ಚುನಾವಣೆ: ಈ ಮೂವರ ಮೇಲೆ ಕರ್ನಾಟಕದ ಕಣ್ಣು


ಅರಕೆರೆ ಜಯರಾಮ್‌, Apr 10, 2019, 6:00 AM IST

g-24

ಈ ಸಲದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕಣಕ್ಕಿಳಿದಿರುವ ಮೂವರು ಯುವ ಅಭ್ಯರ್ಥಿಗಳ ಮೇಲೆ ಇಡೀ ಕರ್ನಾಟಕದ ಜನರು ಕಣ್ಣಿಟ್ಟಿದ್ದಾರೆ. ಇವರಲ್ಲೊಬ್ಬರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯ. ಇದೀಗ ಈ ಯುವಕನ ಮೇಲೆ ಸಾಮಾಜಿಕ ಜಾಲ ತಾಣಗಳು ಟೀಕೆಗಳ ಸುರಿಮಳೆಗರೆಯುತ್ತಿವೆ. ಕರ್ನಾಟಕದ ಇನ್ನಿಬ್ಬರು ಯುವ ಅಭ್ಯರ್ಥಿಗಳೆಂದರೆ ದೇವೇಗೌಡರ ವಂಶದ ಕುಡಿಗಳು. ಒಬ್ಬರು ಹಾಸನದಿಂದ ಸ್ಪರ್ಧಿಸುತ್ತಿರುವ ಪ್ರಜ್ವಲ್‌ ರೇವಣ್ಣ, ಇನ್ನೊಬ್ಬರು ಮಂಡ್ಯದಲ್ಲಿ ಆಯ್ಕೆ ಬಯಸುತ್ತಿರುವ ನಿಖೀಲ್‌ ಕುಮಾರಸ್ವಾಮಿ. ಈ ಇಬ್ಬರೂ ಸೋದರ ಸಂಬಂಧಿಗಳಿಗೂ ಕಾಂಗ್ರೆಸ್‌ನಿಂದ (ವಿಶೇಷವಾಗಿ ಮಂಡ್ಯದಲ್ಲಿ) ಅರೆಮನಸ್ಸಿನ ಬೆಂಬಲವೂ ದೊರೆಯುತ್ತಿದೆ ಎನ್ನಲಾಗಿದೆ.

ತೇಜಸ್ವಿ ಸೂರ್ಯ ಹಾಗೂ ಇಬ್ಬರೂ ಜೆಡಿಎಸ್‌ ಕಸಿನ್‌ಗಳಿಗೆ ಇರುವ ಸಾಮ್ಯ ಅವರ ವಯಸ್ಸಿಗಷ್ಟೇ ಸೀಮಿತವಾಗಿದೆಯೇ ಹೊರತು ಅದರಿಂದಾಚೆಗೆ ಇಲ್ಲ. ಮೂವರೂ 20ರ ವಯೋ ಮಾನದ ಉತ್ತರಾರ್ಧದಲ್ಲಿರುವವರು. ಮೂವರು ಅನೇಕ ರೀತಿ ಗಳಲ್ಲಿ ಭಿನ್ನರು. ಜೆಡಿಎಸ್‌ ಅಭ್ಯರ್ಥಿಗಳಿಬ್ಬರ ರಕ್ತದಲ್ಲೇ ರಾಜಕೀಯ ವಿದೆ; ಇಬ್ಬರೂ ಬೆಳ್ಳಿ ಚಮಚವನ್ನು ಬಾಯಲ್ಲಿಟ್ಟು ಕೊಂಡೇ ಹುಟ್ಟಿದವರು. ಅವರೀಗ ಉಮೇದ್ವಾರರಾಗಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಾಗಲು ಆಯ್ಕೆ ಹೊಂದಲು ಇಬ್ಬರಿಗೂ ಹೇಳಿಕೊಳ್ಳುವಂಥ ವಿರೋಧ ಎದುರಾಗಲಿಲ್ಲ ಎನ್ನಬಹುದು. ಇವರನ್ನು ರಾಜಕೀಯ ವಾತಾವರಣದಲ್ಲಿ ಬೆಳೆಸಿದ ಅಜ್ಜ ಎಚ್‌. ಡಿ.ದೇವೇಗೌಡರು ಲೋಕಸಭಾ ಚುನಾವಣೆಗೆ ಇವರೇ ಅರ್ಹ ಅಭ್ಯರ್ಥಿಗಳೆಂದು ಖುದ್ದಾಗಿ ಆಯ್ಕೆ ಮಾಡಿದ್ದಾರೆ. ದೇವೇಗೌಡರು ರಾಜಕೀಯ ದೂರದೃಷ್ಟಿಯುಳ್ಳವರೆಂದು, ಅವರು ಸದಾ “ಮುಂದೇನು’ ಎಂಬುದನ್ನೇ ಆಲೋಚಿಸುತ್ತಿರು ವವರೆಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವೇ ಇಲ್ಲ. ತಮ್ಮ ಮೊಮ್ಮಕ್ಕಳನ್ನೇ ಅವರು ಆಯ್ಕೆ ಮಾಡಲು ಕಾರಣ ಜೆಡಿಎಸ್‌ನಲ್ಲಿ ಸದ್ಯ ಪ್ರತಿಭೆಗಳ ದಿವಾಳಿತನ ಎದ್ದು ತೋರುತ್ತಿರುವುದಾಗಿ ರ ಬಹುದು ಅಥವಾ ಗೌಡ ಕುಟುಂಬದ ಹೊರಗಡೆಯಲ್ಲಿ ಸೂಕ್ತ ನಾಯಕರೊಬ್ಬರು ದೊರೆಯುವ ಸಾಧ್ಯತೆ ಇಲ್ಲ ಎನ್ನುವುದಾಗಿರಬಹುದು. ಈ ಕಾರಣಕ್ಕಾಗಿಯೇ ಅವರ ಪಕ್ಷ ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್‌ನ ಕೈಗೆ ಹಾಕಿತ್ತು; ಉತ್ತರ ಕನ್ನಡದಂಥ ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಅದರ ಪಾಲಿಗೆ ತೊಡಕಿನ ವಿಷಯವಾಗಿ ಮಾರ್ಪಟ್ಟಿತು. ಎಂ.ಸಿ. ನಾಣಯ್ಯ, ಅಷ್ಟೇಕೆ ಪಿ. ಜಿ. ಆರ್‌. ಸಿಂಧ್ಯಾರಂಥ ಅರ್ಹರನ್ನು ಮೂಲೆಗುಂಪು ಮಾಡಲಾಗಿದೆ. ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಲು ಎಂ.ಸಿ. ನಾಣಯ್ಯ ಎಲ್ಲ ರೀತಿಯಲ್ಲೂ ಅರ್ಹರಾಗಿದ್ದರು. ಜೆಡಿಎಸ್‌ನಲ್ಲಿ ಈಗ ಎರಡನೆಯ ಹಾಗೂ ಮೂರನೆಯ ಶ್ರೇಣಿಯ ನಾಯಕರೇ ತುಂಬಿದ್ದಾರೆ; ನಾಯಕತ್ವಕ್ಕೆ ಯಾವುದೇ ರೀತಿಯ ಸವಾಲಾಗಿ ನಿಲ್ಲಲಾರದವರು ಇವರು.

ಪ್ರಜ್ವಲ್‌, ನಿಖೀಲ್‌ಗೆ ಹೋಲಿಸಿದರೆ ತೇಜಸ್ವಿ ಸೂರ್ಯರಿಗೆ ಯಾವುದೇ ತೆರನ ರಾಜಕೀಯ ಪೋಷಕತ್ವವೆನ್ನು ವುದು ಇರಲಿಲ್ಲ. ಬಿಜೆಪಿಯ ಬೇರೆ ಬೇರೆ ವಿಭಾಗಗಳಲ್ಲಿ ದುಡಿದು ಮೇಲಕ್ಕೆ ಬಂದವರು. ವಿದ್ಯಾರ್ಹತೆ, ಪಕ್ಷಕ್ಕೆ ಸಲ್ಲಿಸಿದ ಸೇವೆ ಹಾಗೂ ವೈಯಕ್ತಿಕ ವರ್ಚಸ್ಸು ಮುಂತಾದ ದೃಷ್ಟಿಕೋನಗಳಿಂದ ನೋಡಿದರೆ ವಿವಿಧ ಪಕ್ಷಗಳ ಅಭ್ಯರ್ಥಿ ಗಳಿಗಿಂತಲೂ ಅವರು ಉತ್ತಮ ಅಭ್ಯರ್ಥಿ ಎನ್ನಬೇಕಾಗುತ್ತದೆ. ರಾಜಕಾರಣದಲ್ಲಿ ಅವರು ಹೆಚ್ಚು ಪರಿಚಿತರಲ್ಲ ಎನ್ನುವವರು ದಿ| ಎಚ್‌.ಎನ್‌. ಅನಂತಕುಮಾರ್‌ 1996ರಲ್ಲಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದಾಗ ಇದೇ ರೀತಿ ಅಪರಿಚಿತರೇ ಆಗಿದ್ದರೆಂಬುದನ್ನು ನೆನಪಿಸಿಕೊಳ್ಳಬೇಕು. ರಾಜ್ಯದ ಅನೇಕ ಬಿಜೆಪಿ ನಾಯಕರಂತೆಯೇ ಅನಂತಕುಮಾರ್‌ ತಮ್ಮ ಸ್ನೇಹಪೂರ್ಣ ನಡವಳಿಕೆಯಿಂದಲೇ ಎಲ್ಲರ ಮನ ಗೆದ್ದವರು; ಈ ಕಾರಣಕ್ಕಾಗಿಯೇ ವಿಶೇಷವಾಗಿ ಬೆಂಗಳೂರು ಕೇಂದ್ರಿತ ಪತ್ರಕರ್ತರಿಂದ ಒಬ್ಬ ನಾಯಕನಾಗಿ ಬಿಂಬಿತರಾದವರು. ಬಿಜೆಪಿಯ ಅಭ್ಯರ್ಥಿಯಾಗಿ ಆಯ್ಕೆಯಾಗುವಲ್ಲಿ ಸಂದರ್ಭ – ಸನ್ನಿವೇಶಗಳು ಅವರ ನೆರವಿಗೆ ಬಂದವು. 1991ರಲ್ಲಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಬೆಂಗಳೂರು ವಿವಿಯ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ವೆಂಕಟಗಿರಿ ಗೌಡರು ಸಂಸತ್ತಿನಲ್ಲಿ ಬಿಜೆಪಿ ನಾಯಕರ ವಿರುದ್ಧ ತಿರುಗಿಬಿದ್ದಿದ್ದರು. ಅವರು ಯಾವ ಶಿಸ್ತು ಕ್ರಮಕ್ಕೂ ತಲೆಬಾಗದ ಒಬ್ಬ ಶಿಕ್ಷಕರಾಗಿದ್ದರು. ಅವರು ಆಗಿನ ಪಿ. ವಿ. ನರಸಿಂಹ ರಾವ್‌ ಸರಕಾರದಲ್ಲಿ ವಿತ್ತ ಸಚಿವರಾಗಿದ್ದ ಡಾ| ಮನಮೋಹನ್‌ ಸಿಂಗ್‌ರನ್ನು ಹೊಗಳುತ್ತಿದ್ದರು. ಅವರನ್ನು ಪಕ್ಷದಿಂದ ಉಚ್ಚಾಟಿಸ ಲಾಯಿತು. ಯುವಕರಾಗಿದ್ದ ಎಚ್‌.ಎನ್‌. ಅನಂತಕುಮಾರ್‌ ಅಭ್ಯರ್ಥಿಯಾಗಿ ಕಾಣಿಸಿಕೊಂಡದ್ದು ಈ ಹಿನ್ನೆಲೆಯಲ್ಲಿ. ಅನಂತ ಕುಮಾರ್‌ ಕೇಂದ್ರ ಸಚಿವರಾಗಿದ್ದುದು ಮಾತ್ರವಲ್ಲ, ರಾಜ್ಯದ ಬಿಜೆಪಿಯ ಕೆಲವು ಹುದ್ದೆಗಳನ್ನೂ ನಿರ್ವಹಿಸಿದ್ದರು; ವಿಧಾನಸಭಾ ಚುನಾವಣೆಯಲ್ಲೂ ಒಮ್ಮೆ ಅಭ್ಯರ್ಥಿಯಾಗಿದ್ದರು.

ಅನಂತಕುಮಾರ್‌ ಪತ್ನಿ ತೇಜಸ್ವಿನಿ ಅನಂತ ಕುಮಾರ್‌ ಅವರನ್ನು ಗಣನೆಗೆ ತೆಗೆದುಕೊಳ್ಳದೆ ತೇಜಸ್ವಿ ಸೂರ್ಯರನ್ನು ಅಭ್ಯರ್ಥಿಯೆಂದು ಆಯ್ಕೆ ಮಾಡಿದವರು ಬಿಜೆಪಿಯ ಕೇಂದ್ರೀಯ ನಾಯಕರು. ಬಹುಶಃ ಸಂಸತ್ತಿನಲ್ಲಿ ನಿರರ್ಗಳ ಹಾಗೂ ಮಾಹಿತಿಪೂರ್ಣ ಮಾತುಗಾರಿಕೆಯ ವ್ಯಕ್ತಿಯೊಬ್ಬ ಬೇಕೆಂಬುದು ಕೇಂದ್ರೀಯ ನಾಯಕರ ಇರಾದೆಯಾಗಿದ್ದಿರ ಬಹುದು. ಇಂಥವರಿಗಾಗಿ ಹುಡುಕಾಟ ನಡೆಸುತ್ತಿದ್ದಿರಬಹುದು. ಕರ್ನಾಟಕ ಬಿಜೆಪಿಗೆ ಸುತ್ತಿಕೊಂಡಿರುವ ಒಂದು ಅಭಿಶಾಪವೆಂದರೆ ಅದರ ಪದಾಧಿಕಾರಿಗಳಲ್ಲಿ ಸಾಮಾನ್ಯ ಮಟ್ಟದ ಪ್ರಾತಿನಿಧ್ಯ ಗುಣದ ವ್ಯಕ್ತಿಗಳಿರುವುದು. 2008-2013ರ ಅವಧಿಯಲ್ಲಿದ್ದ ಬಿಜೆಪಿ ಸಚಿವರ ಗುಣಮಟ್ಟದಲ್ಲಿ ಈ ಲಕ್ಷಣ ಬಿಂಬಿತವಾದುದನ್ನು ಕಂಡಿದ್ದೇವೆ. ಲೋಕಸಭಾ ಚುನಾವಣೆಗಳಲ್ಲಿ ಸಾಮಾನ್ಯವಾಗಿ ಕರ್ನಾಟಕ ಬಿಜೆಪಿ ಅಭ್ಯರ್ಥಿಗಳತ್ತಲೇ ಒಲವು ತೋರುತ್ತಿರುವುದು ಹೌದಾದರೂ , ಈ ಪಕ್ಷದ ಕೆಲ ಸಂಸತ್ಸದಸ್ಯರು ಸದನದಲ್ಲಿ ಜನರ ಆಶೋತ್ತರಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವಲ್ಲಿ ವಿಫ‌ಲರಾದರು. ಈ ಮೂಲಕ ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಸೋತರು ಎಂದೇ ಹೇಳಬೇಕಾಗುತ್ತದೆ. ಉದಾಹರಣೆಗೆ ಡಿ.ವಿ. ಸದಾನಂದ ಗೌಡರನ್ನು ರೈಲ್ವೇ ಖಾತೆ, ಕಾನೂನು ಖಾತೆಗಳಿಂದ ಮುಕ್ತಿಗೊಳಿಸಿ ಅಂಕಿ-ಅಂಶ ಹಾಗೂ ಕಾರ್ಯಕ್ರಮ ಅನುಷ್ಠಾನ ಖಾತೆಗೆ ವರ್ಗಾಯಿಸ ಲಾಯಿತು. ಅನಂತ ಕುಮಾರ್‌ ನಿಧನದ ಬಳಿಕ ಮೋದಿ ಸರಕಾರದಲ್ಲಿ ಉಳಿದುಕೊಂಡ ದಕ್ಷಿಣ ಭಾರತದ ಇಬ್ಬರು ಸದಸ್ಯರಲ್ಲಿ ಒಬ್ಬರೆಂದರೆ ಸದಾನಂದ ಗೌಡರು ಮಾತ್ರ.

ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿನಿ ಅನಂತಕುಮಾರ್‌ ಅಭ್ಯರ್ಥಿತನ ಕುರಿತ ರಾಜ್ಯ ಬಿಜೆಪಿ ಘಟಕದ ಶಿಫಾರಸನ್ನು ಕೇಂದ್ರೀಯ ನಾಯಕತ್ವ ಅವಗಣಿಸಿದ್ದೇಕೆ ಎಂಬ ಪ್ರಶ್ನೆಗೆ ಹಲವಾರು ಕಾರಣಗಳು ಕೇಳಿಬರುತ್ತಿವೆ. ಅವುಗಳಲ್ಲೊಂದು ಈಚಿನ ವರ್ಷಗಳಲ್ಲಿ ಪ್ರಬಲರಾಗಿ ಬೆಳೆದು ನಿಂತಿರುವ ಕೆಲ ಬೆಂಗಳೂರು ಕೇಂದ್ರಿತ ಬಿಜೆಪಿ ನಾಯಕರ ಹಿಡಿತವನ್ನು ಸಡಿಲಗೊಳಿಸಬೇಕೆಂಬುದು ರಾಷ್ಟ್ರೀಯ ನಾಯಕರ ಉದ್ದೇಶವಾಗಿತ್ತು ಎನ್ನುವವರಿದ್ದಾರೆ. ರಾಜ್ಯ ನಾಯಕರ ಪೈಕಿ ಕೆಲವರು ಇತರ ಪಕ್ಷಗಳಿಂದ ಬಿಜೆಪಿಗೆ ವಲಸೆ ಬಂದವರು; ಸ್ವತ್ಛ – ಶುಭ್ರ ವರ್ಚಸ್ಸನ್ನು ಹೊಂದಿಲ್ಲದವರು. ರಾಜ್ಯದ ಲೋಕಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಅನಂತಕುಮಾರ್‌ ಇಂಥವರ ಕೂಟ ಅವಲಂಬಿಸಬೇಕಿತ್ತು ಎಂಬಂಥ ಮಾತುಗಳೂ ಕೇಳಿಬಂದಿವೆ. ಬಿಜೆಪಿಯ ಭದ್ರಕೋಟೆಯೆಂದೇ ಪರಿಗಣಿತವಾಗಿದ್ದ ಜಯನಗರ ಕ್ಷೇತ್ರ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋತಿರುವುದೂ, ಪಕ್ಷದ ದಿಲ್ಲಿ ಮಟ್ಟದ ನಾಯಕರು ತೆಗೆದುಕೊಂಡಿರುವ ನಿರ್ಧಾರಕ್ಕೆ ಇನ್ನೊಂದು ಕಾರಣ ಎನ್ನಲಾಗುತ್ತಿದೆ.

ಈ ನಡುವೆ ಒಂದು ಮಾತನ್ನು ಇಲ್ಲಿ ಹೇಳಲೇಬೇಕು. ತೇಜಸ್ವಿ ಸೂರ್ಯ ಒಂದು “ಪ್ರಮಾದ’ ಎಸಗಿದ್ದಾರೆ. ಅದೆಂದರೆ, ಸುದ್ದಿ ಮಾಧ್ಯಮದ, ಅದರಲ್ಲೂ ವಿಶೇಷವಾಗಿ ಸಾಮಾಜಿಕವಾಗಿ ಸುದ್ದಿ ಜಾಲದ ಧ್ವನಿಯನ್ನು ಅಡಗಿಸಬೇಕೆಂಬ ಉದ್ದೇಶದಿಂದ ಸಿವಿಲ್‌ ನ್ಯಾಯಾಲಯಕ್ಕೆ ದೂರು ಸಲ್ಲಿಸಿರುವುದು ಸಾಮಾಜಿಕ ಜಾಲ ತಾಣಿಗರ ಪೈಕಿ ಕೆಲವರು ತೇಜಸ್ವಿ ಅವರ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದರು. ಗಮನಿಸಬೇಕಾದ ಸಂಗತಿಯೆಂದರೆ ಸಾಮಾಜಿಕ ಜಾಲದಲ್ಲಿ ಹೇಳಿಕೆಗಳೊಂದಿಗೆ ವಿಹರಿಸುವವರಿಗೆ ಸುದ್ದಿ ಮಾಧ್ಯಮಕ್ಕೆ ಅಗತ್ಯವಿರುವ ವೃತ್ತಿಪರತೆಯಾಗಲಿ, ಶಿಸ್ತಾಗಲಿ, ವಿಶೇಷವಾಗಿ ಪತ್ರಿಕಾ ಮಾಧ್ಯಮದ ಮಂದಿಯಲ್ಲಿರುವ ಸತ್ಯದ ಮೇಲಿನ ಗೌರವಭಾವವಾಗಲಿ ಇಲ್ಲ. ಕೋರ್ಟ್‌ ಈಗ ಹಲವು ಮಾಧ್ಯಮ ಸಂಸ್ಥೆ ಸಂಘಟನೆಗಳ ಮೇಲೆ “ನಿರೀಕ್ಷಣಾ ತಡೆ’ (ಪೂರ್ವ ನಿಯಮ ಶಿಸ್ತು ಕ್ರಮ) ಹೇರಿ ತಾತ್ಕಾಲಿಕ ಆದೇಶ ಹೊರಡಿಸಿದೆ, ಅದರ ಮೇಲೆಯೇ ತೀಕ್ಷ್ಣ ಟೀಕೆಗಳು ವ್ಯಕ್ತವಾಗಿವೆ. ಈ ತೀರ್ಪು ನಿರೀಕ್ಷಣಾ ತಡೆ ಕುರಿತ ಸರ್ವೋಚ್ಚ ನ್ಯಾಯಾಲಯದ ಈ ಹಿಂದಿನ ತೀರ್ಪುಗಳ ಸ್ಪಷ್ಟ ಉಲ್ಲಂಘನೆಯೆಂಬುದು ಟೀಕಾಕಾರ ವಾದ. ಸಾರ್ವಜನಿಕ ಜೀವನದಲ್ಲಿ ವ್ಯವಹರಿಸುವ ವ್ಯಕ್ತಿಯೊಬ್ಬ ಮಾಧ್ಯಮ ಕ್ಷೇತ್ರದಲ್ಲಾಗಲಿ ತನ್ನ ರಾಜಕೀಯ ವಿರೋಧಿಗಳ ಕಡೆಯಿಂದಾಗಲಿ ವ್ಯಕ್ತವಾಗುವ ಟೀಕೆಗಳನ್ನು ಅವಗಣಿಸುವಂತಿಲ್ಲ. ಸಾರಾಸಗಟಾಗಿ ಸುದ್ದಿ ಮಾಧ್ಯಮದ ಕತ್ತು ಹಿಸುಕುವ ಕ್ರಮ ನಕಲಿ ಸುದ್ದಿಗಳ ಹಾವಳಿಗೆ ಮದ್ದಾಗಲಾರದು.

1977ರಿಂದ ಈ ವರೆಗಿನ 11 ಲೋಕಸಭಾ ಚುನಾವಣೆಗಳ ಪೈಕಿ 10ರಲ್ಲಿ ಕಾಂಗ್ರೆಸೇತರ (ಬಿಜೆಪಿ ಅಥವಾ ಜನತಾಪಕ್ಷ ಅಥವಾ ಜನತಾದಳ) ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಳಿಸಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಒಂದು “ಸುರಕ್ಷಿತ’ (ಸುಲಭ ವಿಜಯ ಸಾಧ್ಯತೆಯ) ಕ್ಷೇತ್ರವೆಂದು ಯಾವ ಪಕ್ಷವೂ ಪರಿಗಣಿಸುವ ಹಾಗಿಲ್ಲ. ಎಚ್‌.ಎನ್‌. ಅನಂತಕುಮಾರ್‌ ಇಲ್ಲಿ ಗೆಲ್ಲುತ್ತಿದ್ದುದು ಭಾರೀ ಮತಗಳ ಅಂತರಗಳಿಂದಲ್ಲ. ಈ ಬಾರಿ ಇಲ್ಲಿ ಕಾಂಗ್ರೆಸ್‌ ಪ್ರತಿಸ್ಪರ್ಧಿಯಾಗಿರುವ ಬಿ.ಕೆ. ಹರಿಪ್ರಸಾದ್‌ 1999ರಲ್ಲಿ ಅನಂತ ಕುಮಾರ್‌ ವಿರುದ್ಧ ಉತ್ತಮ ನಿರ್ವಹಣೆ ತೋರಿದ್ದರು. ಬ್ರಾಹ್ಮಣ, ಒಕ್ಕಲಿಗ, ಮುಸ್ಲಿಂ, ತಮಿಳು ಮತದಾರರು ಹಾಗೂ ಇತರ ಹಲವು ಸಮುದಾಯಗಳ ಮತದಾರರಿರುವ ಬಹುಭಾಷಾ ಬಹುಸಂಸ್ಕೃತಿಯ ವಾತಾವರಣವಿರುವ ಕ್ಷೇತ್ರ ಇದು. ಕೆಂಗಲ್‌ ಹನುಮಂತಯ್ಯ ನ್ಯಾ| ಕೆ.ಎಸ್‌. ಹೆಗ್ಡೆ, ಆರ್‌. ಗುಂಡೂರಾವ್‌ ಮುಂತಾದ ಘಟಾನುಘಟಿಗಳು, ಟಿ.ಆರ್‌. ಶಾಮಣ್ಣ ಹಾಗೂ ವಿ.ಎಸ್‌. ಕೃಷ್ಣ ಆಯ್ಕೆ ಹೊಂದಿದ ಕ್ಷೇತ್ರ ಇದು.

ಟಾಪ್ ನ್ಯೂಸ್

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.