಿತುಕೊಂಡಲ್ಲಿ ಅದಕ್ಷತೆ, ಕೋಪ, ಅಶಾಂತಿ, ಮೊದಲಾದವು ನೀಗಿ ಬದುಕು ನೆಮ್ಮದಿಯಾಗುತ್ತದೆ. ಭಗವದ್ಗೀತೆ-ಉಪನಿಷತ್ತುಗಳು ನಮ್ಮ ಸ್ವರೂಪವನ್ನು ಬಿಂಬಿಸುವ ನಿಲುವು ಗನ್ನಡಿಗಳು. ಅವುಗಳ ನೆರವು ಪಡೆದು, ನಮಗೆ ದೂರಾದ ಪರಿಸ್ಥಿತಿಯಲ್ಲಿ ಏನೂ ಮಾಡಬೇಕು, ಏನು ಮಾಡಬಾರದು ಎಂದು ಧರ್ಮ ದೃಷ್ಟಿಯಿಂದ ವಸ್ತು ನಿಷ್ಠವಾಗಿ ನಿರ್ಣಯಿಸಿಕೊಳ್ಳುವುದೇ ಕೌಶಲ; ಎಂದು ತಮ್ಮ ಪ್ರವಚನ ಮಾಲೆಯಲ್ಲಿ ಸ್ವಾಮೀಜಿ ತಿಳೀಸುತ್ತಾರೆ.
ಘಟನೆ 3
ಮಾನಸಿಕ ಚಡಪಡಿಕೆಗಳು- ಸಮಸ್ಯೆಗಳು ಉದ್ಭವವಾಗುವುದು ಏಕೆ? ಈ ವಿಷಯಗಳು ಉಳಿಸುಕೊಂಡೇ ಬರುವುದು ಏಕೆ? ಈ ಮೂಲಭೂತ ಅನುಮಾನ ಬದುಕಿನಲ್ಲಿ ಪ್ರತಿಯೊಬ್ಬರಲ್ಲೂ ಇರುತ್ತದೆ. ಅಷ್ಟೇ ಅಲ್ಲ. ವೇದಾಂತ ಪುರಾಣಗಳನ್ನು ಕೇಳುತ್ತಿರುವವರಿಗೂ ಈ ಪ್ರಶ್ನೆ ಉದ್ಭವಾಗುತ್ತದೆ. ಇಂತಹ ಹಲವು ಸಮಸ್ಯೆಗಳಿಗೆ ಉತ್ತರ ಸಿಗುವಲ್ಲಿ ಯಶಸ್ಸಿಯಾಗಲೂ ಸುಲಭವಾಗುತ್ತದೆ. ನಾವು ಬೆಳೆಯುತ್ತಾ ಹೋದಂತೆನಮ್ಮ ಮನಸ್ಸಿನ ಪಕ್ವತೆ ಎಷ್ಟರ ಮಟ್ಟಿಗೆ ಬೆಳೆಯುತ್ತದೆ ಎನ್ನುವುದರ ಮೇಲೆ ನಮ್ಮ ಸಮಸ್ಯೆಗಳನ್ನು ನಾವು ಹೇಗೆ ನಿಭಾಯಿಸಬಲ್ಲೇವು ಎಂಬುದು ನಿರ್ಧಾರವಾಗುತ್ತದೆ ಎಂದು ದಯಾನಂದ ಸರ ಸ್ವತೀ ತಮ್ಮ ಅನುಭವದ ಉದಾಹರಣೆಗಳ ಮೂಲಕ ತಿಳಿಸುತ್ತಾ ಹೋಗುತ್ತಾರೆ. ಮನುಷ್ಯ ದಿನ ನಿತ್ಯ ಹೇಗೆಲ್ಲಾ ವರ್ತಿಸುತ್ತಾನೆ. ಅವನಿಗೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರವಾಗಿ ಏನು ಮಾಡಬಹುದು ಎಂಬುದನ್ನು ಓದುಗರಿಗೆ ಈ ಪುಸ್ತಕದ ಮೂಲಕ ತಿಳಿಸುತ್ತಾರೆ ಲೇಖಕರು.
ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.