ಕಟೀಲು ದೇವಸ್ಥಾನದಲ್ಲಿ ಘನತ್ಯಾಜ್ಯ ಘಟಕ ಕಾರ್ಯಾರಂಭ
Team Udayavani, Apr 10, 2019, 6:00 AM IST
ಊಟಕ್ಕೆ ಬಳಸಿದ ಬಾಳೆ ಎಲೆಗಳಿಂದ ಕಂಪೋಸ್ಟ್ ಗೊಬ್ಬರ ತಯಾರಿಸುತ್ತಿರುವುದು.
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಘನ ತ್ಯಾಜ್ಯ ಘಟಕ ಕಾರ್ಯಾರಂಭವಾಗಿದ್ದು, ತ್ಯಾಜ್ಯ ವಿಲೇವಾರಿಗೆ ಸಹಕಾರಿಯಾಗಲಿದೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಹಾಗೂ ಎಂಆರ್ ಪಿಎಲ್ ಸಂಸ್ಥೆಯ ನೀಡಿದ ಯಂತ್ರದಲ್ಲಿ ತ್ಯಾಜ್ಯ ಸಂಸ್ಕರಣೆ ನಡೆಯುತ್ತಿದ್ದು, ದೇವಸ್ಥಾನದ ಶೆಡ್‌ನಲ್ಲಿ ಕಂಪೋಸ್ಟ್ ಗೊಬ್ಬರ ತಯಾರಿ ಆರಂಭವಾಗಿದ್ದು, ಇದಕ್ಕೆ ನಾಲ್ಕು ಮಂದಿ ಸಿಬಂದಿ ನೇಮಿಸಲಾಗಿದೆ.
ಕಟೀಲು ದೇವಸ್ಥಾನದಲ್ಲಿ ದಿನಂಪ್ರತಿ ಆರರಿಂದ ಎಂಟು ಸಾವಿರದಷ್ಟು ಯಾತ್ರಾರ್ಥಿಗಳು, ಎರಡೂವರೆ ಸಾವಿರದಷ್ಟು ವಿದ್ಯಾರ್ಥಿಗಳು ಅನ್ನಪ್ರಸಾದ ಸ್ವೀಕರಿಸುತ್ತಾರೆ. ಮಕ್ಕಳ ಊಟಕ್ಕೆ ಬಟ್ಟಲಿನ ವ್ಯವಸ್ಥೆ ಇದೆ. ಆದರೆ ಭಕ್ತರ ಊಟಕ್ಕೆ ಬಾಳೆ ಎಲೆಯನ್ನು ಬಳಸಲಾಗುತ್ತಿದೆ. ಇದರ ವಿಲೇವಾರಿ ದೊಡ್ಡ ಸಮಸ್ಯೆಯಾಗಿತ್ತು. ಈಗ ಘನ ತ್ಯಾಜ್ಯ ಘಟಕ ಆರಂಭಗೊಂಡಿದ್ದು, ಸದ್ಯ ಊಟಕ್ಕೆ ಬಳಸಿದ ಬಾಳೆ ಎಲೆಗಳನ್ನು ಕಂಪೋಸ್ಟ್ ಗೊಬ್ಬರವನ್ನಾಗಿಸುವ ಕೆಲಸ ನಡೆಯುತ್ತಿದೆ. ಇದು ಒಟ್ಟು ಐದು ದಿನಗಳ ಕ್ರಿಯೆ. ಇದಲ್ಲದೆ ಗೋಶಾಲೆಯಲ್ಲೂ ಸಾಕಷ್ಟು ಸೆಗಣಿ ಸಿಗುತ್ತಿದ್ದು, ಅಗತ್ಯ ಇರುವವರಿಗೆ ಮಾರಾಟ ಮಾಡಲಾಗುತ್ತಿದೆ. ಹೊಸ ಘನತ್ಯಾಜ್ಯ ಘಟಕದಲ್ಲಿ ಉತ್ಪಾದನೆ ಆಗುತ್ತಿರುವ ಗೊಬ್ಬರವನ್ನು ಮಾರಾಟ ಮಾಡುವ ಯೋಜನೆ ಇದ್ದು, ಬೆಲೆ ನಿಗದಿ ಆಗಿಲ್ಲ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.
ಶೀಘ್ರದಲ್ಲಿ ದ್ರವ ತ್ಯಾಜ್ಯ ಎರಡನೇ ಘಟಕ
ಈಗಾಗಲೇ 45ಲಕ್ಷ ರೂ. ವೆಚ್ಚದ ದ್ರವ ತ್ಯಾಜ್ಯ ಘಟಕ ಎರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಈಗ ಸುಮಾರು 48ಲಕ್ಷ ರೂ. ಗಳ ಎರಡನೇ ಹಂತದ ಘಟಕ ಆರಂಭವಾಗಲಿದೆ. ವಸತಿ ಗೃಹ, ಅನ್ನಛತ್ರಗಳ ದ್ರವ ತ್ಯಾಜ್ಯ ವಿಲೇವಾರಿಗೆ ಕಟೀಲು ದೇವಸ್ಥಾನ ತಿಂಗಳೊಂದಕ್ಕೆ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ವ್ಯಯಿಸುತ್ತಿದೆ. ಘಟಕ ಆರಂಭವಾದರೆ ಈ ಖರ್ಚು ಉಳಿತಾಯವಾಗಲಿದೆ. ಜಿಲ್ಲಾಧಿಕಾರಿಗಳ ಅನುಮೋದನೆಗೇ ಒಂದೂವರೆ ವರ್ಷ ಕಾಯಬೇಕಾಗಿರುವುದರಿಂದ ಎರಡನೇ ಹಂತದ ಯೋಜನೆ ನಿಧಾನವಾಗಿದೆ. ಮೊದಲ ಘಟಕದ ಸಂಸ್ಕರಿತ ನೀರನ್ನು ಪಕ್ಕದ ತೋಟಕ್ಕೆ, ಕುದುರು ಹಾಗೂ ದೇವಸ್ಥಾನದ ಹೂತೋಟಗಳಿಗೆ ಬಳಸಲಾಗುತ್ತಿದೆ.
ಸೀಯಾಳದಿಂದಲೂ ಗೊಬ್ಬರ, ಕಟ್ಟಿಗೆ , ಕೀಟನಾಶಕ ತಯಾರಿ ಕಟೀಲು ದೇವಸ್ಥಾನದಲ್ಲಿ ದಿನಂಪ್ರತಿ ಸರಾಸರಿ ಐನೂರರಷ್ಟು ಸೀಯಾಳಾಭಿಷೇಕ ನಡೆಯುತ್ತಿದ್ದು, ಈ ಸಂಖ್ಯೆ ಶುಕ್ರವಾರ, ರವಿವಾರಗಳಲ್ಲಿ ಎರಡರಿಂದ ಮೂರು ಸಾವಿರ ದಾಟುತ್ತದೆ. ಸೀಯಾಳದ ಚಿಪ್ಪುಗಳ ವಿಲೇಯೂ ಒಂದು ಸಮಸ್ಯೆಯಾಗಿದೆ. ಇದೀಗ ಸೀಯಾಳಚಿಪ್ಪನ್ನು ಗೊಬ್ಬರವನ್ನಾಗಿಸುವ ಘಟಕ ಸ್ಥಾಪನೆ ಮಾಡುವ ಯೋಚನೆಯಿದ್ದು, ಇದಕ್ಕೆ ಪೂರಕವಾಗಿ ಮುಂಬಯಿಯ ಕಂಪೆನಿಯ ಜತೆಗೆ ಮಾತುಕತೆ ನಡೆಸಿದದು, ಮುಂದಿನ ನಾಲ್ಕು ತಿಂಗಳಿನಲ್ಲಿ ಘಟಕ ಸ್ಥಾಪನೆಯಾಗಲಿದೆ. ಇದರಿಂದ ಸೀಯಾಳದ ಚಿಪ್ಪನ್ನು ನಾಲ್ಕು ಹಂತದಲ್ಲಿ ವಿಲೇವಾರಿ ಮಾಡಲಾಗುವುದು. ಸೀಯಾಳದ ಚಿಪ್ಪನ್ನು ಯಂತ್ರಕ್ಕೆ ನೀಡಿ ಅದರ ನೀರನ್ನು ಕ್ರಿಮಿನಾಶಕಕ್ಕೆ ಉಪಯೋಗಿಸಲಾಗುವುದು. ಉಳಿದ ಭಾಗವನ್ನು ಕಟ್ಟಿಗೆ ಹಾಗೂ ಹುಡಿಯನ್ನು ಪೌಡರ್ ಮಾಡಲಾಗುವುದು. ಗೊಬ್ಬರದ ಹುಡಿ ತಯಾರಿಸಲು ಬಳಸಲಾಗುವುದು ಈ ರೀತಿಯ ಯಂತ್ರ ಬರಲಿದೆ.
ಮಂಗಳೂರು ನಗರದ ಎಲ್ಲ ಸೀಯಾಳದ ಚಿಪ್ಪು ದೊರತರೆ ದೊಡ್ಡ ಮಟ್ಟದಲ್ಲಿ ಮಾಡುವ ಚಿಂತನೆ ಇದೆ ದಿನಕ್ಕೆ ಕನಿಷ್ಠ ನಾಲ್ಕು ಲೋಡು ಬೇಕಾಗಬಹುದು ಎಂದು ಕಂಪೆನಿಯ ಮೂಲ ತಿಳಿಸಿದೆ.
ಅನ್ನಪ್ರಸಾದದ ಎಲೆಯ ಹಾಗೂ ಹಸಿ ಕಸದ ತಾಜ್ಯದಿಂದ ಗೊಬ್ಬರ ಮಾಡಲಾಗುವುದು ಈ ಬಗ್ಗೆ ನಾಲ್ಕು ಮಂದಿ ಕೆಲಸದಲ್ಲಿ ನಿರತರಾಗಿದ್ದಾರೆ, ಇಲ್ಲಿ ತಯಾರಿಸುವ ಗೊಬ್ಬರವನ್ನು ಮಾರಾಟ ಮಾಡುವ ಚಿಂತನೆ ಇದೆ.
ಎಲೆ ಬದಲು ಬಟ್ಟಲು
ಕಟೀಲು ದೇವಸ್ಥಾನದಲ್ಲಿ ಈಗಾಗಲೇ ಮಕ್ಕಳ ಊಟಕ್ಕೆ ಬಟ್ಟಲುಗಳನ್ನು ಬಳಸಲಾಗುತ್ತಿದ್ದು, ಭಕ್ತರ ಊಟಕ್ಕೂ ಬಟ್ಟಲನ್ನು ಬಳಸುವ ಯೋಜನೆ ಮಾಡಲಾಗಿದೆ. ಈಗಾಗಲೇ ಧರ್ಮಸ್ಥಳ, ಉಡುಪಿ, ಶೃಂಗೇರಿ ಮುಂತಾದ ದೇವಸ್ಥಾನಗಳಲ್ಲಿ ಬಟ್ಟಲುಗಳ ವ್ಯವಸ್ಥೆ ಇದೆ. ಕಟೀಲಿನಲ್ಲಿ ಬೆಳಗ್ಗೆ ಗಂಜಿ ಊಟ, ಮಧ್ಯಾಹ್ನ ಹಾಗೂ ರಾತ್ರಿಯೂ ಅನ್ನ ಪ್ರಸಾದ ಇದೆ. ಬಟ್ಟಲು ತೊಳೆಯುವ 15ಲಕ್ಷ ರೂ. ವೆಚ್ಚದ ಯಂತ್ರಕ್ಕೆ ಅನುಮೋದನೆ ಪಡೆಯಲು ತಿಂಗಳುಗಳ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿರುವ ಕಡತ ವಿಲೇವಾರಿಗೆ ಮೀನ ಮೇಷ ಎಣಿಸುತ್ತಿರುವುದರಿಂದ ಈ ಯೋಜನೆ ತಡವಾಗಿದೆ. ಬಟ್ಟಲುಗಳು ಆರಂಭವಾದರೆ ಬಾಳೆ ಎಲೆಗಳ ಬಳಕೆ ಕಡಿಮೆಯಾಗಲಿದೆ. ಬಳಿಕ ಘನ ತ್ಯಾಜ್ಯ ಘಟಕದಲ್ಲಿ ರಬ್ಬರು, ಪ್ಲಾಸ್ಟಿಕ್ ಹೊರತು ಪಡಿಸಿದ ತ್ಯಾಜ್ಯಗಳನ್ನು ಬಳಸಿ ಗೊಬ್ಬರ ತಯಾರಿಸಲಾಗುವುದು.
ಸ್ವಚ್ಛ ಕಟೀಲು ಯೋಜನೆಗೆ ಪೂರಕ
ಕಟೀಲು ದೇವಸ್ಥಾನದಲ್ಲಿ ಅನ್ನ ಪ್ರಸಾದ ಸೇವೆಗೆ ಬಾಳೆ ಎಲೆ ಬದಲು ತಟ್ಟೆ, ಬಟ್ಟಲು ಬರಲಿದ್ದು , ಇದರಿಂದ ತಾಜ್ಯ ವಿಲೇವಾರಿ ಘಟಕಕ್ಕೆ ಕೆಲಸದ ಕೊರತೆ ನೀಗಿಸುವ ನಿಟ್ಟಿನಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಟೀಲು, ರಥಬೀದಿ ಹಾಗೂ ಪರಿಸರದ ಎಲ್ಲ ಕಸ ತ್ಯಾಜ್ಯ ತಂದು ಪ್ಲಾಸ್ಟಿಕ್ ಕಸವನ್ನು ಈ ಕೇಂದ್ರದಲ್ಲಿ ವಿಲೇವಾರಿ ಮಾಡಲಾಗುವುದು. ಇದರಿಂದ ಸ್ವತ್ಛಕಟೀಲು ಯೋಜನೆಗೆ ಪೂರಕವಾಗಲಿದೆ.
ಹರಿನಾರಾಯಣದಾಸ ಆಸ್ರಣ್ಣ, ಅರ್ಚಕರು ಶ್ರೀ ಕ್ಷೇತ್ರ ಕಟೀಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.