“ಸಿನೆಮಾಗಳು ದಾರಿ ತಪ್ಪಿಸುವಂತಿರಬಾರದು’
Team Udayavani, Apr 11, 2019, 6:00 AM IST
ನೆಹರೂನಗರ: ಚಲನಚಿತ್ರವು ಒಂದು ಪರಿಣಾಮಕಾರಿ ಮಾಧ್ಯಮ. ಸಿನೆಮಾಗಳಲ್ಲಿ ವಾಸ್ತವತೆ ಮುಖ್ಯ. ಜನರನ್ನು ದಾರಿ ತಪ್ಪಿಸುವಂತಹ ಸನ್ನಿವೇಶಗಳು ಸಿನೆಮಾದಲ್ಲಿ ಇರಬಾರದು ಎಂದು ವಿವೇಕಾನಂದ ಪದವಿ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಶಂಕರನಾರಾಯಣ ಭಟ್ ಹೇಳಿದರು.
ಕಾಲೇಜಿನ ವಾಣಿಜ್ಯ ಮತ್ತು ಆಡಳಿತ ವಿಭಾಗದ ಆಶ್ರಯದಲ್ಲಿ ತೃತೀಯ ಬಿ.ಬಿ.ಎ. ಮತ್ತು ಬಿ.ಕಾಂ. ವಿದ್ಯಾರ್ಥಿಗಳು ನಿರ್ಮಿಸಿದ ಸಮರ ಕಿರುಚಿತ್ರ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಹಿಡಿತ ಇರಬೇಕು. ಸೃಜನಶೀಲತೆಯಿಂದ ಕೆಲಸ ಮಾಡಿದರೆ ಯಶಸ್ಸು ಸಾಧ್ಯ. ನಾವು ಕೈಗೊಳ್ಳುವ ಪ್ರತಿಯೊಂದು ಕಾರ್ಯಗಳಲ್ಲೂ ಜನರಿಗೆ ಸಂದೇಶವನ್ನು ನೀಡಬೇಕು. ಇದರ ಮುಖಾಂತರ ಸಮಾಜಕ್ಕೆ ಉತ್ತಮ ಮಾಹಿತಿ ರವಾನೆ ಯಾಗಬೇಕು ಎಂದರು.
ಅಭಿವ್ಯಕ್ತಿ ಮಾಧ್ಯಮ
ಕಿರುಚಿತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಕಾಲೇಜಿನ ವಾಣಿಜ್ಯ ಮತ್ತು ಆಡಳಿತ ವಿಭಾಗದ ಮುಖ್ಯಸ್ಥ ಪ್ರೊ| ವೆಂಕಟರಮಣ ಭಟ್ ಮಾತನಾಡಿ, ಸಿನೆಮಾ ಒಂದು ಅಭಿವ್ಯಕ್ತಿ ಮಾಧ್ಯಮ. ಬಹಳ ಪ್ರಬಲವಾಗಿ ಅಂದುಕೊಂಡ ವಿಷಯ ವನ್ನು ದೃಶ್ಯ ಹಾಗೂ ಶ್ರವ್ಯ ಮಾಧ್ಯಮದಲ್ಲಿ ಹೇಳುವುದೇ ಸಿನೆಮಾ ಎಂದರು.
ಕಿರುಚಿತ್ರದ ನಿರ್ದೇಶಕ ತೃತೀಯ ಬಿಬಿಎ ವಿದ್ಯಾರ್ಥಿ ಪ್ರೇಮ್‌ರಾಜ್ ಮಾತನಾಡಿ, ಕೆಲವೇ ಮಂದಿಯಿಂದ ಶುರುವಾದ ರಾಯಲ್ ಕ್ರಿಯೇಷನ್ಸ್ ಎನ್ನುವ ತಂಡ ಇದೀಗ ಸದೃಢವಾಗಿ ಬೆಳೆದಿದೆ. ಮಾದರಿಯಾಗುವಂತಹ ವಿಷಯ ವನ್ನಿಟ್ಟುಕೊಂಡು ಸಮರ ಚಿತ್ರವನ್ನು ಮಾಡಿದ್ದೇವೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್ ವಿಲ್ಸನ್ ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಕಿರುಚಿತ್ರದ ಸಂಕಲನಕಾರ ತೃತೀಯ ಬಿಬಿಎ ವಿದ್ಯಾರ್ಥಿ ಬ್ರಿಜೇಶ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ಶ್ರೀಕಾಂತ್ ಪೂಜಾರಿ ಸ್ವಾಗತಿಸಿ, ವಿದ್ಯಾರ್ಥಿನಿ ಸತ್ಯಶ್ರೀ ವಂದಿಸಿ, ವಿದ್ಯಾರ್ಥಿ ಅಖೀಲೇಶ್ ಟಿ. ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.