ಕಟ್ಟಡ ಕಾರ್ಮಿಕರ ಪರಿಹಾರಕ್ಕೆ ಸಂಹಿತೆ ಅಡ್ಡಿ
Team Udayavani, Apr 10, 2019, 3:00 AM IST
ಬೆಂಗಳೂರು: ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ನಿರ್ಮಾಣ ಹಂತದಲ್ಲಿದ್ದ ಪಾರ್ಕಿಂಗ್ ಕಟ್ಟಡದ ಚಾವಣಿ ಕುಸಿದು ಗಾಯಗೊಂಡಿದ್ದ ಬಹುತೇಕ ಕಾರ್ಮಿಕರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಪಾರ್ಕಿಂಗ್ ನಿಲ್ದಾಣಕ್ಕಾಗಿ ನಿರ್ಮಿಸಲಾಗುತ್ತಿದ್ದ ಕಟ್ಟಡದ ಎರಡನೇ ಮಹಡಿಗೆ ಕಾಂಕ್ರಿಟ್ ಹಾಕುವ ಕೆಲಸ ನಡೆಯುವಾಗ ಸೆಂಟ್ರಿಂಗ್ ಸಡಿಲಗೊಂಡಿದ್ದರಿಂದ, ಕಟ್ಟಡ ಚಾವಣಿ ಕುಸಿದಿತ್ತು.
ಈ ಅವಘಡದಲ್ಲಿ ಬಿಹಾರ ಮೂಲದ ರಾಕೇಶ್ (21) ಮತ್ತು ರಾಹುಲ್ (18) ಎಂಬ ಕಾರ್ಮಿಕರಿಬ್ಬರು ಸಾವಿಗೀಡಾಗಿದ್ದರು. 12 ಮಂದಿ ಗಾಯಗೊಂಡಿದ್ದರು ಅವರನ್ನು ನಂದಿನಿ ಲೇಔಟ್‌ನ ಕಣ್ವ ಶ್ರೀಸಾಯಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ 9 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ದುರಂತದಲ್ಲಿ ಗಾಯಗೊಂಡವರಿಗೆ ಸಿಕ್ಕಿದ್ದು ಪುಡಿಗಾಸಷ್ಟೇ: ದುರಂತದಲ್ಲಿ ಮೃತಪಟ್ಟ ಇಬ್ಬರೂ ಸೇರಿದಂತೆ ಆಸ್ಪತ್ರೆಯಿಂದ ಬಿಡುಗಡೆಯಾದ 9 ಮಂದಿಗೆ ಎಷ್ಟು ಪರಿಹಾರ ಸಿಕ್ಕಿದೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. ಎಪಿಎಂಸಿಯಲ್ಲಿ ಗಾಯಗೊಂಡ ಕಾರ್ಮಿಕರೊಬ್ಬರಿಗೆ ಸ್ಟಾರ್ ಕನ್ಸಸ್ಟ್ರಕ್ಷನ್ ಕಂಪನಿ 20 ಸಾವಿರ ರೂ ನೀಡಿದೆ.
ಇನ್ನೂ ಹಲವರಿಗೆ ಯಾವುದೇ ಸಹಾಯಧನ ಸಿಕ್ಕಿಲ್ಲ ಎನ್ನಲಾಗಿದೆ. ಗಾಯಗೊಂಡ ಕಾರ್ಮಿಕರಲ್ಲಿ ಬಹುತೇಕರು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿಲ್ಲ.
ನೋಂದಾಯಿಸಿಕೊಂಡಿದ್ದರೆ, ಇವರಿಗೆ 12ಕ್ಕೂ ಹೆಚ್ಚು ಸೌಲಭ್ಯಗಳು ಸಿಗುತ್ತಿತ್ತು. ಅಪಘಾತ ಸಂಭವಿಸಿದ ಸಮಯದಲ್ಲಿ ಸಿಗುವ ಸಹಾಯಧನವೂ ಸಿಗುತ್ತಿತ್ತು. ಆದರೆ, ಅದ್ಯಾವುದೂ ಈಗ ಇಲ್ಲವಾಗಿದೆ. ಹಣ ನೀಡುವುದಾಗಿ ಹಲವರು ಭರವಸೆ ನೀಡಿದ್ದರಾದರೂ ಅದು ಕಾರ್ಯರೂಪಕ್ಕೆ ಬರುವುದರ ಬಗ್ಗೆ ಖಾತರಿ ಇಲ್ಲ.
ನೀತಿ ಸಂಹಿತೆಯಿಂದ ಹಿನ್ನಡೆ: ಚುನಾವಣಾ ನೀತಿಸಹಿಂತತೆ ಜಾರಿಯಲ್ಲಿ ಇರುವುದರಿಂದ ಕಟ್ಟಡ ಕಾರ್ಮಿಕರ ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟರೆ ಅಥವಾ ಗಾಯಗೊಂಡ ಸಂದರ್ಭದಲ್ಲಿ ಅವರಿಗೆ ಸಿಗಬೇಕಾದ ಪರಿಹಾರ ಸಹ ಸೂಕ್ತ ಸಮಯದಲ್ಲಿ ಸಿಗುತ್ತಿಲ್ಲ.
ಅಪಘಾತ ನೀತಿಸಹಿಂತತೆ ಅಡಿ ಬರುವುದಿಲ್ಲ. ನೋಂದಣಿಯನ್ನು ಮುಂದುವರಿಸಿ, ಪರಿಹಾರನಿಧಿಯನ್ನು ಬೇಗ ನೀಡಬೇಕು ಎಂದು ಹಲವು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿದ್ದು, ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
“ಚುನಾವಣಾ ಸಮಯದಲ್ಲಿ ನೋಂದಣಿಯನ್ನು ನಿಲ್ಲಿಸಲು ಮುಖ್ಯ ಕಾರಣ ಕೆಲವು ರಾಜಕಾರಣಿಗಳು ತಮ್ಮ ಪಕ್ಷದ ಕಾರ್ಯಕರ್ತರನ್ನು ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ನೋಂದಣಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಇಂತಹ ಪ್ರಕರಣಗಳು ಈ ಹಿಂದೆ ನಡೆದಿದೆ’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಇಲಾಖೆಯ ಅಧಿಕಾರಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.