ಬೋಟ್ ನೆಕ್ ಡಿಸೈನ್ : ವೋಟ್ ಫಾರ್ ಬೋಟ್
Team Udayavani, Apr 10, 2019, 9:15 AM IST
ಬೋಟ್ ನೆಕ್ ಡಿಸೈನ್ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ? ಎಲ್ಲರಿಗೂ ಗೊತ್ತಿರುವ ದೋಣಿ ಆಕಾರದ, ಈ ಕತ್ತಿನ ವಿನ್ಯಾಸ ಬೇಸಗೆಯಲ್ಲಿ ಟ್ರೆಂಡ್ ಆಗುತ್ತಿದೆ. ಮೈಗಂಟುವ ಉಡುಗೆಯಲ್ಲಿ ಕಾಲರ್ ಇದ್ದರೆ ಅಥವಾ ಕ್ಲೋಸ್ಡ್ ನೆಕ್ ಇದ್ದರೆ, ಸೆಕೆ ಇನ್ನಷ್ಟು ಜಾಸ್ತಿ ಆದಂತೆ ಭಾಸವಾಗುತ್ತದೆ. ಅದಕ್ಕೇ, ತೀರಾ ಡೀಪ್ ಇಲ್ಲದೆ ಇರುವ ನೆಕ್ ಡಿಸೈನ್ ಅನ್ನು ಮಹಿಳೆಯರು ಇಷ್ಟ ಪಡುತ್ತಾರೆ. ಅವುಗಳಲ್ಲಿ ಒಂದು ಈ ಬೋಟ್ ನೆಕ್ ವಿನ್ಯಾಸ.
ಚೂಡಿದಾರ, ಉದ್ದ ಲಂಗದ ರವಿಕೆ, ಸಲ್ವಾರ್ ಕಮೀಜ್, ಕುರ್ತಿ, ಸೀರೆಯ ರವಿಕೆ, ಘಾಗ್ರಾದ ಚೋಲಿ, ಲಂಗ ದಾವಣಿಯ ರವಿಕೆಯಂಥ ಸಾಂಪ್ರದಾಯಿಕ ಉಡುಗೆ ಮಾತ್ರವಲ್ಲದೆ ಟಿ-ಶರ್ಟ್‌ಗಳು, ಕ್ಯಾಶುವಲ್ಸ್, ಬಟನ್ (ಗುಂಡಿ) ಇರುವ ಅಂಗಿ, ಫಾರ್ಮಲ್ಸ್, ಕ್ರಾಪ್ ಟಾಪ್, ಸ್ವೆಟರ್, ಜಾಕೆಟ್, ಜಿಮ್‌ವೇರ್, ಡ್ರೆಸ್, ಬೀಚ್ ವೇರ್, ಈಜುಡುಗೆ, ಗೌನ್‌ಗಳು, ಪಾರ್ಟಿವೇರ್, ವೇರ್ಸ್ ಕೋಟ್‌ನಂಥ ಪಾಶ್ಚಾತ್ಯ ಉಡುಪಿನಲ್ಲೂ ಈ ಶೈಲಿಯನ್ನು ಬಳಸಲಾಗುತ್ತಿದೆ.
ಈ ರೀತಿಯ ಕತ್ತಿನ ವಿನ್ಯಾಸ ಇರುವ ಉಡುಗೆ ಜೊತೆ ಸರ, ಹಾರ ಅಥವಾ ಮಾಲೆಯನ್ನು ತೊಡಬಹುದು, ಅಥವಾ ತೊಡದೆ ಇರಬಹುದು ಕೂಡ. ಇದರ ವಿನ್ಯಾಸ ಸರಳವಿದ್ದರೂ ವಿಶಿಷ್ಟವಾಗಿರುವ ಕಾರಣ, ಕಟ್ಟಿಗೆ ಆಭರಣ ತೊಟ್ಟರೂ ಚೆನ್ನ, ತೊಡದಿದ್ದರೂ ಚೆನ್ನ! ಬಹುತೇಕ ಎಲ್ಲ ಚಲನಚಿತ್ರ ಹಾಗೂ ಧಾರಾವಾಹಿ ನಟಿಯರು, ಈ ರೀತಿಯ ವಿನ್ಯಾಸ ಉಳ್ಳ ಉಡುಗೆ ಜೊತೆ ದೊಡ್ಡ ಗಾತ್ರದ ಕಿವಿಯೋಲೆ ಅಥವಾ ಜುಮ್ಕಿ ತೊಟ್ಟು, ಕತ್ತನ್ನು ಬೋಳಾಗಿಯೇ ಇಡುತ್ತಾರೆ. ಆಗ ಎಲ್ಲರ ಗಮನ ಕಿವಿಯ ಆಭರಣದ ಮೇಲಿರುತ್ತದೆ ಎಂಬುದು ಅವರ ಹಾಗೂ ವಿನ್ಯಾಸಕಾರರ ನಂಬಿಕೆ. ಮಹಿಳೆಯರಿಗೆ ಈ ಬೋಟ್ ನೆಕ್ ವಿನ್ಯಾಸ ಅದೆಷ್ಟು ಇಷ್ಟ ಎಂದರೆ, ಹೆಚ್ಚಿನವರು ತಮ್ಮ-ತಮ್ಮ ಮದುವೆಯ ಸೀರೆಗೂ ಇಂಥ ವಿನ್ಯಾಸ ಇರುವ ರವಿಕೆ ಹೊಲಿಸಿ ತೊಡುತ್ತಾ ಬಂದಿ¨ªಾರೆ.
ನಾನಾ ಥರ
ಬೋಟ್ ನೆಕ್ ಉಡುಗೆಯಲ್ಲಿ ತೋಳುಗಳು ಇಲ್ಲದ ಅಂದರೆ ಸ್ಲೀವ್‌ಲೆಸ್ ಆಯ್ಕೆಗಳು, ಕೋಲ್ಡ… ಶೋಲ್ಡರ್ ಆಯ್ಕೆಗಳು, ಆಫ್ ಶೋಲ್ಡರ್ ಆಯ್ಕೆಗಳು, ಮೆಗಾ ಸ್ಲೀವ್ಸ್, ಥ್ರೀ ಫೋರ್ಥ್ (ಮುಕ್ಕಾಲು) ಸ್ಲಿವ್ಸ್, ಕ್ಯಾಪ್ ಸ್ಲಿವ್ಸ್, ಪಫ್ ಸ್ಲಿವ್ಸ್, ಲಾಂಗ್ ಸ್ಲಿವ್ಸ್ (ಉದ್ದ ತೋಳಿನ ಕೈ), ಫ್ಲೇರ್ಡ್ ಸ್ಲಿವ್ಸ್, ಬೆಲ್ ಬಾಟಮ್ ಸ್ಲಿವ್ಸ್ ನಂಥ ಆಯ್ಕೆಗಳೂ ಇವೆ. ಅಂದಹಾಗೆ, ಈ ಬೇಸಿಗೆಯಲ್ಲಿ, ನೀವು ಯಾವ ಥರದ ಬೋಟ್ ನೆಕ್ ವಿನ್ಯಾಸದ ಉಡುಗೆ ತೊಡುತ್ತೀರಾ?
– ಅದಿತಿಮಾನಸ ಟಿ. ಎಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.