ಅರಮನೆಯೊಳಗಿನ ಕಿತ್ತಳೆ ಮರದ ರಹಸ್ಯ
ಹಿಸ್ಟರಿ ಕಥೆ
Team Udayavani, Apr 11, 2019, 6:30 AM IST
ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೊಂದು ಪುಟ್ಟ ಜಾಗ
ಅರಮನೆ ಎಂದರೆ ವಜ್ರ ವೈಢೂರ್ಯಗಳಿಂದ ಅಲಂಕೃತಗೊಂಡ ಸಿಂಹಾಸನ, ಕೊಪ್ಪರಿಗೆ ತುಂಬಾ ಬಂಗಾರದ ಆಭರಣಗಳು, ರಾಜಾಸ್ಥಾನ, ಅಂತಃಪುರ, ಸುಂದರ ಉದ್ಯಾನವನ, ಸುವಾಸನಾಯುಕ್ತ ಗಾಳಿ ಮುಂತಾದ ಶ್ರೀಮಂತ ಸುಮಧುರ ಕಲ್ಪನೆ ಕಣ್ಣಮುಂದೆ ಬರುತ್ತದೆ. ಆದರೆ, ಅದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿ 17 ಶತಮಾನದ ವರ್ಸ್ಯೆಲ್ಸ್ ಅರಮನೆಯದಾಗಿತ್ತು. ಇಂದು ಈ ಅರಮನೆ ಅದ್ಧೂರಿತನ ಮತ್ತು ವಾಸ್ತುಶಿಲ್ಪದ ಕಾರಣ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ, 17ನೇ ಶತಮಾನದಲ್ಲಿ ಹಾಗಿರಲಿಲ್ಲ. ಅರಮನೆಯಲ್ಲಿ ಶೌಚಾಲಯಗಳ ಕೊರತೆ ಇದ್ದವಂತೆ. ಹೀಗಾಗಿ ಅರಮನೆಗೆ ಬಂದವರು ಸಿಕ್ಕ ಸಿಕ್ಕ ಮೂಲೆಗಳೆಲ್ಲಾ ಶೌಚಕ್ಕೆ ಹೋಗುತ್ತಿದ್ದರಂತೆ. ಎರಡು ದಿನಗಳಿಗೊಮ್ಮೆ ಶೌಚವನ್ನು ಶುಚಿಗೊಳಿಸಲೆಂದೇ ಪ್ರತ್ಯೇಕ ಸೇವಕರನ್ನು ನೇಮಿಸಲಾಗಿತ್ತು. ಆದರೆ, ಇದರಿಂದ ಪರಿಸ್ಥಿತಿ ಸುಧಾರಿಸಿರಲಿಲ್ಲ. ಅರಮನೆಯಲ್ಲಿ ಪ್ರತಿನಿತ್ಯ ಔತಣಕೂಟಗಳಿರುತ್ತಿದ್ದುದರಿಂದ ಶೌಚಕ್ಕೆ ಹೋಗುವವರ ಸಂಖ್ಯೆ ಹೆಚ್ಚಿತ್ತು. ಹೀಗಾಗಿ ಅರಮನೆ ಗಬ್ಬು ನಾತ ಬೀರುತ್ತಿತ್ತು. ರಾಜ 14ನೇ ಲೂಯಿ ಪ್ರತಿನಿತ್ಯ ಶುಚಿಗೊಳಿಸುವಂತೆ ಆಜ್ಞೆ ಮಾಡಿದ. ಅಲ್ಲದೆ, ದುರ್ನಾತವನ್ನು ಮರೆಮಾಚಲು ಕಿತ್ತಳೆ ಮರಗಳನ್ನು ಅರಮನೆ ಒಳಗೆ ಬೆಳೆಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.