ಜಲ್ಲಿಗುಡ್ಡೆ: ಉಚಿತ ಯೋಗ ಶಿಬಿರ
Team Udayavani, Apr 11, 2019, 6:05 AM IST
ಮಹಾನಗರ: ಬಜಾಲ್, ಜಲ್ಲಿಗುಡ್ಡೆ, ಕೈಡೇಲ್ನಲ್ಲಿ ಶ್ರೀ ನಾಗ ರಕ್ತೇಶ್ವರಿ ಗುಳಿಗ ಸನ್ನಿಧಿ ಮತ್ತು ಚತುಃಪವಿತ್ರ ನಾಗಮಂಡಲ ಸಮಿತಿ ವತಿಯಿಂದ ಎ. 13ರಂದು ನಡೆಯುವ ನಾಗಮಂಡಲದ ಪ್ರಯುಕ್ತ ಉಚಿತ ಯೋಗ ಶಿಬಿರ ನಡೆಯಿತು.
ಸಮಿತಿ ಕಾರ್ಯಧ್ಯಕ್ಷ ಡಾ| ಜಗ ದೀಶ್ ಶೆಟ್ಟಿ ಬಿಜೈ ಅವರ ನೇತೃತ್ವದಲ್ಲಿ ಯೋಗ ಶಿಬಿರವನ್ನು ಸನ್ನಿಧಿಯ ಪರಿಸರದಲ್ಲಿ ಏರ್ಪಡಿಸಲಾಯಿತು. ಸಮಿತಿ ಗೌರವಾಧ್ಯಕ್ಷ ಸುರೇಶ್ ರಾವ್ ಉದ್ಘಾಟಿಸಿದರು. ಸುಮಾರು 150 ಮಿಕ್ಕಿ ಶಿಬಿರಾರ್ಥಿಗಳು ಭಾಗವಹಿಸಿದರು.
ಸಮಾರೋಪದಲ್ಲಿ ಸಮಿತಿ ಅಧ್ಯಕ್ಷ ಯಶವಂತ ಶೆಟ್ಟಿ ಪಡುಬಿಡು, ಶ್ರೀ ಅಂಬಾ ಭವಾನಿ ಭಜನಾ ಮಂದಿರದ ಅಧ್ಯಕ್ಷ ಹರಿಕೇಶವ್ ಜಾಧವ್ ಮಾತನಾಡಿದರು.
ಸಮಿತಿ ಗೌರವಾಧ್ಯಕ್ಷ ಸುರೇಶ್ ಲಾಡ್ ಅಳಪೆ, ಕಾರ್ಯದರ್ಶಿ ರಾಜೇಶ್ ಪಾಟೀಲ್, ಸಂಚಾಲಕಿ ವತ್ಸಲಾ ಮಲ್ಲಿ, ನಾಗ ಸ್ಥಾನದ ಮುಖ್ಯಸ್ಥ ದಾಮೋದರ ಜಗತ್ತಾಪ್, ರಂಗನಾಥ್ ಜಗತ್ತಾಪ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.