ಲೋವೋಲ್ಟೆಜ್: ಬಳ್ಕೂರು ಕುದ್ರು ಜನತೆ ಹೈರಾಣು
Team Udayavani, Apr 11, 2019, 6:30 AM IST
ಬಳ್ಕೂರು: ಕುಂದಾಪುರ ಮೆಸ್ಕಾಂ ವ್ಯಾಪ್ತಿಯ ಬಳ್ಕೂರು ಕುದ್ರುವಿನಲ್ಲಿರುವ 125 ಮನೆಗಳ ಜನರು ವಿದ್ಯುತ್ ಲೋವೋಲ್ಟೆàಜ್ ಸಮಸ್ಯೆಯಿಂದಾಗಿ ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 10 -15 ವರ್ಷಗಳಿಂದ ಈ ಸಮಸ್ಯೆಯಿದ್ದರೂ ಇನ್ನು ಪರಿಹಾರ ಕಾಣದಂತಾಗಿದೆ.
ಬಳ್ಕೂರು ಗ್ರಾಮದ ಬಳ್ಕೂರು ಕುದ್ರುವಿನಲ್ಲಿ 125 ಮನೆಗಳಿವೆ. ಸಾವಿರಾರು ಮಂದಿ ನೆಲೆಸಿದ್ದು, ಬೇರೆಲ್ಲ ಮೂಲ ಸೌಕರ್ಯ ಗಳಿದ್ದರೂ ವಿದ್ಯುತ್ ಲೋವೋಲ್ಟೆಜ್ ಸಮಸ್ಯೆಯೇ ಈ ಊರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳಿಗೆ ಇಲ್ಲಿನ ಜನರು ಮನವಿ ಮಾಡಿದ್ದರೂ, ಸಹ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾವವಾಗಿತ್ತು. ಗ್ರಾ.ಪಂ.ನಿಂದ ಮೆಸ್ಕಾಂಗೆ ಪ್ರಸ್ತಾವನೆ ಹೋದರೂ ಇಲ್ಲಿನ ಜನರ ಸಮಸ್ಯೆ ಮಾತ್ರ ಇನ್ನೂ ಬಗೆ ಹರಿದಿಲ್ಲ.
15 ವರ್ಷದಿಂದ ಸಮಸ್ಯೆ
ಹಿಂದೆ ಈ ಭಾಗದಲ್ಲಿ ಸ್ವಲ್ಪ ಕಡಿಮೆ ಮನೆಗಳಿದ್ದವು. ಆದರೆ ಈಗ 10 ವರ್ಷಗಳಿಂದ ಇಲ್ಲಿರುವ ಮನೆಗಳ ಸಂಖ್ಯೆ ಹೆಚ್ಚಾಗಿದ್ದು, ಅದರಂತೆ ವಿದ್ಯುತ್ ಬಳಕೆದಾರರು ಕೂಡ ಹೆಚ್ಚಾಗಿದ್ದಾರೆ. ಆದರೆ ಈಗಲೂ ಆಗಿನ ಟ್ರಾನ್ಸ್‌ಫರ್ ಬಾಕ್ಸ್‌ನಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಇದರಿಂದ ಲೋವೋಲ್ಟೆಜ್ ಸಮಸ್ಯೆ ಉದ್ಭವಿಸಿದೆ ಎನ್ನುವುದು ಇಲ್ಲಿನ ಜನರ ಅಭಿಪ್ರಾಯ.
ಸಂಪರ್ಕ ನೀಡಿಲ್ಲ
ಇಲ್ಲಿನ ಜನರ ಮನವಿಗೆ ಸ್ಪಂದಿಸಿ, ಕಳೆದ 6-7 ತಿಂಗಳ ಹಿಂದೆ ಬಳ್ಕೂರು ಕುದ್ರುವಿನಲ್ಲಿ ಹೊಸದಾಗಿ ಟ್ರಾನ್ಸ್‌ಫರ್ ಬಾಕ್ಸ್‌ನ್ನು ಹಾಕಲಾಗಿದೆ. ಆದರೆ ಅದಕ್ಕಿನ್ನು ಸಂಪರ್ಕ ಭಾಗ್ಯ ಮಾತ್ರ ಒದಗಿಸಿಲ್ಲ. ಅದಕ್ಕೆ ವಿದ್ಯುತ್ ಸಂಪರ್ಕ ನೀಡಿದರೆ ಇಲ್ಲಿನ ಜನರ ವಿದ್ಯುತ್ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಣೆ ಯಾಗಬಹುದು ಎನ್ನುತ್ತಾರೆ ಗ್ರಾಮಸ್ಥರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.