“ಮತದಾನ ಅರ್ಹ, ಭರವಸೆಯ ನಾಯಕರನ್ನು ಆರಿಸಲು ಏಕೈಕ ಅವಕಾಶ ‘
Team Udayavani, Apr 10, 2019, 6:30 AM IST
ಕುಂಬಳೆ/ಬದಿಯಡ್ಕ: ಮತದಾನ ಜಾಗ್ರತಿ ಯುಂಟುಮಾಡುವಲ್ಲಿ ಮಲೆಯಾಳಂ ಬೀದಿನಾಟಕವೊಂದು ಗಮನ ಸೆಳೆಯಿತು. ಜಿಲ್ಲಾಧಿಕಾರಿ ಪರಿಸರದಲ್ಲಿ ಮಹಿಳೆಯರ ತಂಡವೊಂದು ನಡೆಸಿದ ಬೀದಿನಾಟಕ ಹಲವು ಮಜಲುಗಳಿಂದ ಜನಾಕರ್ಷಣೆ ಪಡೆದಿದೆ. ಜಿಲ್ಲಾ ಕುಟುಂಬಶೀÅ ಮಿಷನ್ ವ್ಯಾಪ್ತಿಯ ರಂಗಶೀÅ ನಾಟಕ ತಂಡದ ಸದಸ್ಯೆಯರು ಈ ನಾಟಕ ಪ್ರಸ್ತುತಿಗೊಳಿಸಿದರು.
ಹ್ಯಾರಿಸ್ ನಡಕ್ಕಾವ್ ಈ ನಾಟಕದ ನಿರ್ದೇಶಕರಾಗಿರುವರು. ಅಜಾನೂರು ಗ್ರಾಮಪಂಚಾಯತ್ ನಿವಾಸಿಗಳಾದ ಕೆ.ಸುಮತಿ, ಟಿ.ಶೋಭಾ, ಕೆ.ವಿ. ಸಿಂಧು, ಕೆ.ಲತಾ, ಎ.ಜಯಶೀÅ, ಕೆ.ವಿ.ಸಿಲ್ನ, ವಿ.ಜಾನಕಿ, ಕೆ.ಬಿಂದು ವಿವಿಧ ಪಾತ್ರಗಳಲ್ಲಿ ಮಿಂಚಿದರು.
ಆದಿವಾಸಿ ಜನಾಂಗವೊಂದರ ಮನೆಯಲ್ಲಿ ನಡೆಯುವ ವಿವಾಹ ಸಂಬಂಧ ನಡೆಯುವ ಚಟುವಟಿಕೆಗಳ ನಡುವೆ ಮತದಾನದ ಕುರಿತು ಜಾಗƒತಿ ಮೂಡಿಸುವ ಸಂದೇಶವನ್ನು ನಾಟಕ ನೀಡುತ್ತದೆ.
ದುಶ್ಚಟಗಳ ವಿರುದ್ಧ, ಅಕ್ರಮ ಮತದಾನ ಇತ್ಯಾದಿಗಳ ವಿರುದ್ಧ ನಾಟಕ ಧ್ವನಿಎತ್ತುತ್ತದೆ. ಮತದಾನ ಹಕ್ಕಿನ ಕುರಿತು ಅರಿವಿಲ್ಲದ ಮಂದಿಗೆ, ಪ್ರಜಾಪ್ರಭುತ್ವ ನೀತಿ, ಮತದಾನದ ಮಹತ್ವ ಇತ್ಯಾದಿ ಕುರಿತು ಶಿಕ್ಷಣ ಪಡೆದಿರುವ ಯುವತಿಯೊಬ್ಬಳು ಮನವರಿಕೆ ಮಾಡಿಕೊಡುತ್ತಾರೆ.
ಜೊತೆಗೆ ಮತಗಟ್ಟೆ ಎಷೇr ದೂರವಿದ್ದರೂ, ಅಲ್ಲಿಗೆ ತೆರಳುವ ರೀತಿ, ನೂತನ ಮತಯಂತ್ರ, ವಿವಿಪಾಟ್ ಇತ್ಯಾದಿಗಳ ಕುರಿತು ನಾಟಕದಲ್ಲಿ ಸಂದೇಶ ನೀಡಲಾಗುತ್ತದೆ. ಗುರುತು ಚೀಟಿ ಇಲ್ಲದವರಿಗೆ ಹೇಗೆ ಮತದಾನ ಮಾಡಬಹುದು ಎಂಬುದನ್ನೂ ಇಲ್ಲಿ ತಿಳಿಸಲಾಗಿದೆ.
ನಾಟಕದ ಕೊನೆಯಲ್ಲಿ ಮತದಾನ ಜಾಗƒತಿಯ ಸಂದೇಶವನ್ನೂ ನೀಡಲಾಗುತ್ತದೆ.
ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು, ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್ ಎಂ. ಸಹಿತ ಅಧಿಕಾರಿಗಳು, ಸಿಬಂದಿ ನಾಟಕವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
104 ವರ್ಷದ ಶತಾಯುಷಿ ನಿಟ್ಟೋನಿಯ ಕರ್ತವ್ಯ ಪ್ರಜ್ಞೆ
ಹಿಂದಿನ ಕಾಲದಲ್ಲಿ ಓಟು ನಮ್ಮ ಹಕ್ಕು ಎಂಬ ಆರಿವಿರಲಿಲ್ಲ . ಮಾತ್ರವಲ್ಲ ಊರಿನ ಯಾರೋ ಒಬ್ಬರು ಹೇಳಿದ ಅಭ್ಯರ್ಥಿಗೆ ಓಟು ಹಾಕಿ ಬರುತ್ತಿದ್ದೆವು. ಅದಕ್ಕಾಗಿ ಮೈಲುಗಟ್ಟಲು ನಡೆಯಬೇಕಾಗಿರುವುದರಿಂದ ಹೆಚ್ಚಿನ ಜನರು ಓಟು ಹಾಕಲು ಹೋಗುತ್ತಿರಲಿಲ್ಲ . ಆದರೆ ಈಗ ಸೌಕರ್ಯ ಜಾಸ್ತಿಯಾಗಿದೆ. ಆದುದರಿಂದ ಎಲ್ಲರೂ ಮತದಾನ ಮಾಡಲೇಬೇಕು.
– ಶತಾಯುಷಿ ನಿಟ್ಟೋನಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.