ಜಲಿಯಾನ್‌ವಾಲಾ ಬಾಗ್ : ಬ್ರಿಟಿಷ್ ಭಾರತೀಯ ಇತಿಹಾಸದ ನಿರ್ಲಜ್ಜ ಕಲೆ: ತೆರೆಸಾ ಮೇ
Team Udayavani, Apr 10, 2019, 7:30 PM IST
ಲಂಡನ್ : ಜಲಿಯಾನ್‌ವಾಲಾ ಬಾಗ್ ಹತ್ಯಾಕಾಂಡ ಬ್ರಿಟಿಷ್ ಭಾರತೀಯ ಇತಿಹಾಸದಲ್ಲಿನ ಅತ್ಯಂತ ನಿರ್ಲಜ್ಜ ಕಲೆ ಎಂದು ಬ್ರಿಟನ್ ಪ್ರಧಾನಿ ತೆರೆಸಾ ಮೇ ಇಂದು ಬುಧವಾರ ಹೇಳಿದ್ದಾರೆ.
ಸರಿಸುಮಾರು ನೂರು ವರ್ಷಗಳ ಹಿಂದೆ, 1919ರ ಎಪ್ರಿಲ್ 13ರಂದು ಪಂಜಾಬ್‌ನ ಜಲಿಯಾನ್‌ವಾಲಾ ಬಾಗ್ ನಲ್ಲಿ ಜನರಲ್ ರೆಜಿನಾಲ್ಡ್ ಡಯರ್ ಅತ್ಯಂತ ನಿರ್ದಯತೆಯಿಂದ ನಡೆಸಿದ್ದ ನೂರಾರು ಭಾರತೀಯರ ನರಮೇಧ ಮತ್ತು ಸಾವಿರಾರು ಜನರು ಗುಂಡೇಟಿನಿಂದ ಗಾಯಗೊಳ್ಳುವಂತೆ ಮಾಡಿದ ಹೀನಕೃತ್ಯಕ್ಕೆ ಬ್ರಿಟನ್ ಭಾರತೀಯರಲ್ಲಿ ಕ್ಷಮೆ ಯಾಚಿಸಬೇಕೆಂಬ ಒತ್ತಡ ಹೆಚ್ಚುತ್ತಿದೆ.
ಈ ನಡುವೆ ಬ್ರಿಟನ್ ಪ್ರಧಾನಿ ತೆರೆಸಾ ಮೇ ಅವರು, “ಭಾರತೀಯ ಬ್ರಿಟಿಷ್ ಇತಿಹಾಸದಲ್ಲಿ ಇದೊಂದು ಅತ್ಯಂತ ದುರದೃಷ್ಟಕರ ಘಟನೆ; ನಾವು ಈ ದುರಂತಕ್ಕೆ ಮತ್ತು ಇದರಿಂದ ತೀವ್ರ ವೇದನೆಗೆ ಗುರಿಯಾದವರ ಬಗ್ಗೆ ವಿಷಾದ ಹೊಂದಿದ್ದೇವೆ’ ಎಂದು ಹೇಳಿದರು.
ಒಂದು ದಿನದ ಹಿಂದಷ್ಟೇ ಬ್ರಿಟನ್‌ನ ವಿದೇಶ ಸಚಿವ ಮಾರ್ಕ್ ಫೀಲ್ಡ್ ಅವರು, “ಹಿಂದೆ ಆಗಿ ಹೋಗಿರುವ ನಿರ್ಲಜ್ಜ ಘಟನೆಗಳನ್ನು ಕೆಂಪಕ್ಷರದಲ್ಲಿ ಕಾಣಿಸಬೇಕಾಗಿದೆ; ಆದರೆ ಬ್ರಿಟನ್ ವಸಾಹತುಗಳಲ್ಲಿ ನಡೆದಿರುವ ಘಟನೆಗಳಿಗೆ ಪದೇ ಪದೇ ಕ್ಷಮೆಯಾಚನೆ ಮಾಡುವುದರಿಂದ ನಮಗೆ ಆರ್ಥಿಕ ತೊಂದರೆಗಳಿಗೆ ಕಾರಣವಾಗುತ್ತದೆ; ಭಾರತದೊಂದಿಗಿನ ಸಂಬಂಧಗಳು ಈಗಿನ ವಿಷಯಗಳಿಗೆ ಸಂಬಂಧಿಸಿ ಇರಬೇಕೇ ಹೊರತು ಗತಿಸಿ ಹೋಗಿರುವ ನಿರ್ಲಜ್ಜ ಘಟನೆಗಳಿಂದ ಪ್ರಭಾವಿತವಾಗಬೇಕಾದ ಅಗತ್ಯ ಇರುವುದಿಲ್ಲ’ ಎಂದು ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
China Badminton: ಚಿರಾಗ್- ಸಾತ್ವಿಕ್ ಸೆಮಿಫೈನಲ್‌ಗೆ
Kasragodu: ನರ್ಸಿಂಗ್ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್ ತನಿಖೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.