ಟ್ವಿಟ್ಟರ್ ನಲ್ಲಿ ಗೌತಮ್ ಗಂಭೀರ್ ಬ್ಲಾಕ್ ಮಾಡಿದ ಮೆಹಬೂಬ
Team Udayavani, Apr 10, 2019, 10:11 AM IST
ನವದೆಹಲಿ: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಆರ್ಟಿಕಲ್ 370ನ್ನು ರದ್ದುಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪರ ವಿರೋಧ ಚರ್ಚೆಗಳು ಜೋರಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ನಲ್ಲಿ ಕಾಶ್ಮೀರ ಮಾಜೀ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರೊಂದಿಗೆ ಟ್ಟಿಟ್ಟರ್ ವಾರ್ ನಡೆಸಿದ ಮಾಜೀ ಕ್ರಿಕೆಟಿಗ ಹಾಗೂ ಬಿಜೆಪಿ ನಾಯಕ ಗೌತಮ್ ಗಂಭೀರ್ ಅವರ ಅಕೌಂಟ್ ಅನ್ನು ಮುಫ್ತಿ ಅವರು ಬ್ಲಾಕ್ ಮಾಡಿದ್ದಾರೆ.
ಕಾಶ್ಮೀರ ಕಣಿವೆಗೆ ಸೇರಿದ ರಾಜಕಾರಣಿಗಳಾಗಿರುವ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿ ಅವರು ಈ ಬಾರಿಯ ಲೋಕಸಭಾ ಚುನಾವಣೆಗಳಿಗೆ ಸ್ಪರ್ಧೆ ಮಾಡುವುದಕ್ಕೆ ತಡೆ ನೀಡಬೇಕು ಎಂದು ಬಿಜೆಪಿಯು ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದನ್ನು ಮುಫ್ತಿ ಅವರು ತಮ್ಮ ಟಿಟ್ಟರ್ ಅಕೌಂಟ್ ನಲ್ಲಿ ಬಲವಾಗಿ ವಿರೋಧಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಫ್ತಿ ಹಾಗೂ ಗೌಂಭೀರ್ ನಡುವೆ ಟ್ವಿಟ್ಟರ್ ಚಕಮಕಿ ನಡೆದಿತ್ತು. ಕಣಿವೆ ರಾಜ್ಯದ ರಾಜಕಾರಣಿಗಳು ಸ್ಪರ್ಧಾತ್ಮಕ ಚುನಾವಣೆಯಲ್ಲಿ ಸ್ಪರ್ಧಿಸುವುದು ‘ಸಂವಿಧಾನ ವಿರೋಧಿ’ ಎಂಬುದು ಬಿಜೆಪಿಯ ವಾದವಾಗಿದೆ.
‘ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಹೋರಾಡುವುದು ಸಮಯ ವ್ಯರ್ಥ ಮಾಡಿದಂತೆ. ಯಾವುದಕ್ಕೂ ಬಿಜೆಪಿ 370ನೇ ವಿಧಿಯನ್ನು ರದ್ದುಮಾಡುವವರೆಗೆ ಕಾಯಿರಿ, ಆವಾಗ ಭಾರತೀಯ ಸಂವಿಧಾನ ನಮಗೆ ಅನ್ವಯವೇ ಆಗುವುದಿಲ್ಲವಾಗಿರುವ ಕಾರಣ ಆಗ ನಾವು ಚುನಾವಣೆಗಳಲ್ಲಿ ಸ್ಪರ್ಧಿಸುವುದು ತನ್ನಿಂತಾನೆ ನಿಷೇಧಗೊಳ್ಳುತ್ತದೆ’ ಎಂದು ಮುಫ್ತಿ ಅವರು ಟ್ವೀಟ್ ಮಾಡಿದ್ದರು.
ಮುಫ್ತಿ ಅವರ ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ಗೌತಮ್ ಗಂಭೀರ್ ಅವರು ‘ಇದು ಭಾರತ, ನಿಮಗೆ ಬೇಕಾದ ಹಾಗೆ ಅಳಿಸಿ ಹಾಕಲು ಕಪ್ಪು ಚುಕ್ಕೆಯಲ್ಲ’ ಎಂದು ಪ್ರತಿಕ್ರಿಯಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಮುಫ್ತಿ ಅವರು ‘ಬಿಜೆಪಿಯಲ್ಲಿ ನಿಮ್ಮ ಹೊಸ ಇನ್ನಿಂಗ್ಸ್ ನಿಮ್ಮ ಕ್ರಿಕೆಟ್ ಜೀವನದಷ್ಟು ಕೆಟ್ಟದಾಗಿರಲಿಕ್ಕಿಲ್ಲ ಎಂದು ಆಶಿಸುತ್ತೇನೆ’ ಎಂದು ರಿಟ್ವೀಟ್ ಮಾಡಿದ್ದರು. ಇದಕ್ಕೆ ಗಂಭೀರ್ ಅವರು ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದರು ಮತ್ತು ಆ ಬಳಿಕ ಮುಫ್ತಿ ಅವರು ಗಂಬೀರ್ ಅವರ ಅಕೌಂಟ್ ಅನ್ನು ಬ್ಲಾಕ್ ಮಾಡಿದ್ದರು. ಗೌತಮ್ ಅವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ 90 ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್ ಹೊಂದಿದ್ದಾರೆ.
Most welcome @MehboobaMufti Ma’am, happy to be blocked by a callous individual. By the way, at the time of writing this tweet there are 1,365,386,456 Indians. How will you block them?
— Gautam Gambhir (@GautamGambhir) April 9, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.