ಫೇಲ್ ಆದವರಿಗೂ ಭವಿಷ್ಯವಿದೆ
Team Udayavani, Apr 10, 2019, 6:00 AM IST
ಈಗಾಗಲೇ ಹೆಚ್ಚಿನ ಕೋರ್ಸ್‌ಗಳ ಪರೀಕ್ಷೆಗಳು ಪೂರ್ಣಗೊಂಡಿದ್ದು, ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಫಲಿತಾಂಶದ ದಿನ ಕೆಲ ವಿದ್ಯಾರ್ಥಿಗಳು ಖುಷಿ ಪಟ್ಟರೆ ಮತ್ತೂ ಕೆಲವರು ಅನುತ್ತೀರ್ಣಗೊಂಡೆ ಎಂದು ಬೇಸರಪಡಬಹುದು. ಅಂದಹಾಗೆ, ಪರೀಕ್ಷೆಯೊಂದೇ ನಮ್ಮ ಜೀವನದ ಅಂತಿಮ ಘಟ್ಟವಲ್ಲ ಅದಕ್ಕೂ ಮುಖ್ಯವಾಗಿ ಜೀವನದ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬೇಕಾದ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ.
ಪರೀಕ್ಷೆಯಲ್ಲಿ ಸಿಹಿಯೋ, ಕಹಿಯೋ ಸಮಾನವಾಗಿ ಸ್ವೀಕರಿಸುವ ಮನೋಭಾವ ಹೊಂದಿರಬೇಕು. ಉತ್ತೀರ್ಣನಾದರೆ ಖುಷಿಪಟ್ಟು, ಒಂದುವೇಳೆ ಪರೀಕ್ಷೆಯಲ್ಲಿ ಫೇಲ್ ಆದರೆ, ಕುಗ್ಗದೆ, ಛಲದಿಂದ ಮುನ್ನಡೆಯಬೇಕು. ಪರೀಕ್ಷೆಗೆ ಮಿಗಿಲಾಗಿ ಎಲ್ಲವನ್ನೂ ಎದುರಿಸುತ್ತೇನೆ ಎಂಬ ಆತ್ಮಸ್ಥೈರ್ಯವನ್ನು ವಿದ್ಯಾರ್ಥಿಗಳು ಬೆಳೆಸಬೇಕು. ಶೈಕ್ಷಣಿಕ ಪರೀಕ್ಷೆಯಲ್ಲಿ ಪಾಸ್ ಆಗದ ಅನೇಕ ಮಂದಿ ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಪರೀಕ್ಷೆಯಲ್ಲಿ ಫೇಲ್ ಆಗಿದ್ದೇನೆ ಎಂದು ಜೀವ ಕಳೆದುಕೊಳ್ಳುವ ನಿರ್ಧಾರಕ್ಕೆ ಬರಬಾರದು.
ಕಡಿಮೆ ಅಂಕ ಬಂದರೆ ಅಥವಾ ಫೇಲ್ ಆದರೆ ಆ ವಿದ್ಯಾರ್ಥಿಗಳೇನು ಅಸಮರ್ಥರಲ್ಲ. ಧೀರೂಬಾಯಿ ಅಂಬಾನಿ, ಬಿಲ್‌ಗೇಟ್ಸ್ ಮುಂತಾದ ಮಹನೀಯರು ಸೋಲಿನಿಂದಲೇ ಗೆಲುವಿನ ಜೀವನ ಕಟ್ಟಿದವರು. ಇದೇ ರೀತಿ ಪರೀಕ್ಷೆಯಲ್ಲಿ ಫೇಲ್ ಆದ ಅನೇಕರು ಉನ್ನತ ಸ್ಥಾನಕ್ಕೇರಿದ ಉದಾಹರಣೆ ಇದೆ. ಎಸೆಸ್ಸೆಲ್ಸಿ, ಪಿಯುಸಿ ಸಹಿತ ಇನ್ನಿತರ ಪರೀಕ್ಷೆಗಳಲ್ಲಿ ಫೇಲ್ ಆದರೆ, ಮುಂದೆಯೂ ಉತ್ತಮ ಭವಿಷ್ಯವಿದೆ.
ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡರೆ ಹೆತ್ತವರು ಆತಂಕದಿಂದ ಆತನನ್ನು ಬೈಯಲು ಪ್ರಾರಂಭ ಮಾಡುತ್ತಾರೆ. ಇದೇ ಮಕ್ಕಳನ್ನು ಆತ್ಮಹತ್ಯೆಗೆ ಪ್ರಚೋದಿಸು ತ್ತ ದೆ. ಹೆತ್ತವರ ಒತ್ತಡ ತಾಳಲಾರದೆ ಬದುಕು ಅಂತ್ಯಗೊಳಿಸಿದ ಅದೆಷ್ಟೋ ಮಕ್ಕಳಿದ್ದಾರೆ. ಪರೀಕ್ಷೆಯಲ್ಲಿ ಅಂಕ ಗಳಿಸುವುದಕ್ಕಷ್ಟೇ ಮಕ್ಕಳನ್ನು ಪಡೆದಿದ್ದೇವೆ ಎಂಬ ಯೋಚನೆಯಿಂದ ಮೊದಲು ಹೆತ್ತ ವರು ಹೊರಬರಬೇಕು.
ಹೆತ್ತವರ ಪಾತ್ರ ಮಹತ್ವದ್ದು
ಮಕ್ಕಳು ಉತ್ತಮ ಅಂಕ ಗಳಿಸಿ ಎತ್ತರದ ಸ್ಥಾನ ಏರಬೇಕು ಎಂಬ ಕನಸು ಸಾಮಾನ್ಯವಾಗಿ ಎಲ್ಲ ಹೆತ್ತವಲ್ಲಿಯೂ ಇರುತ್ತದೆ. ಹಾಗೆಂದು ಮಕ್ಕಳು ಫೇಲ್ ಆಗಿದ್ದಾರೆ ಎಂದು ನಿರಾಶೆಗೊಳ್ಳದೆ, ತನ್ನ ಆಕೋಶ್ರವನ್ನು ಮಕ್ಕಳ ಎದುರು ಹೊರಹಾಕಬಾರದು. ಮಕ್ಕಳಿಗೆ ಸಾಂತ್ವನ ಹೇಳಲು ಮುಂದಾಗಬೇಕು. ಮುಂದೆ ತಿದ್ದಿಕೋ ಎಂದು ಮಕ್ಕಳಿಗೆ ಆಧಾರವಾಗಿ ನಿಲ್ಲಬೇಕು. ಅವರಿವರ ಜತೆ ಹೋಲಿಕೆ ಮಾಡಿ ಹೀಯಾಳಿಸುವುದು ಸರಿಯಲ್ಲ.
ಅಲ್ಪಾವಧಿ ಕೋರ್ಸ್ ಸೇರಿ
ಉದಾಹರಣೆಗೆ ಪಿಯುಸಿಯಲ್ಲಿ ಫೇಲ್ ಆದರೆ, ಸುಮ್ಮನೆ ಕೂರದೆ, ಒಂದು ವರ್ಷ ಕಾಲ ಕಂಪ್ಯೂಟರ್ ಕೋರ್ಸ್, ಮೊಬೈಲ್ ಟೆಕ್ನೀಶಿಯನ್, ಎ.ಸಿ. ರಿಪೇರಿ ಕೋರ್ಸ್ ಸಹಿತ ಮತ್ತಿತರ ಅಲ್ಪಾವಧಿಯ ಕೋರ್ಸ್‌ಗಳಿವೆ. ಇವುಗಳಿಗೆ ಸೇರಿ, ಮುಂದಿನ ವರ್ಷ ಪರೀಕ್ಷೆ ಬರೆಯಲು ಅವಕಾಶವಿದೆ. ಇನ್ನು, ಎಸೆಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡರೆ, ಟ್ಯುಟೋರಿಯಲ್ ಮುಖೇನ ಕಲಿತು ಪಾಸ್ ಆಗಬಹುದು.
ಪ್ರಥಮ ಪಿಯುಸಿಯಲ್ಲಿ ಫೇಲ್ ಆದರೂ ಐಟಿಐ ಕೋರ್ಸ್ ಮಾಡಬಹುದು. ಇದರ ಮುಖೇನ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ. ಐಟಿಐ ಕಲಿತುಕೊಂಡೇ ಪರೀಕ್ಷೆ ಬರೆದು ಪಾಸ್ ಆಗಿರುವವ ಅನೇಕ ಉದಾಹರಣೆಗಳಿವೆ. ಇನ್ನು, ಸಣ್ಣ ಮಟ್ಟಿನ ಉದ್ಯಮದತ್ತಲೂ ಮುಖ ಮಾಡಲು ಅವಕಾಶವಿದೆ.
ಬಿಲ್‌ಗೇಟ್ಸ್ ಕೂಡ ಫೇಲ್ ಆಗಿದ್ದ
ಪರೀಕ್ಷೆಯಲ್ಲಿ ಫೇಲ್ ಆದವರು ಬಿಲ್‌ಗೇಟ್ಸ್ ಅವರನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು. ಬಿಲ್‌ಗೇಟ್ಸ್ ಅವರು ಕೂಡ ಪರೀಕ್ಷೆಯಲ್ಲಿ ಸಾಲು ಸಾಲು ಫೇಲ್ ಆಗಿದ್ದರು. ಅವರ ಜತೆಗಿದ್ದ ಸ್ನೇಹಿತರು ಉತ್ತೀರ್ಣರಾಗಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದರು. ಆದರೆ ಬಿಲ್‌ಗೇಟ್ಸ್ ಸುಮ್ಮನೆ ಕೂರದೆ ಸಾಫ್ಟ್ವೇರ್ ಕಂಪೆನಿ ಕಟ್ಟಿದರು. ಸಾಫ್ಟ್ವೇರ್ ಎಂಜಿನಿಯರ್‌ಗಳು ಬಿಲ್‌ಗೇಟ್ಸ್ ಅವರ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡುವಂತಾಯಿತು.
ನವೀನ್ ಭಟ್, ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.